ಬೆಂಗಳೂರು:
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಕಾನೂನು ತೊಡಕುಗಳು ಮತ್ತಷ್ಟು ಹೆಚ್ಚಾಗಿವೆ.
ಜೈಲಿನೊಳಗೆ ಅಕ್ರಮವಾಗಿ ಮೊಬೈಲ್ ಫೋನ್ ಬಳಸಿದ್ದಾರೆಂಬ ಗಂಭೀರ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ನಡೆಸಿದ ತೀವ್ರ ವಿಚಾರಣೆ ವೇಳೆ ಪ್ರಜ್ವಲ್ ಮಹತ್ವದ ಸತ್ಯವೊಂದನ್ನು ಬಾಯಬಿಟ್ಟಿದ್ದಾರೆ.
ಬ್ಯಾರಕ್‌ನಲ್ಲಿದ್ದ ಮೊಬೈಲ್ ಫೋನ್ ಬಳಸಿ ತಾವೇ ಸ್ವತಃ ತಮ್ಮ ತಂದೆ ಎಚ್.ಡಿ.
ವಿಚಾರಣೆಯಲ್ಲಿ ಬಯಲಾದ ಅಂಶಗಳೇನು.?
ಜೈಲಿನೊಳಗೆ ಸಿಕ್ಕಿಬಿದ್ದ ಮೊಬೈಲ್ ಮೂಲಕ ಯಾರ ಬಳಿಗೆ ಮಾತನಾಡಲಾಗಿತ್ತುಎಂಬ ಗುಟ್ಟನ್ನು ಪೊಲೀಸರು ಬಿಡಿಸಿದ್ದಾರೆ.
ಆದರೆ, ಕಟ್ಟುನಿಟ್ಟಿನ ಭದ್ರತೆ ಹಾಗೂ ಕಾವಲುಗಾರರ ಕಣ್ಣುತಪ್ಪಿಸಿ ಈ ಸ್ಮಾರ್ಟ್‌ಫೋನ್ ಜೈಲಿನೊಳಗೆ ಹೇಗೆ ಪ್ರವೇಶಿಸಿತು ಮತ್ತು ಅದನ್ನು ಪೂರೈಸಿದವರು ಯಾರು ಎಂಬ ಪ್ರಮುಖ ರಹಸ್ಯದ ಬಗ್ಗೆ ಮಾತ್ರ ಪ್ರಜ್ವಲ್ ಯಾವುದೇ ಮಾಹಿತಿ ನೀಡದೆ ಮೌನ ವಹಿಸಿದ್ದಾರೆ ಎಂದು ತಿಳಿದುಬಂದಿದೆ.
ಇದೇ ಪ್ರಕರಣದಲ್ಲಿ ಸಹ-ಆರೋಪಿಯಾಗಿರುವ ಪ್ರತಾಪ್ ಎಂಬಾತನೂ ಕೂಡ ತಾನು ಯಾವುದೇ ಮೊಬೈಲ್ ತಂದಿಲ್ಲ ಎಂದು ಹೇಳುತ್ತಿದ್ದು, ಇಬ್ಬರ ಹೇಳಿಕೆಗಳಲ್ಲಿ ಭಿನ್ನತೆ ಕಂಡುಬಂದಿದೆ.
ನ್ಯಾಯಾಂಗ ಬಂಧನ ವಿಸ್ತರಣೆ
ಎರಡು ದಿನಗಳ ಪೊಲೀಸ್ ಕಸ್ಟಡಿ ಮುಕ್ತಾಯಗೊಂಡ ಬಳಿಕ ಪೊಲೀಸರು ಪ್ರಜ್ವಲ್ ರೇವಣ್ಣ ಹಾಗೂ ಪ್ರತಾಪ್ ಅವರನ್ನು ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ನ್ಯಾಯಾಲಯವು ಇಬ್ಬರನ್ನೂ ಮುಂದಿನ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿ ಆದೇಶ ಹೊರಡಿಸಿದೆ.
ಮುಂದಿನ ದಿನಗಳಲ್ಲಿ ಎಫ್‌ಎಸ್‌ಎಲ್ (FSL) ವರದಿ ಕೈ ಸೇರಿದ ಬಳಿಕ ತನಿಖೆಗೆ ಮತ್ತಷ್ಟು ಸ್ಪಷ್ಟತೆ ಸಿಗಲಿದ್ದು, ಸತ್ಯಾಸತ್ಯತೆ ಹೊರಬರಲಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.


