Public Prime News

CLEAR VISION, TRUE MISSION

ಕರಾವಳಿಯ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಕುಂದಾಪುರದಲ್ಲಿ ಸೆ. 17 ಮತ್ತು 18ರಂದು ಬೃಹತ್ ‘ಜಾಬ್ಸ್ ಎಕ್ಸ್‌ಪ್ರೆಸ್ 2026’ ಉದ್ಯೋಗ ಮೇಳ
kannadanadi

ಕರಾವಳಿಯ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಕುಂದಾಪುರದಲ್ಲಿ ಸೆ. 17 ಮತ್ತು 18ರಂದು ಬೃಹತ್ ‘ಜಾಬ್ಸ್ ಎಕ್ಸ್‌ಪ್ರೆಸ್ 2026’ ಉದ್ಯೋಗ ಮೇಳ

Public Prime News

Public Prime News

Reported by Public Prime News

ಕುಂದಾಪುರ:

ಕರಾವಳಿ ಕರ್ನಾಟಕದ ಯುವಜನರಿಗೆ ಸ್ವಾವಲಂಬನೆ ಮತ್ತು ಉಜ್ವಲ ವೃತ್ತಿಜೀವನ ರೂಪಿಸಿಕೊಳ್ಳಲು ಬೃಹತ್ ವೇದಿಕೆ ಸಿದ್ಧಗೊಂಡಿದೆ. ಕುಂದಾಪುರದ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MIT)ಯಲ್ಲಿ ಮುಂಬರುವ ಸೆಪ್ಟೆಂಬರ್ 17 ಮತ್ತು 18ರಂದು ಪ್ರಾದೇಶಿಕ ಮಹತ್ವದ ‘ಜಾಬ್ಸ್ ಎಕ್ಸ್‌ಪ್ರೆಸ್ 2026’ (Jobs Express 2026) ಉದ್ಯೋಗ ಮೇಳ ಅದ್ಧೂರಿಯಾಗಿ ಆಯೋಜಿಸಲಾಗಿದೆ.


ಕರ್ನಾಟಕ ಸರ್ಕಾರ, ಮೈಕ್ರೋಸಾಫ್ಟ್ ಹಾಗೂ ಮೈಟಿ (MeitY) ಸಹಭಾಗಿತ್ವದಲ್ಲಿ, ಐ.ಎಂ.ಜೆ. ಸಂಸ್ಥೆಗಳು (IMJ Institutions) ಹಾಗೂ ‘ಎ ಮಿಲಿಯನ್ ಫಾರ್ ಎ ಬಿಲಿಯನ್’ (1M1B) ಫೌಂಡೇಶನ್ ವತಿಯಿಂದ ಈ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 


ಟಿಯರ್-2 ಮತ್ತು ಟಿಯರ್-3 ನಗರಗಳ ಪ್ರತಿಭೆಗಳಿಗೆ ಜಾಗತಿಕ ಮಟ್ಟದ ಕಂಪನಿಗಳಲ್ಲಿ ಉದ್ಯೋಗ ಅವಕಾಶಗಳನ್ನು ನೇರವಾಗಿ ಸ್ಥಳದಲ್ಲೇ ಕಲ್ಪಿಸುವುದು ಈ ಮೇಳದ ಮುಖ್ಯ ಉದ್ದೇಶವಾಗಿದೆ.


35+ ದಿಗ್ಗಜ ಕಂಪನಿಗಳಿಂದ ಬರೋಬ್ಬರಿ 5,000+ ಉದ್ಯೋಗಾವಕಾಶಗಳು

ಈ ಮಹತ್ವದ ಉದ್ಯೋಗ ಮೇಳದಲ್ಲಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಖ್ಯಾತಿಯ 35ಕ್ಕೂ ಅಧಿಕ ಪ್ರಮುಖ ಕಾರ್ಪೊರೇಟ್ ಕಂಪನಿಗಳು ಭಾಗವಹಿಸುತ್ತಿದ್ದು, 5,000ಕ್ಕೂ ಹೆಚ್ಚು ಹುದ್ದೆಗಳಿಗೆ ನೇರ ನೇಮಕಾತಿ ನಡೆಯಲಿದೆ.


ಭಾಗವಹಿಸುವ ಪ್ರಮುಖ ಕಂಪನಿಗಳು:

  • ನುವಿನ್ ಗ್ಲೋಬಲ್ ಸರ್ವಿಸಸ್ (Nuhvin Global Services Pvt. Ltd.)

  • 24/7.ai


  • ಟಾಟಾ ವಿಸ್ಟ್ರಾನ್ (TATA Wistron)


  • ಟಾಟಾ ಎಲೆಕ್ಟ್ರಾನಿಕ್ಸ್ (Tata Electronics Pvt. Ltd.)


  • ವಿಪ್ರೋ ಕವಾಸಕಿ ಪ್ರಿಸಿಷನ್ ಮೆಕ್ ಲಿಮಿಟೆಡ್ (Wipro Kawasaki Precision Mech Ltd.)


  • ವಿನ್‌ಮ್ಯಾನ್ ಸಾಫ್ಟ್‌ವೇರ್ (Winman Software)


  • ಎಮ್ಮ್ವೀ (EMMVEE)


  • ಫ್ಲಿಪ್‌ಕಾರ್ಟ್ (Flipkart) ಸೇರಿದಂತೆ ಹಲವು ದಿಗ್ಗಜ ಸಂಸ್ಥೆಗಳು ತಮ್ಮ ಸಂಸ್ಥೆಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿವೆ.


ಎರಡು ದಿನಗಳ ಕಾರ್ಯಕ್ರಮದ ವಿಶೇಷತೆಗಳೇನು.?


  • ಸೆಪ್ಟೆಂಬರ್ 17 - ಮೈಕ್ರೋಸಾಫ್ಟ್ ಜಾಬ್ ರೆಡಿನೆಸ್ ಬೂಟ್ ಕ್ಯಾಂಪ್:

  • ಉದ್ಯೋಗಾಕಾಂಕ್ಷಿಗಳಲ್ಲಿ ಕೌಶಲ್ಯವನ್ನು ಹೆಚ್ಚಿಸಲು ಮತ್ತು ಸಂದರ್ಶನಗಳನ್ನು ಎದುರಿಸಲು ಬೇಕಾದ ವಿಶೇಷ ತರಬೇತಿ ಕಾರ್ಯಾಗಾರ ನಡೆಯಲಿದೆ.


  • ಸೆಪ್ಟೆಂಬರ್ 18 - ಜಾಬ್ಸ್ ಎಕ್ಸ್‌ಪ್ರೆಸ್ ರಿಕ್ರೂಟ್‌ಮೆಂಟ್ ಡೇ: 

  • ಅಧಿಕೃತ ನೇಮಕಾತಿ ದಿನವಾಗಿದ್ದು, ಅಭ್ಯರ್ಥಿಗಳು ನೇರವಾಗಿ ಕಂಪನಿಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.


ಯಾರು ಅರ್ಹರು.? ನೋಂದಣಿ ಹೇಗೆ.?


  • ಅರ್ಹತಾ ಬ್ಯಾಚ್‌ಗಳು:

  • 2024, 2025, 2026 ಹಾಗೂ 2027ನೇ ಸಾಲಿನ ಪದವೀಧರರು ಮತ್ತು ವಿದ್ಯಾರ್ಥಿಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.


  • ನೋಂದಣಿ ಕಡ್ಡಾಯ: 

  • ಆಸಕ್ತ ಅಭ್ಯರ್ಥಿಗಳು ಮುಂಚಿತವಾಗಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ ಮುಂಚಿತವಾಗಿ ನೋಂದಣಿ ಮಾಡಿಕೊಳ್ಳದವರಿಗಾಗಿ ಸ್ಥಳದಲ್ಲೇ ನೋಂದಣಿ (Spot Registration) ವ್ಯವಸ್ಥೆಯೂ ಲಭ್ಯವಿರಲಿದೆ.


ಕರಾವಳಿಯ ಯುವಕ-ಯುವತಿಯರು ದೂರದ ಮಹಾನಗರಗಳಿಗೆ ಅಲೆಯುವುದನ್ನು ತಪ್ಪಿಸಿ, ಸ್ಥಳೀಯವಾಗಿ ಉತ್ತಮ ವೇತನದ ಉದ್ಯೋಗ ಗಿಟ್ಟಿಸಿಕೊಳ್ಳಲು ಇದೊಂದು ಅಪರೂಪದ ಅವಕಾಶವಾಗಿದ್ದು, ಉದ್ಯೋಗಾಕಾಂಕ್ಷಿಗಳು ಇದರ ಸದುಪಯೋಗಪಡಿಸಿಕೊಳ್ಳುವಂತೆ ಆಯೋಜಕರು ತಿಳಿಸಿದ್ದಾರೆ.

Share this story