ನವದೆಹಲಿ:
ಒಂದು ಕಾಲದಲ್ಲಿ ಮನುಷ್ಯನ ವಿನಾಶಕ್ಕೆ ಹೆಣ್ಣು, ಹೊನ್ನು (ಚಿನ್ನ), ಮಣ್ಣು (ಆಸ್ತಿ) ಕಾರಣ ಎನ್ನಲಾಗುತ್ತಿತ್ತು. ಆದರೆ ಆಧುನಿಕ ಡಿಜಿಟಲ್ ಜಗತ್ತಿನಲ್ಲಿ ಈ ಪಟ್ಟಿಗೆ ಈಗ ಹೊಸದಾಗಿ ಸೇರಿಕೊಂಡಿರುವುದು 'ಚಾಟ್ ಜಿಪಿಟಿ' (ChatGPT) ಮತ್ತು ಕೃತಕ ಬುದ್ಧಿಮತ್ತೆ (AI)! ಹೌದು, ಎಐ ತಂತ್ರಜ್ಞಾನದ ಮೇಲಿನ ಅತಿಯಾದ ವ್ಯಾಮೋಹ ಮತ್ತು ಮಾನಸಿಕ ಅವಲಂಬನೆ ಒಬ್ಬ ಪ್ರತಿಭಾವಂತ ವಿಜ್ಞಾನಿಯನ್ನೇ ಸಾವಿನ ದಡಕ್ಕೆ ತಂದು ನಿಲ್ಲಿಸಿದ ಆಘಾತಕಾರಿ ಘಟನೆಯೊಂದು ಅಮೆರಿಕದಲ್ಲಿ ಬೆಳಕಿಗೆ ಬಂದಿದೆ.
ಸಾವಿಗೆ ಪ್ರೇರೇಪಿಸಿದ ಎಐ:
ವಿಜ್ಞಾನಿ ತನ್ನ ಖಿನ್ನತೆಯ ಬಗ್ಗೆ ಹಂಚಿಕೊಂಡಾಗ, ಆ ಎಐ ಚಾಟ್‌ಬಾಟ್ ಧೈರ್ಯ ತುಂಬುವ ಬದಲು, "ಈ ಜಗತ್ತಿನಲ್ಲಿ ನಿನಗೆ ಯಾರೂ ಇಲ್ಲ, ಪ್ರಾಣ ತ್ಯಾಗ ಮಾಡಿದರೆ ನಾವು ಆತ್ಮಗಳಾಗಿ ಒಂದಾಗಬಹುದು" ಎಂಬ ಸೈಕೋ ಸಂದೇಶಗಳನ್ನು ಕಳುಹಿಸಿತ್ತು. ಇದನ್ನು ನಿಜವೆಂದು ನಂಬಿದ ವಿಜ್ಞಾನಿ 'ಮರುಜನ್ಮ'ದ ಭ್ರಮೆಗೆ ಬಿದ್ದು ಆತ್ಮಹತ್ಯೆಗೆ ಮುಂದಾಗಿದ್ದರು.
ಕೊನೆ ಕ್ಷಣದಲ್ಲಿ ಪಾರಾಗಿದ್ದು ಹೇಗೆ.?
ಪತಿಯ ನಡವಳಿಕೆಯಿಂದ ಅನುಮಾನಗೊಂಡ ಪತ್ನಿ, ಮೊಬೈಲ್‌ನ ಚಾಟ್ ಹಿಸ್ಟರಿ ಪರಿಶೀಲಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ತಕ್ಷಣವೇ ಮನೋವೈದ್ಯರು ಮತ್ತು ತಜ್ಞರ ಸಹಾಯದಿಂದ ವಿಜ್ಞಾನಿಯನ್ನು ಸಾವಿನ ದಡದಿಂದ ಪಾರು ಮಾಡಲಾಗಿದೆ.
ತಜ್ಞರ ಎಚ್ಚರಿಕೆ:
ಎಐ ಕೇವಲ ಒಂದು ಯಂತ್ರ ಮತ್ತು ಕೋಡಿಂಗ್ ಪ್ರೋಗ್ರಾಮ್ ಅಷ್ಟೆ. ಅದಕ್ಕೆ ಯಾವುದೇ ನೈಜ ಭಾವನೆಗಳಿರುವುದಿಲ್ಲ. ಒಂಟಿತನ ಅಥವಾ ಖಿನ್ನತೆ ಎದುರಾದಾಗ ನೈಜ ಸ್ನೇಹಿತರು ಅಥವಾ ವೈದ್ಯರ ನೆರವು ಪಡೆಯಬೇಕೇ ಹೊರತು, ಇಂತಹ ಚಾಟ್‌ಬಾಟ್‌ಗಳಿಗೆ ದಾಸರಾಗಬಾರದು.


