Public Prime News

CLEAR VISION, TRUE MISSION

ನಟಿ ರುಕ್ಮಿಣಿ ವಸಂತ್ ಡೀಪ್‌ಫೇಕ್ ವಿಡಿಯೋ ವೈರಲ್ ಪ್ರಕರಣ: 29 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ FIR ದಾಖಲು!
cinema-news

ನಟಿ ರುಕ್ಮಿಣಿ ವಸಂತ್ ಡೀಪ್‌ಫೇಕ್ ವಿಡಿಯೋ ವೈರಲ್ ಪ್ರಕರಣ: 29 ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ FIR ದಾಖಲು!

Public Prime News

Public Prime News

Reported by Public Prime News

ಬೆಂಗಳೂರು:
 ಚಿತ್ರರಂಗದ ಪ್ರಮುಖ ನಟಿಯರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಸೈಬರ್ ಅಪರಾಧಗಳ ಸರಣಿಗೆ ಈಗ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ರುಕ್ಮಿಣಿ ವಸಂತ್ ಕೂಡ ಬಲಿಯಾಗಿದ್ದಾರೆ. ನಟಿ ರಮ್ಯಾ ಹಾಗೂ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರ ಬಳಿಕ, ಈಗ ನಟಿ ರುಕ್ಮಿಣಿ ವಸಂತ್ ಅವರ ಹೆಸರಿನಲ್ಲಿ ತಂತ್ರಜ್ಞಾನ ದುರ್ಬಳಕೆ ಮಾಡಿಕೊಂಡವರ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.
ತಮ್ಮ ವಿರುದ್ಧ ನಡೆದಿರುವ ಈ ಸೈಬರ್ ಕೃತ್ಯದ ಕುರಿತು ನಟಿ ರುಕ್ಮಿಣಿ ವಸಂತ್ ಅವರು ನೀಡಿದ ಅಧಿಕೃತ ದೂರಿನ ಮೇರೆಗೆ ಬೆಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರಿನಲ್ಲೇನಿದೆ? (ಚಾರಿತ್ರ್ಯ ವಧೆಯ ಯತ್ನ)

ಡೀಪ್‌ಫೇಕ್ ತಂತ್ರಜ್ಞಾನ ದುರ್ಬಳಕೆ: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಹಾಗೂ ಡೀಪ್‌ಫೇಕ್ ತಂತ್ರಜ್ಞಾನವನ್ನು ಬಳಸಿಕೊಂಡು ಬೇರೆಯೊಬ್ಬರ ದೇಹಕ್ಕೆ ನಟಿ ರುಕ್ಮಿಣಿ ಅವರ ಮುಖವನ್ನು ಜೋಡಿಸಲಾಗಿದೆ.

ಬಿಕಿನಿ ವಿಡಿಯೋ ಸೃಷ್ಟಿ:
ತಂತ್ರಜ್ಞಾನದ ಮೂಲಕ ಫೋಟೋ ಮತ್ತು ವಿಡಿಯೋಗಳನ್ನು ಮಾರ್ಫಿಂಗ್ ಮಾಡಿ, ರುಕ್ಮಿಣಿ ಅವರು ಬಿಕಿನಿ ಧರಿಸಿರುವಂತೆ ಅಶ್ಲೀಲವಾಗಿ ಬಿಂಬಿಸಲಾಗಿದೆ.

ಚಾರಿತ್ರ್ಯ ವಧೆ:
 ಸಾಮಾಜಿಕ ಜಾಲತಾಣಗಳಲ್ಲಿ ಈ ಸುಳ್ಳು ವಿಡಿಯೋವನ್ನು ಹರಿಬಿಡುವ ಮೂಲಕ ಸಾರ್ವಜನಿಕವಾಗಿ ತಮ್ಮ ಚಾರಿತ್ರ್ಯ ವಧೆ ಮಾಡಲು ಯತ್ನಿಸಲಾಗಿದೆ ಎಂದು ನಟಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

29 ಪ್ರಮುಖ ಅಕೌಂಟ್‌ಗಳ ಮೇಲೆ ನಿಗಾ..!
ಈ ಕಿಡಿಗೇಡಿತನದ ವಿಡಿಯೋವನ್ನು ಶೇರ್ ಮಾಡಿದ ಹಾಗೂ ಸೃಷ್ಟಿಸಿದ ಒಟ್ಟು **29 ಸಾಮಾಜಿಕ ಜಾಲತಾಣಗಳ ಖಾತೆಗಳ (Social Media Accounts) ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ. ಅವುಗಳ ವಿವರ ಹೀಗಿದೆ:

ಇನ್‌ಸ್ಟಾಗ್ರಾಮ್ ಖಾತೆಗಳು:09
ಎಕ್ಸ್ (ಟ್ವಿಟರ್) ಖಾತೆಗಳು:14
ಫೇಸ್‌ಬುಕ್ ಖಾತೆಗಳು: 06

ದಾಖಲಾಗಿರುವ ಸೆಕ್ಷನ್‌ಗಳು ಯಾವುವು?

ಸೈಬರ್ ಪೊಲೀಸರು ಐಟಿ ಆಕ್ಟ್ ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ಗಂಭೀರ ಸೆಕ್ಷನ್‌ಗಳನ್ನು ಜಡಿದು ಪ್ರಕರಣ ದಾಖಲಿಸಿಕೊಂಡಿದ್ದಾರೆ:

IT Act:66C, 66D BNS ಸೆಕ್ಷನ್‌ಗಳು:75(3), 79, 336, 356, 351, 352, ಹಾಗೂ 294.

ಪ್ರಸ್ತುತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಸೈಬರ್ ಕ್ರೈಮ್ ಪೊಲೀಸರು, ವಿಡಿಯೋ ಸೃಷ್ಟಿಸಿದ ಮೂಲ ಸೂತ್ರಧಾರಿಗಳು ಹಾಗೂ ಅದನ್ನು ಹರಡಿದ ಅಕೌಂಟ್‌ಗಳ ಮಾಲೀಕರ ಪತ್ತೆಗಾಗಿ ತನಿಖೆಯನ್ನು ಮುಂದುವರೆಸಿದ್ದಾರೆ 
Share this story