Public Prime News

CLEAR VISION, TRUE MISSION

ಆಟವಾಡುತ್ತಾ ಕಾರಿನೊಳಗೆ ಸಿಲುಕಿದ ಪುಟಾಣಿ ಸಹೋದರಿಯರು: ಉಸಿರುಗಟ್ಟಿ ಇಬ್ಬರು ಕಂದಮ್ಮಗಳು ದಾರುಣ ಸಾವು..!
crime

ಆಟವಾಡುತ್ತಾ ಕಾರಿನೊಳಗೆ ಸಿಲುಕಿದ ಪುಟಾಣಿ ಸಹೋದರಿಯರು: ಉಸಿರುಗಟ್ಟಿ ಇಬ್ಬರು ಕಂದಮ್ಮಗಳು ದಾರುಣ ಸಾವು..!

Public Prime News

Public Prime News

Reported by Public Prime News

ಜೈಪುರ:

ರಾಜಸ್ಥಾನದಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ಆಟವಾಡುತ್ತಾ ನಿಲ್ಲಿಸಿದ್ದ ಕಾರಿನೊಳಗೆ ಹೋದ ಇಬ್ಬರು ಸಣ್ಣ ವಯಸ್ಸಿನ ಸಹೋದರಿಯರು ಒಳಗಡೆಯೇ ಉಸಿರುಗಟ್ಟಿ ದಾರುಣವಾಗಿ ಸಾವನ್ನಪ್ಪಿದ್ದಾರೆ. 5 ವರ್ಷದ ಪ್ರೀತಿ ಮತ್ತು 3 ವರ್ಷದ ಅಂಜಲಿ ಮೃತಪಟ್ಟ ದುರ್ದೈವಿಗಳು.


ಘಟನೆಯ ವಿವರ: 

ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ಈ ಪುಟಾಣಿ ಮಕ್ಕಳು ಅಲ್ಲಿಯೇ ನಿಲ್ಲಿಸಲಾಗಿದ್ದ ಹಳೆಯ ಕಾರಿನೊಳಗೆ ಪ್ರವೇಶಿಸಿದ್ದಾರೆ. ಆದರೆ ಅವರು ಒಳಗೆ ಹೋದ ತಕ್ಷಣ ಕಾರಿನ ಬಾಗಿಲು ಆಟೋಮ್ಯಾಟಿಕ್ ಆಗಿ ಲಾಕ್ ಆಗಿದೆ. ಕಿಟಕಿ ಗಾಜುಗಳು ಸಂಪೂರ್ಣ ಬಂದ್ ಆಗಿದ್ದರಿಂದ ಹಾಗೂ ತೀವ್ರ ಬಿಸಿಲಿನ ತಾಪಮಾನಕ್ಕೆ ಕಾರಿನೊಳಗೆ ಆಮ್ಲಜನಕದ ಕೊರತೆಯುಂಟಾಗಿ ಮಕ್ಕಳಿಬ್ಬರು ಒದ್ದಾಡಿ ಪ್ರಾಣ ಬಿಟ್ಟಿದ್ದಾರೆ.


ಬಹಳ ಹೊತ್ತಿನ ಬಳಿಕ ಪೋಷಕರು ಹುಡುಕಾಟ ನಡೆಸಿದಾಗ ಕಾರಿನೊಳಗೆ ಮಕ್ಕಳು ಅಪ್ರಜ್ಞಾಪೂರ್ವಕ ಸ್ಥಿತಿಯಲ್ಲಿ ಬಿದ್ದಿರುವುದು ಪತ್ತೆಯಾಗಿದೆ. ತಕ್ಷಣ ಆಸ್ಪತ್ರೆಗೆ ಸಾಗಿಸಿದರೂ ಪ್ರಯೋಜನವಾಗಲಿಲ್ಲ. ಈ ಘಟನೆ ಇಡೀ ಕುಟುಂಬವನ್ನು ಕಣ್ಣೀರಿನಲ್ಲಿ ಮುಳುಗಿಸಿದ್ದು, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this story