ಬೆಂಗಳೂರು: ತುರ್ತು ಸಂದರ್ಭಗಳಲ್ಲಿ ಇನ್ಮುಂದೆ ಆಂಬುಲೆನ್ಸ್‌ಗಾಗಿ ಗಂಟೆಗಟ್ಟಲೆ ಕಾಯುವ ಅವಸ್ಥೆಗೆ ರಾಜ್ಯ ಸರ್ಕಾರ ಕೊನೆಹಾಡಿದೆ. ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಉಚಿತ ತುರ್ತು ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಅತ್ಯಂತ ಕ್ರಾಂತಿಕಾರಿ ಹೆಜ್ಜೆಯಿಟ್ಟಿದೆ. ರಾಜ್ಯದ ಬಹುನಿರೀಕ್ಷಿತ ಮತ್ತು ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ‘108 ಆರೋಗ್ಯ ಕವಚ ಆಂಬುಲೆನ್ಸ್ ಕೇಂದ್ರೀಕೃತ ಕಮಾಂಡ್ ಕಂಟ್ರೋಲ್ ಸೆಂಟರ್’ ಅನ್ನು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಇಂದು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದ್ದಾರೆ.
ಆರೋಗ್ಯ ಇಲಾಖೆಯ ಈ ಡಿಜಿಟಲ್ ಕ್ರಾಂತಿಯ ಲೈವ್ ಸ್ಟ್ರೀಮಿಂಗ್ (ನೇರ ಪ್ರಸಾರ) ಕಾರ್ಯಕ್ರಮವನ್ನು ಇಡೀ ರಾಜ್ಯದ ಜನತೆ ಕುತೂಹಲದಿಂದ ವೀಕ್ಷಿಸಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಖಾಸಗಿ ಮುಕ್ತ ನಿರ್ವಹಣೆ (ದೇಶದಲ್ಲೇ ಮೊದಲು).
ಇಡೀ ದೇಶದಲ್ಲೇ ಮೊದಲ ಬಾರಿಗೆ ಯಾವುದೇ ಖಾಸಗಿ ಸಂಸ್ಥೆಯ ಸಹಭಾಗಿತ್ವವಿಲ್ಲದೆ ಸಂಪೂರ್ಣವಾಗಿ ಸರ್ಕಾರವೇ ನೇರವಾಗಿ ಈ ಅತ್ಯಾಧುನಿಕ ಕಂಟ್ರೋಲ್ ರೂಂ ಅನ್ನು ರನ್ ಮಾಡುತ್ತಿದೆ.
24/7 ಜಿಪಿಎಸ್ ಟ್ರ್ಯಾಕಿಂಗ್:
ರಾಜ್ಯದ ಮೂಲೆ ಮೂಲೆಯಲ್ಲಿರುವ ಎಲ್ಲಾ 108 ಆರೋಗ್ಯ ಕವಚ ಹಾಗೂ ಸರ್ಕಾರಿ ವಲಯದ ಆಂಬುಲೆನ್ಸ್‌ಗಳನ್ನು ಇನ್ಮುಂದೆ ಅತ್ಯಾಧುನಿಕ ಸಾಫ್ಟ್‌ವೇರ್ ಮತ್ತು GPS ಮೂಲಕ ಒಂದೇ ಕಡೆ ಕುಳಿತು ದಿನದ 24 ಗಂಟೆಯೂ ಲೈವ್ ಆಗಿ ವಾಚ್ ಮಾಡಬಹುದು.
ಕ್ಷಣಾರ್ಧದಲ್ಲಿ ಆಂಬುಲೆನ್ಸ್ ಪತ್ತೆ:
ಸಾರ್ವಜನಿಕರು ಆಪತ್ಕಾಲದಲ್ಲಿ 108ಗೆ ಕರೆ ಮಾಡಿದ ತಕ್ಷಣ, ಅವರು ಇರುವ ಜಾಗಕ್ಕೆ ಅತ್ಯಂತ ಹತ್ತಿರದಲ್ಲಿರುವ ಆಂಬುಲೆನ್ಸ್ ಅನ್ನು ಕಂಟ್ರೋಲ್ ಸೆಂಟರ್ ಗುರುತಿಸಿ, ಕ್ಷಣಾರ್ಧದಲ್ಲಿ ಅಲ್ಲಿಗೆ ರವಾನಿಸಲಿದೆ.
'ಗೋಲ್ಡನ್ ಅವರ್' ರಕ್ಷಣೆ:
ಅಪಘಾತ ಅಥವಾ ಗಂಭೀರ ಕಾಯಿಲೆಯ ಸಂದರ್ಭದಲ್ಲಿ ರೋಗಿಗೆ ಮೊದಲ ಒಂದು ಗಂಟೆ (Golden Hour) ಅತ್ಯಂತ ಮುಖ್ಯ. ಈ ತಂತ್ರಜ್ಞಾನದಿಂದ ಆಂಬುಲೆನ್ಸ್ ಬರುವುದು ವಿಳಂಬವಾಗುವುದು ತಪ್ಪಲಿದ್ದು, ಸಕಾಲದಲ್ಲಿ ಜೀವ ಉಳಿಸಬಹುದಾಗಿದೆ.
ಆರೋಗ್ಯ ಕ್ಷೇತ್ರದಲ್ಲಿ ಇತಿಹಾಸ ಸೃಷ್ಟಿಸಿದ ಕರ್ನಾಟಕ.!
ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, "ಸರ್ಕಾರದ ವತಿಯಿಂದಲೇ ಇಷ್ಟು ದೊಡ್ಡ ಮಟ್ಟದ ಹೈಟೆಕ್ ಕಂಟ್ರೋಲ್ ರೂಂ ನಿರ್ವಹಿಸುತ್ತಿರುವ ಭಾರತದ ಏಕೈಕ ರಾಜ್ಯ ಕರ್ನಾಟಕ" ಎಂದು ಹೆಮ್ಮೆಯಿಂದ ಘೋಷಿಸಿದರು.
ಸಾರ್ವಜನಿಕರ ಜೀವ ಉಳಿಸುವ ಈ ಉಚಿತ ಸೇವೆಗೆ ಸರ್ಕಾರ ತನ್ನ ಬಜೆಟ್‌ನಲ್ಲಿ ನೂರಾರು ಕೋಟಿ ರೂಪಾಯಿಗಳ ವಿಶೇಷ ಅನುದಾನ ನೀಡಿದೆ. ಈ ಹೊಸ ಕಮಾಂಡ್ ಸೆಂಟರ್ ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ನಿಜಕ್ಕೂ "ಸಂಜೀವಿನಿ"ಯಾಗಲಿದೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.


