Public Prime News

CLEAR VISION, TRUE MISSION

ಕೊಕ್ಕಡ ಬಳಿ ಸರ್ಕಾರಿ ಬಸ್-ಕಾರು ಭೀಕರ ಅಪಘಾತ; ಚಾಲಕನ ಕೈ ಮುರಿತ..!
local-news

ಕೊಕ್ಕಡ ಬಳಿ ಸರ್ಕಾರಿ ಬಸ್-ಕಾರು ಭೀಕರ ಅಪಘಾತ; ಚಾಲಕನ ಕೈ ಮುರಿತ..!

Public Prime News

Public Prime News

Reported by Public Prime News

ದಕ್ಷಿಣ ಕನ್ನಡ/ಕೊಕ್ಕಡ:
ಸರ್ಕಾರಿ ಬಸ್ ಹಾಗೂ ಟಾಟಾ ಸಫಾರಿ ಕಾರು ಮುಖಾಮುಖಿ ಡಿಕ್ಕಿಯಾದ ಘಟನೆ ಸೆಪ್ಟೆಂಬರ್ 12ರಂದು ಕೊಕ್ಕಡ ಸಮೀಪ ನಡೆದಿದೆ.

ಧರ್ಮಸ್ಥಳದಿಂದ ಬೆಂಗಳೂರಿನತ್ತ ಸಾಗುತ್ತಿದ್ದ ಟಾಟಾ ಸಫಾರಿ ಕಾರು ಹಾಗೂ ಕುಕ್ಕೆ ಸುಬ್ರಹ್ಮಣ್ಯದಿಂದ ಧರ್ಮಸ್ಥಳದತ್ತ ಬರುತ್ತಿದ್ದ ಸರ್ಕಾರಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಬಸ್ ಮತ್ತು ಕಾರು ಎರಡೂ ನಜ್ಜುಗುಜ್ಜಾಗಿವೆ. ಘಟನೆಯಲ್ಲಿ ಕಾರು ಚಾಲಕನ ಕೈ ಮುರಿದಿದ್ದು, ಇತರ ಕೆಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅಪಘಾತಕ್ಕೆ ನಿಖರ ಕಾರಣದ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ
Share this story