Public Prime News

CLEAR VISION, TRUE MISSION

 ಜಾಗತಿಕ ವಸತಿ ಬಿಕ್ಕಟ್ಟು: ವಿಶ್ವದ ಶೇ 40 ರಷ್ಟು ಮಂದಿಗೆ ಇಲ್ಲ ಸ್ವಂತ ಸೂರೆಂಬ ಭಾಗ್ಯ; ವಿಶ್ವಸಂಸ್ಥೆ ವರದಿಯಲ್ಲಿ ಆತಂಕಕಾರಿ ಮಾಹಿತಿ..!
kannadanadi

ಜಾಗತಿಕ ವಸತಿ ಬಿಕ್ಕಟ್ಟು: ವಿಶ್ವದ ಶೇ 40 ರಷ್ಟು ಮಂದಿಗೆ ಇಲ್ಲ ಸ್ವಂತ ಸೂರೆಂಬ ಭಾಗ್ಯ; ವಿಶ್ವಸಂಸ್ಥೆ ವರದಿಯಲ್ಲಿ ಆತಂಕಕಾರಿ ಮಾಹಿತಿ..!

Public Prime News

Public Prime News

Reported by Public Prime News

ವಿಶ್ವಸಂಸ್ಥೆ: 

ಜಗತ್ತಿನಾದ್ಯಂತ ವಸತಿ ಬಿಕ್ಕಟ್ಟು ಅತ್ಯಂತ ಗಂಭೀರ ಸ್ವರೂಪ ಪಡೆದುಕೊಂಡಿದೆ. ಪ್ರಸ್ತುತ ವಿಶ್ವದ ಒಟ್ಟು ಜನಸಂಖ್ಯೆಯ ಶೇಕಡಾ 40 ರಷ್ಟು ಅಂದರೆ ಸುಮಾರು 340 ಕೋಟಿ ಜನರು ಯೋಗ್ಯವಾದ ವಸತಿ ಸೌಕರ್ಯವಿಲ್ಲದೆ ಪರದಾಡುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ‘ವರ್ಲ್ಡ್ ಸಿಟೀಸ್ ರಿಪೋರ್ಟ್ 2026’ ಆತಂಕಕಾರಿ ಮಾಹಿತಿ ಬಿಚ್ಚಿಟ್ಟಿದೆ.


ಗಗನಕ್ಕೇರಿದ ಮನೆಗಳ ಬೆಲೆ:

ಜನರ ಆದಾಯಕ್ಕಿಂತ ಮನೆಗಳ ಬೆಲೆ ಅತಿ ವೇಗವಾಗಿ ಹೆಚ್ಚುತ್ತಿದೆ. ವಿಶ್ವದಾದ್ಯಂತ ಶೇ 44 ರಷ್ಟು ಕುಟುಂಬಗಳು ತಮ್ಮ ಆದಾಯದ ಶೇ 30 ಕ್ಕಿಂತ ಹೆಚ್ಚು ಹಣವನ್ನು ಕೇವಲ ಮನೆ ಬಾಡಿಗೆಗೇ ಖರ್ಚು ಮಾಡುತ್ತಿವೆ.


  • ಹೆಚ್ಚುತ್ತಿರುವ ಕೊಳೆಗೇರಿಗಳು: 

  • ಮೂಲಸೌಕರ್ಯಗಳ ಕೊರತೆಯಿಂದಾಗಿ ಜಗತ್ತಿನ ಸುಮಾರು 110 ಕೋಟಿ ಜನರು ಕುಡಿಯುವ ನೀರು ಮತ್ತು ನೈರ್ಮಲ್ಯವಿಲ್ಲದ ಕೊಳೆಗೇರಿಗಳಲ್ಲಿ ವಾಸಿಸುವಂತಾಗಿದೆ.


  • ಭಾರತದಲ್ಲಿ ಮನೆ ಖರೀದಿ ಅಸಾಧ್ಯ:

  • ಭಾರತದ ಮೆಟ್ರೋ ನಗರಗಳಲ್ಲಿ ಸಾಮಾನ್ಯ ಜನರಿಗೆ ಕೈಗೆಟುಕುವ ದರದ ಮನೆಗಳ (Affordable Housing) ಲಭ್ಯತೆ ಭಾರಿ ಪ್ರಮಾಣದಲ್ಲಿ ಕುಸಿದಿದೆ. 2018 ರಲ್ಲಿ ಶೇ 52 ರಷ್ಟಿದ್ದ ಬಜೆಟ್ ಮನೆಗಳ ಲಭ್ಯತೆ, 2025 ರ ವೇಳೆಗೆ ಕೇವಲ ಶೇ 17 ಕ್ಕೆ ಇಳಿದಿದೆ. ಗೃಹ ನಿರ್ಮಾಣ ಸಂಸ್ಥೆಗಳು ಐಷಾರಾಮಿ ಯೋಜನೆಗಳಿಗೆ ಮಾತ್ರ ಆದ್ಯತೆ ನೀಡುತ್ತಿರುವುದು ಇದಕ್ಕೆ ಕಾರಣ.


  • ಭವಿಷ್ಯದ ಕರಾಳ ಸವಾಲು:

  • 2050 ರ ವೇಳೆಗೆ ನಗರ ಪ್ರದೇಶಗಳಿಗೆ ಹೆಚ್ಚುವರಿಯಾಗಿ 200 ಕೋಟಿ ಜನಸಂಖ್ಯೆ ಸೇರ್ಪಡೆಯಾಗಲಿದ್ದು, ಹವಾಮಾನ ವೈಪರೀತ್ಯದಿಂದಾಗಿ 2040 ರ ವೇಳೆಗೆ ಸುಮಾರು 16.7 ಕೋಟಿ ಮನೆಗಳು ನಾಶವಾಗುವ ಭೀತಿ ಇದೆ.


 ವಸತಿ ಎಂಬುದು ಕೇವಲ ಆಸ್ತಿಯಲ್ಲ, ಅದು ಮಾನವನ ಮೂಲಭೂತ ಹಕ್ಕು. ಸರ್ಕಾರಗಳು ತಕ್ಷಣವೇ ಎಚ್ಚೆತ್ತುಕೊಂಡು ಬಡ ಮತ್ತು ಮಧ್ಯಮ ವರ್ಗದವರಿಗಾಗಿ ಸಾಮಾಜಿಕ ವಸತಿ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ವಿಶ್ವಸಂಸ್ಥೆ ಕಳಕಳಿಯ ವಿನಂತಿ ಮಾಡಿದೆ.

Share this story