Public Prime News

CLEAR VISION, TRUE MISSION

SBI Bank Strike: ಮೇ 25 ಮತ್ತು 26 ರಂದು ದೇಶಾದ್ಯಂತ ಎಸ್‌ಬಿಐ ಬ್ಯಾಂಕ್ ಮುಷ್ಕರ! ಸತತ 5 ದಿನ ಗ್ರಾಹಕರಿಗೆ ಸಿಗಲ್ಲ ಸೇವೆ.?
kannadanadi

SBI Bank Strike: ಮೇ 25 ಮತ್ತು 26 ರಂದು ದೇಶಾದ್ಯಂತ ಎಸ್‌ಬಿಐ ಬ್ಯಾಂಕ್ ಮುಷ್ಕರ! ಸತತ 5 ದಿನ ಗ್ರಾಹಕರಿಗೆ ಸಿಗಲ್ಲ ಸೇವೆ.?

Public Prime News

Public Prime News

Reported by Public Prime News

ಬೆಂಗಳೂರು: 

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಗ್ರಾಹಕರಿಗೆ ಮಹತ್ವದ ಸುದ್ದಿಯೊಂದಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 25 ಮತ್ತು ಮೇ 26 ರಂದು ದೇಶಾದ್ಯಂತ ಎಸ್‌ಬಿಐ ನೌಕರರ ಒಕ್ಕೂಟದಿಂದ ಎರಡು ದಿನಗಳ ಕಾಲ ಸಂಪೂರ್ಣ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸಲು ನಿರ್ಧಾರಿಸಲಾಗಿದೆ.


ಅಖಿಲ ಭಾರತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಒಕ್ಕೂಟ (AISBISF) ನೇತೃತ್ವದಲ್ಲಿ ಈ ಬೃಹತ್ ಪ್ರತಿಭಟನೆ ನಡೆಯುತ್ತಿದ್ದು, ಇದರಿಂದಾಗಿ ಸತತ 5 ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.


 ಸತತ 5 ದಿನ ಬ್ಯಾಂಕ್ ರಜೆ/ಮುಷ್ಕರದ ವೇಳಾಪಟ್ಟಿ ಹೀಗಿದೆ:


  • ಮೇ 23: ನಾಲ್ಕನೇ ಶನಿವಾರದ ಕಾರಣ ಬ್ಯಾಂಕ್ ರಜೆ ಇರಲಿದೆ.

  • ಮೇ 24: ಭಾನುವಾರದ ಸಾಮಾನ್ಯ ರಜೆ.

  • ಮೇ 25: ಎಸ್‌ಬಿಐ ನೌಕರರ ಮುಷ್ಕರ (ಮೊದಲ ದಿನ).

  • ಮೇ 26: ಎಸ್‌ಬಿಐ ನೌಕರರ ಮುಷ್ಕರ (ಎರಡನೇ ದಿನ).

  • ಮೇ 27: ಈದ್ ಹಬ್ಬದ ಪ್ರಯುಕ್ತ ಅಧಿಕೃತ ಬ್ಯಾಂಕ್ ರಜೆ.


ಈ ಹಿನ್ನೆಲೆಯಲ್ಲಿ ಸತತ ಐದು ದಿನಗಳ ಕಾಲ ಗ್ರಾಹಕರಿಗೆ ಬ್ಯಾಂಕ್ ಶಾಖೆಗಳಲ್ಲಿ ನೇರ ಸೇವೆಗಳು ಸಿಗುವುದು ಕಷ್ಟಕರವಾಗಬಹುದು ಎಂದು ಅಂದಾಜಿಸಲಾಗಿದೆ.


 ನೌಕರರ ಪ್ರಮುಖ ಬೇಡಿಕೆಗಳೇನು.?

ಎಸ್‌ಬಿಐ ನೌಕರರ ಒಕ್ಕೂಟವು ಪ್ರಮುಖವಾಗಿ ಈ ಕೆಳಗಿನ ಮೂರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ:


  1. ಹೊರಗುತ್ತಿಗೆಗೆ ತಡೆ: 

  2. ಬ್ಯಾಂಕ್‌ನಲ್ಲಿ ಖಾಯಂ ಆಗಿ ಮಾಡಬೇಕಾದ ಹುದ್ದೆಗಳನ್ನು ಹೊರಗುತ್ತಿಗೆ (Outsourcing) ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು.


  3. ಭದ್ರತೆ ಮತ್ತು ನೇಮಕಾತಿ: 

  4. ಎಲ್ಲಾ ಬ್ಯಾಂಕ್ ಶಾಖೆಗಳಿಗೆ ಸೂಕ್ತ ಸಶಸ್ತ್ರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು ಹಾಗೂ ಖಾಲಿ ಇರುವ ನೌಕರರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು.


  5. ಪೆನ್ಷನ್ ಮತ್ತು ವೇತನ:

  6. ಹಳೆಯ ಪೆನ್ಷನ್ ಯೋಜನೆಯ ಜಾರಿ ಹಾಗೂ ನೌಕರರ ನಡುವೆ ಇರುವ ವೇತನ ತಾರತಮ್ಯದ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸಬೇಕು.


ಸತತ ರಜೆ ಮತ್ತು ಮುಷ್ಕರದ ದಿನಗಳಲ್ಲಿ ಹಣದ ಕೊರತೆಯಾಗದಂತೆ ಹಾಗೂ ಬ್ಯಾಂಕಿಂಗ್ ವ್ಯವಹಾರಗಳಿಗೆ ತೊಂದರೆಯಾಗದಂತೆ ಗ್ರಾಹಕರು ಮುಂಚಿತವಾಗಿಯೇ ಯೋಜಿಸುವುದು ಉತ್ತಮ.

Share this story