Public Prime News

CLEAR VISION, TRUE MISSION

ಬೆಂಗಳೂರಲ್ಲಿ ಅಮಾನವೀಯ ಕೃತ್ಯ: ಮೂಕಪ್ರಾಣಿ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಿಕೃತ ಕಾಮುಕ ಅರೆಸ್ಟ್..!
crime

ಬೆಂಗಳೂರಲ್ಲಿ ಅಮಾನವೀಯ ಕೃತ್ಯ: ಮೂಕಪ್ರಾಣಿ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ವಿಕೃತ ಕಾಮುಕ ಅರೆಸ್ಟ್..!

Public Prime News

Public Prime News

Reported by Public Prime News

ಬೆಂಗಳೂರು:

ರಸ್ತೆ ಬದಿಯಲ್ಲಿ ಮಲಗಿದ್ದ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ 24 ವರ್ಷದ ವಿಕೃತ ಕಾಮುಕನನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಕಾಟನ್‌ಪೇಟೆ ನಿವಾಸಿ, ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಶಹಬಾಜ್ ಆಲಂ (24) ಬಂಧಿತ ಆರೋಪಿ.


ಸಿಸಿಟಿವಿ ವಿಡಿಯೋ ವೈರಲ್: 

ಮೇ 5ರ ಮುಂಜಾನೆ ಸುಮಾರು 1:47ರ ಅವಧಿಯಲ್ಲಿ ಅಕ್ಕಿಪೇಟೆಯ ಗಲ್ಲಿ ರಸ್ತೆಯೊಂದರಲ್ಲಿ ಈ ಅಮಾನವೀಯ ಘಟನೆ ನಡೆದಿತ್ತು. ಆರೋಪಿಯು ರಸ್ತೆಯಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ, ಮಲಗಿದ್ದ ಹಸುವಿನ ಮೇಲೆ ವಿಕೃತ ದೌರ್ಜನ್ಯ ಎಸಗಿ ಪರಾರಿಯಾಗಿದ್ದನು. ಮೇ 17 ರಂದು ಈ ಕೃತ್ಯದ ಸಿಸಿಟಿವಿ ದೃಶ್ಯಾವಳಿಗಳು 'X' (ಟ್ವಿಟರ್) ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.


ಪೊಲೀಸ್ ಕ್ರಮ: 

ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಕಾಟನ್‌ಪೇಟೆ ಪೊಲೀಸರು ಸ್ವಯಂಪ್ರೇರಿತವಾಗಿ (Suo Motu) ಪ್ರಕರಣ ದಾಖಲಿಸಿಕೊಂಡಿದ್ದರು. ತಾಂತ್ರಿಕ ಸೂತ್ರಗಳ ನೆರವಿನಿಂದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಹೆಡೆಮುರಿಕಟ್ಟಿದ್ದಾರೆ. ವಿಚಾರಣೆ ವೇಳೆ ಆರೋಪಿ ತಪ್ಪು ಒಪ್ಪಿಕೊಂಡಿದ್ದು, ಸದ್ಯ ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 325 (ಅಸ್ವಾಭಾವಿಕ ಲೈಂಗಿಕ ಕೃತ್ಯ) ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಮೊಕದ್ದಮೆ ಹೂಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Share this story