ಕಾರ್ಕಳ:
ಬಜಗೋಳಿ ಮಾರ್ಗವಾಗಿ ತೆರಳುತ್ತಿದ್ದ ಸ್ಕೂಟಿಗೆ ಖಾಸಗಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿ ಸವಾರ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಪೇರಡ್ಕ ಎಂಬಲ್ಲಿ ನಡೆದಿದೆ.
ಈ ಅಪಘಾತದಲ್ಲಿ ಗಾಯಗೊಂಡವರನ್ನು ಲಿಯೋ ಡಿಸೋಜ (54) ಎಂದು ಗುರುತಿಸಲಾಗಿದೆ.
ಸ್ಕೂಟಿಯಲ್ಲಿ ಬಜಗೋಳಿ ಮಾರ್ಗದಿಂದ ಕೊಪ್ಪ ಕಡೆಗೆ ತೆರಳುತ್ತಿದ್ದ ವೇಳೆ, ಎದುರಿನಿಂದ ಬಜಗೋಳಿ ಕಡೆಯಿಂದ ಶೃಂಗೇರಿಗೆ ತೆರಳುತ್ತಿದ್ದ ಬಸ್‌ನ ಚಾಲಕ ಮಹಮ್ಮದ್ ಅಲ್ವೇರ್ ಅಜಾಗರೂಕತೆ ಹಾಗೂ ಅಧಿಕ ವೇಗದಿಂದ ವಾಹನ ಚಲಾಯಿಸಿಕೊಂಡು ಬಂದು ಸ್ಕೂಟಿಗೆ ಹಿಂಬದಿಯಿಂದ ಗುದ್ದಿದ್ದಾರೆ.
ಡಿಕ್ಕಿಯ ರಭಸಕ್ಕೆ ಸ್ಕೂಟಿಯಲ್ಲಿದ್ದ ಲಿಯೋ ಡಿಸೋಜ ಅವರು ಕೆಳಕ್ಕುರುಳಿದ್ದು, ಪರಿಣಾಮ ಅವರ ಎಡಕಾಲು, ಮುಖ ಹಾಗೂ ಕಣ್ಣಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ.
ಈ ಕುರಿತು ಸ್ಕೂಟಿ ಸವಾರ ಕಿರಣ್ ಡಿಕುನ್ಹಾ ಅವರು ನೀಡಿದ ದೂರಿನ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


