Public Prime News

CLEAR VISION, TRUE MISSION

ಬಿಗ್ ಬ್ರೇಕಿಂಗ್: ಸಿಎಂ ನಿವಾಸದಲ್ಲಿ ಹೈವೋಲ್ಟೇಜ್ ಬ್ರೇಕ್‌ಫಾಸ್ಟ್‌ ಮೀಟಿಂಗ್; ಯಾರಿಗೆ ಸಿಗಲಿದೆ ಮುಂದಿನ ಪಟ್ಟ.?
politics

ಬಿಗ್ ಬ್ರೇಕಿಂಗ್: ಸಿಎಂ ನಿವಾಸದಲ್ಲಿ ಹೈವೋಲ್ಟೇಜ್ ಬ್ರೇಕ್‌ಫಾಸ್ಟ್‌ ಮೀಟಿಂಗ್; ಯಾರಿಗೆ ಸಿಗಲಿದೆ ಮುಂದಿನ ಪಟ್ಟ.?

Public Prime News

Public Prime News

Reported by Public Prime News

ಬೆಂಗಳೂರು: 

ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಮತ್ತು ರಾಜೀನಾಮೆಯ ಭಾರಿ ವದಂತಿಗಳ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ಹಮ್ಮಿಕೊಳ್ಳಲಾಗಿರುವ ಹೈವೋಲ್ಟೇಜ್ ಬ್ರೇಕ್‌ಫಾಸ್ಟ್‌ ಮೀಟಿಂಗ್ ತೀವ್ರ ಕುತೂಹಲ ಮೂಡಿಸಿದೆ. ರಾಜ್ಯ ಸರ್ಕಾರದ ಮುಂದಿನ ಭವಿಷ್ಯವನ್ನು ನಿರ್ಧರಿಸಲಿರುವ ಈ ನಿರ್ಣಾಯಕ ಸಭೆಯಲ್ಲಿ ಯಾರಲ್ಲಾ ಭಾಗಿಯಾಗಿದ್ದಾರೆ ಎಂಬ ಸಂಪೂರ್ಣ ವಿವರಗಳು ಈಗ ಹೊರಬಿದ್ದಿವೆ.


ಸಭೆಯಲ್ಲಿ ಭಾಗವಹಿಸಿರುವ ಪ್ರಮುಖ ನಾಯಕರ ಪಟ್ಟಿ:


ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಮಹತ್ವದ ಉಪಾಹಾರ ಸಭೆಯಲ್ಲಿ ಸರ್ಕಾರದ ಪ್ರಮುಖ ಸಚಿವರು ಹಾಗೂ ಹಿರಿಯ ನಾಯಕರು ಉಪಸ್ಥಿತರಿದ್ದಾರೆ.


  • ಡಿ.ಕೆ. |ಶಿವಕುಮಾರ್ (ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು)

  • ಡಾ. ಜಿ. ಪರಮೇಶ್ವರ್ (ಗೃಹ ಸಚಿವರು)

  • ಹೆಚ್.ಕೆ. ಪಾಟೀಲ್ (ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು)

  • ಕೆ.ಜೆ. ಜಾರ್ಜ್ (ಇಂಧನ ಸಚಿವರು)

  • ಕೆ.ಹೆಚ್. |ಮುನಿಯಪ್ಪ (ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು)

  • ರಾಮಲಿಂಗಾರೆಡ್ಡಿ (ಸಾರಿಗೆ ಸಚಿವರು)

  • ಎಂ.ಬಿ. ಪಾಟೀಲ್ (ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರು)

  • ಸತೀಶ್ ಜಾರಕಿಹೊಳಿ (ಲೋಕೋಪಯೋಗಿ ಸಚಿವರು)

  • ಪ್ರಿಯಾಂಕ್ ಖರ್ಗೆ (ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು)

  • ಜಮೀರ್ ಅಹಮದ್ ಖಾನ್ (ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು)

  • ಕೃಷ್ಣ ಬೈರೇಗೌಡ (ಕಂದಾಯ ಸಚಿವರು)

  • ಬೈರತಿ ಸುರೇಶ್ (ನಗರಾಭಿವೃದ್ಧಿ ಸಚಿವರು)


ಹೆಚ್.ಕೆ. ಪಾಟೀಲ್ ಮತ್ತು ಡಾ. ಜಿ. ಪರಮೇಶ್ವರ್ ಮುಂಚೂಣಿ ನಡೆ:

ಸಭೆ ಆರಂಭವಾಗುವುದಕ್ಕೂ ಮುನ್ನವೇ ಸಚಿವ ಹೆಚ್.ಕೆ. ಪಾಟೀಲ್ ಅವರು ಸಿಎಂ ನಿವಾಸಕ್ಕೆ ಆಗಮಿಸಿ ಸಿದ್ದರಾಮಯ್ಯ ಅವರೊಂದಿಗೆ ಪ್ರತ್ಯೇಕ ಹಾಗೂ ಸುದೀರ್ಘ ಚರ್ಚೆ ನಡೆಸಿದ್ದು ವಿಶೇಷವಾಗಿತ್ತು. ಅವರ ಬೆನ್ನಲ್ಲೇ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಕೂಡ ಆಗಮಿಸಿ ಸಭೆ ಸೇರಿಕೊಂಡರು.


ಬ್ರೇಕ್‌ಫಾಸ್ಟ್‌ ಮೀಟಿಂಗ್‌ನ ಮುಖ್ಯ ಅಜೆಂಡಾ ಏನು?:

ರಾಜಕೀಯ ಮೂಲಗಳ ಪ್ರಕಾರ, ಹೈಕಮಾಂಡ್‌ನಿಂದ ಬಂದಿರುವ ಸಂದೇಶಗಳು, ಮುಂದಿನ ನಾಯಕತ್ವದ ಬದಲಾವಣೆ, ಸಂಪುಟ ಸಹೋದ್ಯೋಗಿಗಳ ಒಮ್ಮತ ಮೂಡಿಸುವಿಕೆ ಮತ್ತು ಸದ್ಯ ಸೃಷ್ಟಿಯಾಗಿರುವ ರಾಜಕೀಯ ಗೊಂದಲಗಳಿಗೆ ತೆರೆ ಎಳೆಯುವ ಕುರಿತು ಈ ಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ. ಸಭೆಯ ನಂತರ ಸಚಿವರ ದಂಡಿನೊಂದಿಗೆ ಸಿಎಂ ಸಿದ್ದರಾಮಯ್ಯ ಅವರು ತೆಗೆದುಕೊಳ್ಳಲಿರುವ ಮುಂದಿನ ನಿರ್ಧಾರದ ಮೇಲೆ ಇಡೀ ರಾಜ್ಯದ ರಾಜಕೀಯ ವಲಯ ಕಣ್ಣಿಟ್ಟಿದೆ.

Share this story