Public Prime News

CLEAR VISION, TRUE MISSION

🚨 EBOLA ALERT: ಕೋವಿಡ್‌ಗಿಂತಲೂ ಭೀಕರ ಎಬೋಲಾ ವೈರಸ್ ಭೀತಿ! ರಾಜ್ಯಗಳಿಗೆ ಕೇಂದ್ರದ ಹೈ-ಅಲರ್ಟ್ ಮಾರ್ಗಸೂಚಿ ಪ್ರಕಟ..!
health

🚨 EBOLA ALERT: ಕೋವಿಡ್‌ಗಿಂತಲೂ ಭೀಕರ ಎಬೋಲಾ ವೈರಸ್ ಭೀತಿ! ರಾಜ್ಯಗಳಿಗೆ ಕೇಂದ್ರದ ಹೈ-ಅಲರ್ಟ್ ಮಾರ್ಗಸೂಚಿ ಪ್ರಕಟ..!

Public Prime News

Public Prime News

Reported by Public Prime News

ನವದೆಹಲಿ: 

ವಿಶ್ವದಾದ್ಯಂತ ಕೋವಿಡ್ ಸೃಷ್ಟಿಸಿದ್ದ ಆತಂಕದ ಬೆನ್ನಲ್ಲೇ ಈಗ ಮತ್ತೊಂದು ಅತ್ಯಂತ ಮಾರಣಾಂತಿಕವಾದ 'ಎಬೋಲಾ' (Ebola) ವೈರಸ್ ಭೀತಿ ಶುರುವಾಗಿದೆ. ಆಫ್ರಿಕಾ ಖಂಡದ ಹಲವು ದೇಶಗಳಲ್ಲಿ ಈ ವೈರಸ್ ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ದೇಶಾದ್ಯಂತ ಮುನ್ನೆಚ್ಚರಿಕೆ ವಹಿಸಿದೆ. ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೇಂದ್ರ ಆರೋಗ್ಯ ಸಚಿವಾಲಯ ತುರ್ತು ಆದೇಶ ಹೊರಡಿಸಿದೆ.


ವಿಮಾನ ನಿಲ್ದಾಣ ಹಾಗೂ ರಾಜ್ಯಗಳಿಗೆ ಕೇಂದ್ರದ ಕಠಿಣ ನಿಯಮಗಳು:


  • ಕ್ವಾರಂಟೈನ್ ಸೆಂಟರ್: 

  • ಶಂಕಿತರನ್ನು ಪ್ರತ್ಯೇಕಿಸಲು ಐಸೊಲೇಶನ್ ಸೌಲಭ್ಯವಿರುವ ಕೇಂದ್ರಗಳನ್ನು ತಕ್ಷಣವೇ ಸಿದ್ಧಪಡಿಸಬೇಕು.


  • ಕಡ್ಡಾಯ ತಪಾಸಣೆ:

  • ಎಬೋಲಾ ಬಾಧಿತ ದೇಶಗಳಿಂದ ಬಂದ ಪ್ರಯಾಣಿಕರ ಟ್ರಾವೆಲ್ ಹಿಸ್ಟರಿ ಹಾಗೂ ಆರೋಗ್ಯ ತಪಾಸಣೆ ಮಾಡುವುದು ಕಡ್ಡಾಯ.


  • ಮಾಸ್ಕ್ ಧರಿಸುವುದು: 

  • ವಿಮಾನ ನಿಲ್ದಾಣದ ಸಿಬ್ಬಂದಿ ತ್ರಿಬಲ್ ಲೇಯರ್ ಮಾಸ್ಕ್ ಮತ್ತು ಹ್ಯಾಂಡ್ ಗ್ಲೌಸ್ ಬಳಸುವುದು ಕಡ್ಡಾಯವಾಗಿದೆ.


  • ಐಸೊಲೇಶನ್ ನಿಯಮ: 

  • ಶಂಕಿತ ವ್ಯಕ್ತಿಗಳನ್ನು ಅಟ್ಯಾಚ್ಡ್ ಬಾತ್ ರೂಮ್ ಇರುವ ಪ್ರತ್ಯೇಕ ಕೊಠಡಿಯಲ್ಲೇ ಇಡಬೇಕು ಹಾಗೂ ಪಿಪಿಇ (PPE) ಕಿಟ್ ಧರಿಸಿದ ವೈದ್ಯರು ಮಾತ್ರ ತಪಾಸಣೆ ನಡೆಸಬೇಕು.


ಎಬೋಲಾ ಎಷ್ಟು ಡೆಡ್ಲಿ.?

ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ, ಎಬೋಲಾ ವೈರಸ್‌ನ ಸರಾಸರಿ ಮರಣ ಪ್ರಮಾಣ ಶೇಕಡಾ 50 ರಷ್ಟಿದೆ. ಅಂದರೆ ಸೋಂಕು ತಗುಲಿದ ಪ್ರತಿ ಇಬ್ಬರಲ್ಲಿ ಒಬ್ಬರು ಮರಣ ಹೊಂದುವ ಸಾಧ್ಯತೆ ಇರುತ್ತದೆ. ಇದು ಕೋವಿಡ್‌ಗಿಂತಲೂ ಅತ್ಯಂತ ವೇಗವಾಗಿ ಪ್ರಾಣ ಒಣಗಿಸುತ್ತದೆ.


 ಪ್ರಸ್ತುತ ಭಾರತದಲ್ಲಿ ಯಾವುದೇ ಎಬೋಲಾ ಪ್ರಕರಣಗಳು ಪತ್ತೆಯಾಗಿಲ್ಲ. ಸರ್ಕಾರವು ಮುನ್ನೆಚ್ಚರಿಕೆಯಾಗಿ ಈ ಕ್ರಮಗಳನ್ನು ಕೈಗೊಂಡಿರುವುದರಿಂದ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ.

Share this story