ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಸೂಡಿ ಕರೆಯು ತುಳುನಾಡಿನ ದೈವಾರಾಧನೆಯ ಇತಿಹಾಸದಲ್ಲಿ ತನ್ನದೇ ಆದ ಧಾರ್ಮಿಕ ಮಹತ್ವವನ್ನು ಹೊಂದಿದೆ.
ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಪಿಲಿಚಂಡಿ ಹಾಗೂ ಪರಿವಾರ ದೈವಗಳ ಸಾನಿಧ್ಯವು ಅತ್ಯಂತ ಕಾರಣಿಕ ಕ್ಷೇತ್ರವಾಗಿ ನಂಬಿಕೊಂಡು ಬಂದ ಸ್ಥಳವಾಗಿದೆ. ಆದರೆ, ಕಾಲಗರ್ಭದಲ್ಲಿ ಈ ಪವಿತ್ರ ಸಾನಿಧ್ಯವು ಅಜೀರ್ಣಾವಸ್ಥೆಗೆ ತಲುಪಿ, ದೈವಗಳ ಪರ್ವ ಮತ್ತು ನೇಮ-ನೇಮೋತ್ಸವಗಳು ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದವು.
ಪ್ರಸ್ತುತ, ಈ ಇತಿಹಾಸ ಪ್ರಸಿದ್ಧ ಧರ್ಮಕ್ಷೇತ್ರಕ್ಕೆ ಪುನಶ್ಚೇತನ ನೀಡುವ ಭಗವತ್ಕಾರ್ಯಕ್ಕೆ ಭಕ್ತಾದಿಗಳು ಚಾಲನೆ ನೀಡಿದ್ದಾರೆ. ಪ್ರಶ್ನಾ ಚಿಂತನೆ ಮತ್ತು ಪರಿಹಾರ ಮಾರ್ಗಸೂಡಿ ಧರ್ಮಚಾವಡಿಯ ಜೀರ್ಣೋದ್ದಾರ ಹಾಗೂ ಧರ್ಮದೈವಗಳ ಪುನರ್ ಪ್ರತಿಷ್ಠೆಯ ಕುರಿತು ಈಗಾಗಲೇ ಪ್ರಶ್ನಾ ಚಿಂತನೆ ನಡೆಸಿ, ಪರಿಹಾರ ಕಾರ್ಯಗಳನ್ನು ಪೂರೈಸಲಾಗಿದೆ. ಧರ್ಮಚಾವಡಿಯ ನಿರ್ಮಾಣ ಕಾರ್ಯವು ಈಗಾಗಲೇ ಯಶಸ್ವಿಯಾಗಿ ಆರಂಭಗೊಂಡಿದೆ.
ಧರ್ಮಚಾವಡಿಯ ಸ್ಥಳ ಪ್ರಶ್ನೆಯ ಸಂದರ್ಭದಲ್ಲಿ, ಸೂಡಿ ಗ್ರಾಮಕ್ಕೆ ಸಂಬಂಧಿಸಿದ ಪಿಲಿಚಂಡಿ ದೈವದ ಸ್ಥಾನದ ಪುನರ್ ನಿರ್ಮಾಣಕ್ಕೆ ಪ್ರತ್ಯೇಕವಾಗಿ ಪ್ರಶ್ನಾಚಿಂತನೆ ಇರಿಸಬೇಕಾಗಿ ಬಂದ ಹಿನ್ನೆಲೆಯಲ್ಲಿ, ಪ್ರಖ್ಯಾತ ಜೋಯಿಸರಾದ ಡಾ. ಮೋನಪ್ಪ ಆಚಾರ್ಯರ ಮೂಲಕ ಮತ್ತೊಮ್ಮೆ ಪ್ರಶ್ನಾ ಚಿಂತನೆಯನ್ನು ನಡೆಸಲಾಯಿತು. ನಂತರ, ಪ್ರಸಿದ್ಧ ಪುರೋಹಿತರಾದ ಶ್ರೀ ಬಾಲಕೃಷ್ಣ ಭಟ್ ಅವರ ದಿವ್ಯ ಮಾರ್ಗದರ್ಶನದಲ್ಲಿ ಅಗತ್ಯವಿದ್ದ ಎಲ್ಲಾ ಧಾರ್ಮಿಕ ಪರಿಹಾರ ಕಾರ್ಯಗಳನ್ನು ಅತ್ಯಂತ ಭಕ್ತಿ-ಶ್ರದ್ಧೆಗಳಿಂದ ನೆರವೇರಿಸಲಾಗಿದೆ.
ಭವ್ಯ ಶಿಲಾನ್ಯಾಸ ಕಾರ್ಯಕ್ರಮದೈವಸ್ಥಾನದ ಪುನರ್ ನಿರ್ಮಾಣದ ಪ್ರಮುಖ ಘಟ್ಟವಾದ ಶಿಲಾನ್ಯಾಸ ಕಾರ್ಯಕ್ರಮವನ್ನು ಅತ್ಯಂತ ಮಂಗಳಕರ ಮುಹೂರ್ತದಲ್ಲಿ ಹಮ್ಮಿಕೊಳ್ಳಲಾಗಿದೆ.
ದಿನಾಂಕ: 25-05-2026ನೇ ಸೋಮವಾರ
ಸಮಯ: ಬೆಳಿಗ್ಗೆ ಗಂಟೆ 7.55ರ ಶುಭ ಮಿಥುನ ಲಗ್ನದಲ್ಲಿ
ಈ ಪವಿತ್ರ ಧರ್ಮಕಾರ್ಯವನ್ನು ಸೂಡಿ ಮತ್ತು ಶಿರ್ಲಾಲಿನ ಕರೆಯ ಸಮಸ್ತ ಸದ್ಭಕ್ತರು ಒಟ್ಟಾಗಿ ಸೇರಿ ನೆರವೇರಿಸಲಿದ್ದಾರೆ.
ಜೀರ್ಣೋದ್ಧಾರ ಸಮಿತಿಯ ಮುಖಂಡತ್ವಈ ಪುನರ್ ನಿರ್ಮಾಣ ಕಾರ್ಯವನ್ನು ಯಶಸ್ವಿಯಾಗಿ ಮುನ್ನಡೆಸಲು ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಗಿದ್ದು, ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಮುಂಚೂಣಿಯಲ್ಲಿದ್ದಾರೆ:
ಶ್ರೀ ಸೂರಜ್ ಜೈನ್ – ಅಧ್ಯಕ್ಷರು, ಪಿಲಿಚಂಡಿ ದೈವಸ್ಥಾನ ಜೀರ್ಣೋದ್ಧಾರ ಸಮಿತಿ, ಸೂಡಿ ಶಿರ್ಲಾಲು
ಶ್ರೀ ದಯಾನಂದ ನಾಯಕ್ – ಕಾರ್ಯದರ್ಶಿ
ಶ್ರೀಮತಿ ಮರುದೇವಿ ಹಾಗೂ ಸೂಡಿ ಮನೆತನದವರು ಸೂಡಿ ಶಿರ್ಲಾಲು
ಕರೆಯ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು
ಸೂಡಿ ಕರೆಯ ಇತಿಹಾಸ ಪ್ರಸಿದ್ಧ ಪಿಲಿಚಂಡಿ ದೈವಸ್ಥಾನದ ಈ ಪುನರ್ ನಿರ್ಮಾಣ ಮತ್ತು ಶಿಲಾನ್ಯಾಸದ ಧರ್ಮಕಾರ್ಯದಲ್ಲಿ ಸಮಸ್ತ ಭಕ್ತಾಭಿಮಾನಿಗಳು, ಊರ-ಪರವೂರಿನ ಸದ್ಭಕ್ತರು ತನು-ಮನ-ಧನಗಳಿಂದ ಸಹಕರಿಸಿ, ಶ್ರೀ ಆದಿನಾಥ, ಶ್ರೀ ಪದ್ಮಾವತೀ ದೇವಿ ಹಾಗೂ ಪಿಲಿಚಂಡಿ ಪರಿವಾರ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.


