Public Prime News

CLEAR VISION, TRUE MISSION

ಕಾರ್ಮಿಕರಿಗೆ ಬಂಪರ್ ಕೊಡುಗೆ: ರಾಜ್ಯದಲ್ಲಿ ಕನಿಷ್ಠ ವೇತನ ಶೇ. 60 ರಷ್ಟು ಭಾರಿ ಏರಿಕೆ, ಸರ್ಕಾರದಿಂದ ಅದೇಶ..!
kannadanadi

ಕಾರ್ಮಿಕರಿಗೆ ಬಂಪರ್ ಕೊಡುಗೆ: ರಾಜ್ಯದಲ್ಲಿ ಕನಿಷ್ಠ ವೇತನ ಶೇ. 60 ರಷ್ಟು ಭಾರಿ ಏರಿಕೆ, ಸರ್ಕಾರದಿಂದ ಅದೇಶ..!

Public Prime News

Public Prime News

Reported by Public Prime News

ಬೆಂಗಳೂರು: 

ರಾಜ್ಯದ ಕೋಟ್ಯಂತರ ಕಾರ್ಮಿಕರ ಮೊಗದಲ್ಲಿ ಮಂದಹಾಸ ಮೂಡಿಸುವ ಮಹತ್ವದ ನಿರ್ಧಾರವೊಂದನ್ನು ಸರ್ಕಾರ ಪ್ರಕಟಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ರಾಜ್ಯದ ಕಾರ್ಮಿಕರ ಕನಿಷ್ಠ ವೇತನವನ್ನು ಸರಾಸರಿ ಶೇಕಡಾ 60 ರಷ್ಟು ಹೆಚ್ಚಳ ಮಾಡಿ ಶನಿವಾರ ಅಧಿಕೃತ ಆದೇಶ ಹೊರಡಿಸಿದೆ. ಸರ್ಕಾರದ ಈ ಕ್ರಾಂತಿಕಾರಿ ನಿರ್ಧಾರದಿಂದಾಗಿ ರಾಜ್ಯದ 1 ಕೋಟಿಗೂ ಅಧಿಕ ಅಸಂಘಟಿತ ಹಾಗೂ ನಿರ್ದಿಷ್ಟ ವಲಯದ ಕಾರ್ಮಿಕರಿಗೆ ನೇರ ಆರ್ಥಿಕ ಲಾಭ ಸಿಗಲಿದೆ.


ಈ ಹೊಸ ಪರಿಷ್ಕರಣೆಯೊಂದಿಗೆ, ಉತ್ತರ ಪ್ರದೇಶ ಮತ್ತು ಹರಿಯಾಣದ ನಂತರ ಇಂತಹ ಐತಿಹಾಸಿಕ ಕನಿಷ್ಠ ವೇತನ ಪರಿಷ್ಕರಣೆ ಆದೇಶ ಹೊರಡಿಸಿದ ದೇಶದ ಮೂರನೇ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.


ಸುಪ್ರೀಂ ಕೋರ್ಟ್ ಮಾರ್ಗಸೂಚಿ ಅನ್ವಯ ನಿರ್ಧಾರ

ಕಾರ್ಮಿಕರ ಕುಟುಂಬದ ಜೀವನ ನಿರ್ವಹಣಾ ವೆಚ್ಚ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು, 1991ರ ಸುಪ್ರೀಂ ಕೋರ್ಟ್‌ನ ಪ್ರಮುಖ ‘ರೆಪ್ಟಾಕೋಸ್ ಬ್ರೆಟ್’ ಪ್ರಕರಣದ ಮಾರ್ಗಸೂಚಿಗಳನ್ನು ಆಧರಿಸಿ ಈ ವೇತನ ಪರಿಷ್ಕರಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ:

"ಈ ಹಿಂದೆ ಇಎಸ್‌ಐ (ESI) ಮತ್ತು ಪಿಎಫ್ (PF) ಕಡಿತದ ನಂತರ ಕಾರ್ಮಿಕರ ಕೈಗೆ ಸಿಗುತ್ತಿದ್ದ ನಿವ್ವಳ ಸಂಬಳ ತೀರಾ ಕಡಿಮೆಯಿರುತ್ತಿತ್ತು. ಇದರಿಂದಾಗಿ ಹಲವರು ಬಡತನ ರೇಖೆಗಿಂತ ಕೆಳಗೆ (BPL) ಉಳಿಯುವಂತಾಗಿತ್ತು. ಈ ವೇತನ ಪರಿಷ್ಕರಣೆಯು ಅವರಿಗೆ ದೊಡ್ಡ ಆರ್ಥಿಕ ನೆಮ್ಮದಿ ನೀಡಲಿದೆ. ರಾಷ್ಟ್ರ ನಿರ್ಮಾಣದಲ್ಲಿ ಶ್ರಮಿಸುವ ಕಾರ್ಮಿಕರ ಜೀವನಮಟ್ಟ ಸುಧಾರಿಸಲು ಇದು ನಮ್ಮ ಸರ್ಕಾರ ಇಟ್ಟಿರುವ ಕ್ರಾಂತಿಕಾರಿ ಹೆಜ್ಜೆಯಾಗಿದೆ."


ವೇತನ ಅಂತಿಮಗೊಳಿಸುವ ಮುನ್ನ ಕಾರ್ಮಿಕ ಸಂಘಟನೆಗಳು, ಉದ್ಯೋಗದಾತರು, ತಜ್ಞರು ಹಾಗೂ ಕಾನೂನು ತಜ್ಞರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

Share this story