Public Prime News

CLEAR VISION, TRUE MISSION

ವೈದ್ಯಲೋಕವೇ ಶಾಕ್..! ಹೊಟ್ಟೆನೋವೆಂದು ಆಸ್ಪತ್ರೆ ಸೇರಿದ ಯುವಕನ ಹೊಟ್ಟೆಯಲ್ಲಿತ್ತು 7 ಕೆಜಿ ತೂಕದ ಅವಳಿ ಭ್ರೂಣ..!
health

ವೈದ್ಯಲೋಕವೇ ಶಾಕ್..! ಹೊಟ್ಟೆನೋವೆಂದು ಆಸ್ಪತ್ರೆ ಸೇರಿದ ಯುವಕನ ಹೊಟ್ಟೆಯಲ್ಲಿತ್ತು 7 ಕೆಜಿ ತೂಕದ ಅವಳಿ ಭ್ರೂಣ..!

Public Prime News

Public Prime News

Reported by Public Prime News

ವೈದ್ಯಕೀಯ ವಿಸ್ಮಯ:

ವೈದ್ಯಕೀಯ ಇತಿಹಾಸದಲ್ಲೇ ಅತ್ಯಂತ ಅಪರೂಪದಲ್ಲಿ ಅಪರೂಪ ಎನ್ನಬಹುದಾದ ಘಟನೆಯೊಂದು ಬೆಳಕಿಗೆ ಬಂದಿದ್ದು, ವೈದ್ಯರನ್ನೇ ದಿಗ್ಭ್ರಮೆಗೊಳಿಸಿದೆ. ತೀವ್ರ ಹೊಟ್ಟೆನೋವಿನ ಕಾರಣಕ್ಕಾಗಿ ಆಸ್ಪತ್ರೆಗೆ ದಾಖಲಾಗಿದ್ದ 22 ವರ್ಷದ ಯುವಕನೊಬ್ಬನ ದೇಹದೊಳಗೆ ಅವಳಿ ಭ್ರೂಣಗಳು (Twin Fetuses) ಪತ್ತೆಯಾಗಿವೆ! ಈ ಆಘಾತಕಾರಿ ಮತ್ತು ವಿಸ್ಮಯಕಾರಿ ಘಟನೆಗೆ ವೈದ್ಯಕೀಯ ಭಾಷೆಯಲ್ಲಿ 'ಫೀಟಸ್ ಇನ್ ಫೀಟು' (Fetus in Fetu) ಎಂದು ಕರೆಯಲಾಗುತ್ತದೆ.


ನಡೆದಿದ್ದೇನು.?

ಕಳೆದ ಕೆಲವು ದಿನಗಳಿಂದ ತೀವ್ರವಾದ ಹೊಟ್ಟೆನೋವು ಮತ್ತು ಹೊಟ್ಟೆ ಉಬ್ಬರದಿಂದ ಬಳಲುತ್ತಿದ್ದ ಯುವಕನನ್ನು ತಪಾಸಣೆಗಾಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಮೇಲ್ನೋಟಕ್ಕೆ ಇದು ಸಾಮಾನ್ಯ ಗೆಡ್ಡೆ (Tumor) ಇರಬಹುದು ಎಂದು ವೈದ್ಯರು ಶಂಕಿಸಿದ್ದರು. ಆದರೆ, ಯುವಕನಿಗೆ ಸ್ಕ್ಯಾನಿಂಗ್ ಮತ್ತು ಎಕ್ಸ್ರೇ ಮಾಡಿದಾಗ ವೈದ್ಯರ ಕಣ್ಣುಗಳೇ ಜಾತಕ ಪಕ್ಷಿಯಂತಾದವು. ಯುವಕನ ಹೊಟ್ಟೆಯೊಳಗೆ ಬರೋಬ್ಬರಿ 7 ಕೆಜಿ ತೂಕದ, ಭಾಗಶಃ ಬೆಳೆದಿದ್ದ ಎರಡು ಮಾನವ ಭ್ರೂಣಗಳು ಇರುವುದು ಪತ್ತೆಯಾಯಿತು.


ಏನಿದು 'ಫೀಟಸ್ ಇನ್ ಫೀಟು' ವಿಸ್ಮಯ?

ವೈದ್ಯರ ಪ್ರಕಾರ, ಇದು ಕೋಟ್ಯಂತರ ಜನರಲ್ಲಿ ಒಬ್ಬರಿಗೆ ಮಾತ್ರ ಕಂಡುಬರುವ ಅತ್ಯಂತ ವಿರಳವಾದ ಜನ್ಮಜಾತ ವೈಪರೀತ್ಯವಾಗಿದೆ. ತಾಯಿಯ ಗರ್ಭದಲ್ಲಿ ಅವಳಿ ಮಕ್ಕಳು ಬೆಳೆಯುತ್ತಿರುವಾಗ, ಒಂದು ಭ್ರೂಣವು ಮತ್ತೊಂದು ಭ್ರೂಣದ ದೇಹದೊಳಗೆ ಸೇರಿಕೊಂಡುಬಿಡುತ್ತದೆ. ಗರ್ಭಾವಸ್ಥೆಯಲ್ಲೇ ತಂಗಿ ಅಥವಾ ತಮ್ಮನ ದೇಹದೊಳಗೆ ಅಡಗಿಕೊಂಡ ಈ ಭ್ರೂಣವು, ಮಗು ಜನಿಸಿ ದೊಡ್ಡದಾಗುತ್ತಿದ್ದರೂ ಯುವಕನ ದೇಹದೊಳಗಿನ ರಕ್ತನಾಳಗಳ ಮೂಲಕವೇ ಪೋಷಣೆ ಪಡೆಯುತ್ತಾ ಬೆಳೆಯುತ್ತಾ ಹೋಗುತ್ತದೆ.


ಯಶಸ್ವಿ ಶಸ್ತ್ರಚಿಕಿತ್ಸೆ:

ಯುವಕನ ಹೊಟ್ಟೆಯಲ್ಲಿದ್ದ ಈ ಭ್ರೂಣಗಳಿಗೆ ಕೂದಲು, ಮೂಳೆಗಳು ಮತ್ತು ಅಂಗಾಗಗಳ ಭಾಗಶಃ ರಚನೆಗಳಿರುವುದನ್ನು ಕಂಡು ವೈದ್ಯರು ಆಶ್ಚರ್ಯಚಕಿತರಾದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪರಿಣಿತ ವೈದ್ಯರ ತಂಡವು ತಕ್ಷಣವೇ ಜಂಟಿ ಶಸ್ತ್ರಚಿಕಿತ್ಸೆಯನ್ನು ನಡೆಸಿ, ಯುವಕನ ಪ್ರಾಣಕ್ಕೆ ಯಾವುದೇ ಅಪಾಯವಾಗದಂತೆ ಆ 7 ಕೆಜಿ ತೂಕದ ಅವಳಿ ಭ್ರೂಣಗಳನ್ನು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ಸದ್ಯ ಯುವಕನು ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ.

Share this story