Public Prime News

CLEAR VISION, TRUE MISSION

ಎಲ್‌ಪಿಜಿ ಗ್ರಾಹಕರಿಗೆ ಬಿಗ್ ರಿಲೀಫ್: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ; ಸಿಗಲಿದೆ 'ಟ್ರಾನ್ಸ್‌ಫರ್ ವೌಚರ್' ಸೌಲಭ್ಯ.!
national-news

ಎಲ್‌ಪಿಜಿ ಗ್ರಾಹಕರಿಗೆ ಬಿಗ್ ರಿಲೀಫ್: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ; ಸಿಗಲಿದೆ 'ಟ್ರಾನ್ಸ್‌ಫರ್ ವೌಚರ್' ಸೌಲಭ್ಯ.!

Public Prime News

Public Prime News

Reported by Public Prime News

ನವದೆಹಲಿ: 

ಮನೆ ಮನೆಗೆ ಪೈಪ್‌ಲೈನ್ ಮೂಲಕ ಗ್ಯಾಸ್ (PNG - Piped Natural Gas) ಸಂಪರ್ಕ ಪಡೆಯುವ ದೇಶದ ಕೋಟ್ಯಂತರ ಗ್ರಾಹಕರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿ ಸುದ್ದಿ ನೀಡಿದೆ. ಎಲ್‌ಪಿಜಿ ನಿಯಂತ್ರಣ ಕಾಯ್ದೆಗೆ ಮಹತ್ವದ ತಿದ್ದುಪಡಿ ತಂದಿರುವ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯವು, ಗ್ರಾಹಕರಿಗೆ ಹೆಚ್ಚಿನ ನೆರವು ನೀಡುವ ಹೊಸ ನಿಯಮಾವಳಿಗಳನ್ನು ಜಾರಿಗೆ ತಂದಿದೆ.


ಏನಿದು ಹೊಸ ನಿಯಮ.? ಗ್ರಾಹಕರಿಗೆ ಹೇಗೆ ಲಾಭ.?

ಹಿಂದಿನ ನಿಯಮದ ಪ್ರಕಾರ, ಯಾರಾದರೂ ತಮ್ಮ ಮನೆಗೆ ಪಿಎನ್‌ಜಿ (ಪೈಪ್ ಗ್ಯಾಸ್) ಕನೆಕ್ಷನ್ ಪಡೆದರೆ, ಅವರು ತಮ್ಮಲ್ಲಿದ್ದ ಎಲ್‌ಪಿಜಿ (ಸಿಲಿಂಡರ್) ಸಂಪರ್ಕವನ್ನು ಕಡ್ಡಾಯವಾಗಿ ಶಾಶ್ವತವಾಗಿ ರದ್ದುಗೊಳಿಸಬೇಕಾಗಿತ್ತು. ಆದರೆ ಹೊಸ 'ಲಿಕ್ವಿಫೈಡ್ ಪೆಟ್ರೋಲಿexplorationಯಂ ಗ್ಯಾಸ್ (ಸರಬರಾಜು ಮತ್ತು ವಿತರಣೆ ನಿಯಂತ್ರಣ) ತಿದ್ದುಪಡಿ ಆದೇಶ' ಗ್ರಾಹಕರಿಗೆ ಎರಡು ಪ್ರಮುಖ ಆಯ್ಕೆಗಳನ್ನು ನೀಡಿದೆ


  • 30 ದಿನಗಳ ಕಾಲಾವಕಾಶ: 

  • ಗ್ರಾಹಕರು ಪಿಎನ್‌ಜಿ ಸಂಪರ್ಕ ಪಡೆದ 30 ದಿನಗಳ ಒಳಗಾಗಿ ತಮ್ಮ ಎಲ್‌ಪಿಜಿ ಸಂಪರ್ಕವನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸಬಹುದು.


  • ಟ್ರಾನ್ಸ್‌ಫರ್ ವೌಚರ್ (Transfer Voucher) ಸೌಲಭ್ಯ: 

  • ಪಿಎನ್‌ಜಿ ಸಂಪರ್ಕ ಪಡೆದ ನಂತರ ಗ್ರಾಹಕರು ತಮ್ಮ ಎಲ್‌ಪಿಜಿ ಸಂಪರ್ಕವನ್ನು ಸಂಪೂರ್ಣವಾಗಿ ಕಳೆದುಕೊಳ್ಳುವ ಅಗತ್ಯವಿಲ್ಲ. ಭವಿಷ್ಯದಲ್ಲಿ ಅವರು ಪೈಪ್ ಗ್ಯಾಸ್ ಸೌಲಭ್ಯವಿಲ್ಲದ (Non-PNG) ಪ್ರದೇಶಗಳಿಗೆ ವರ್ಗಾವಣೆಯಾದರೆ, ಅಲ್ಲಿ ಮತ್ತೆ ಎಲ್‌ಪಿಜಿ ಕನೆಕ್ಷನ್ ಪಡೆಯಲು ನೆರವಾಗುವ 'ಟ್ರಾನ್ಸ್‌ಫರ್ ವೌಚರ್' ಅನ್ನು ಪಡೆದುಕೊಳ್ಳಬಹುದು.


ಯಾರಿಗೆ ಇದರಿಂದ ಹೆಚ್ಚಿನ ಅನುಕೂಲ.?

ಕೇಂದ್ರ ಸರ್ಕಾರದ ಈ ನೂತನ ನಿರ್ಧಾರವು ದೇಶದ ಲಕ್ಷಾಂತರ ಜನರಿಗೆ ವರದಾನವಾಗಲಿದೆ:

  • ಉದ್ಯೋಗದ ನಿಮಿತ್ತ ನಿರಂತರವಾಗಿ ಬೇರೆ ಬೇರೆ ನಗರಗಳಿಗೆ ವರ್ಗಾವಣೆಯಾಗುವ ಉದ್ಯೋಗಿಗಳು.

  • ಬಾಡಿಗೆ ಮನೆಗಳಲ್ಲಿ ವಾಸಿಸುವ ಕುಟುಂಬಗಳು ಹಾಗೂ ವಲಸೆ ಕಾರ್ಮಿಕರು.

  • ಶಿಕ್ಷಣಕ್ಕಾಗಿ ಬೇರೆ ಊರುಗಳಿಗೆ ಸ್ಥಳಾಂತರಗೊಳ್ಳುವ ವಿದ್ಯಾರ್ಥಿಗಳು.


ಯಾಕೆ ಈ ಬದಲಾವಣೆ.? 

ಪೈಪ್ ಗ್ಯಾಸ್ (PNG) ಬಳಕೆಯನ್ನು ಉತ್ತೇಜಿಸುವುದು ಮತ್ತು ಜನರು ಯಾವುದೇ ಆತಂಕವಿಲ್ಲದೆ ಎಲ್‌ಪಿಜಿಯಿಂದ ಪಿಎನ್‌ಜಿಗೆ ಬದಲಾಗುವಂತೆ ಮಾಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಅಲ್ಲದೆ, ವರ್ಗಾವಣೆಯಾದಾಗ ಸಿಲಿಂಡರ್ ಇಲ್ಲದೆ ಪರದಾಡುವ ಸಮಸ್ಯೆಗೆ ಇದು ಶಾಶ್ವತ ಪರಿಹಾರ ನೀಡಲಿದೆ.

Share this story