Public Prime News

CLEAR VISION, TRUE MISSION

ಮಂಗಳೂರು: ನಾನೊಬ್ಬ ಪತ್ರಕರ್ತ ಎಂದು ಬೆದರಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ; ವಿಡಿಯೋ ವೈರಲ್ ಮಾಡಿದ ಖತರ್ನಾಕ್ ವ್ಯಕ್ತಿ ವಿರುದ್ಧ ಕೇಸ್..!
crime

ಮಂಗಳೂರು: ನಾನೊಬ್ಬ ಪತ್ರಕರ್ತ ಎಂದು ಬೆದರಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ; ವಿಡಿಯೋ ವೈರಲ್ ಮಾಡಿದ ಖತರ್ನಾಕ್ ವ್ಯಕ್ತಿ ವಿರುದ್ಧ ಕೇಸ್..!

Public Prime News

Public Prime News

Reported by Public Prime News

ಮಂಗಳೂರು: 

ನಗರದ ಬಂಟ್ಸ್ ಹಾಸ್ಟೆಲ್ ಜಂಕ್ಷನ್‌ನಲ್ಲಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ, ತಾನು ಮಾಧ್ಯಮದವನು ಎಂದು ಸುಳ್ಳು ಹೇಳಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ವರದಿಯಾಗಿದೆ. 


ಅಲ್ಲದೆ, ಈ ಸಂಪೂರ್ಣ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ ಅಪರಿಚಿತ ವ್ಯಕ್ತಿಯ ವಿರುದ್ಧ ಮಂಗಳೂರು ಸಂಚಾರ ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದೆ.


ಘಟನೆಯ ಹಿನ್ನೆಲೆ ಏನು.?


  • ವಾಹನ ತಪಾಸಣೆ ಮತ್ತು ತಕರಾರು: 

  • ಸೆಪ್ಟೆಂಬರ್ 9ರಂದು ಬೆಳಗ್ಗೆ ಬಂಟ್ಸ್ ಹಾಸ್ಟೆಲ್ ಜಂಕ್ಷನ್ ಬಳಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ನಂಬರ್ ಪ್ಲೇಟ್‌ಗೆ ಸ್ಟಿಕ್ಕರ್ ಅಂಟಿಸಿಕೊಂಡು ಬಂದಿದ್ದ ದ್ವಿತೀಯ ವಾಹನವನ್ನು ತಡೆದು ಫೋಟೋ ತೆಗೆಯಲು ಮುಂದಾದಾಗ ಸವಾರ ತಕರಾರು ತೆಗೆದಿದ್ದನು.


  • ಪತ್ರಕರ್ತನೋಗುವೆನೆಂದು ನಟಿಸಿದ ಆರೋಪಿ:

  • ಅಷ್ಟರಲ್ಲಿ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ತಾನು ಮಾಧ್ಯಮದವನು ಎಂದು ಹೇಳಿಕೊಂಡು ಪೊಲೀಸ್ ಸಿಬ್ಬಂದಿ ವಿರುದ್ಧ ಏರುಧ್ವನಿಯಲ್ಲಿ ಮಾತನಾಡಲು ಆರಂಭಿಸಿದನು.


ಬೆದರಿಕೆ ಮತ್ತು ವಿಡಿಯೋ ವೈರಲ್ ಕೃತ್ಯ


  • ಕರ್ತವ್ಯಕ್ಕೆ ಅಡ್ಡಿ:

  • "ನಮ್ಮ ಟ್ಯಾಕ್ಸ್‌ನಿಂದ ನೀವು ಬದುಕುವುದು, ನಿಮ್ಮ ವಿಡಿಯೋ ವೈರಲ್ ಮಾಡುತ್ತೇನೆ" ಎಂದು ಬೆದರಿಕೆಹಾಕಿದ ಆ ವ್ಯಕ್ತಿ, ಸುಮಾರು 15 ನಿಮಿಷಗಳ ಕಾಲ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ.


  • ತೇಜೋವಧೆ ಯತ್ನ: 

  • ಸ್ಥಳಕ್ಕೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ಆಗಮಿಸುವುದನ್ನು ಗಮನಿಸಿ ಅಲ್ಲಿಂದ ಪರಾರಿಯಾದ ಆರೋಪಿ, ತಾನು ಚಿತ್ರೀಕರಿಸಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಪೊಲೀಸ್ ಇಲಾಖೆಯ ವಿರುದ್ಧ ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ ಮೂಡಿಸಲು ಯತ್ನಿಸಿದ್ದಾನೆ.


ಸಾರ್ವಜನಿಕ ಸೇವಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಾಗೂ ಇಲಾಖೆಯ ತೇಜೋವಧೆಗೆ ಯತ್ನಿಸಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಕದ್ರಿ ಸಂಚಾರ ಪೊಲೀಸರು, ವಿಡಿಯೋ ಹಂಚಿಕೊಂಡಿರುವ ಖಾತೆಗಳು ಹಾಗೂ ಆರೋಪಿಯ ಗುರುತು ಪತ್ತೆಹಚ್ಚಲು ತೀವ್ರ ತನಿಖೆ ನಡೆಸುತ್ತಿದ್ದಾರೆ. ಸಂಚಾರ ನಿಯಮ ತಪಾಸಣೆ ವೇಳೆ ಸಾರ್ವಜನಿಕರು ಕಾನೂನುಬದ್ಧವಾಗಿ ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

Share this story