Public Prime News

CLEAR VISION, TRUE MISSION

ಸರ್ಕಾರಿ ಶಾಲೆ ಉಳಿಸಲು ಶಿಕ್ಷಕನ ಮಾಸ್ಟರ್ ಪ್ಲಾನ್: ಹೊಸದಾಗಿ ಸೇರೋ ಪ್ರತಿ ಮಗುವಿನ ಹೆಸರಲ್ಲೂ ಸ್ವಂತ ಖರ್ಚಿನಲ್ಲಿ ₹1000 ಫಿಕ್ಸೆಡ್ ಡೆಪಾಸಿಟ್..!
education

ಸರ್ಕಾರಿ ಶಾಲೆ ಉಳಿಸಲು ಶಿಕ್ಷಕನ ಮಾಸ್ಟರ್ ಪ್ಲಾನ್: ಹೊಸದಾಗಿ ಸೇರೋ ಪ್ರತಿ ಮಗುವಿನ ಹೆಸರಲ್ಲೂ ಸ್ವಂತ ಖರ್ಚಿನಲ್ಲಿ ₹1000 ಫಿಕ್ಸೆಡ್ ಡೆಪಾಸಿಟ್..!

Public Prime News

Public Prime News

Reported by Public Prime News

ಗದಗ: 

ಖಾಸಗಿ ಶಾಲೆಗಳ ವ್ಯಾಮೋಹದ ಮಧ್ಯೆ ಸರ್ಕಾರಿ ಶಾಲೆಯನ್ನು ಉಳಿಸಲು ಗದಗ ತಾಲೂಕಿನ ಅಂತೂರು-ಬೆಂತೂರು ಗ್ರಾಮದ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರಾದ ಎಚ್.ಎಂ. ಖಾಜಿ ಅವರು ವಿಶಿಷ್ಟ ಹೆಜ್ಜೆ ಇಟ್ಟಿದ್ದಾರೆ. ಪ್ರಸಕ್ತ ಸಾಲಿನಲ್ಲಿ ತಮ್ಮ ಶಾಲೆಯ 1ನೇ ತರಗತಿಗೆ ಸೇರುವ ಪ್ರತಿ ಮಗುವಿನ ಹೆಸರಿನಲ್ಲಿ ಸ್ವಂತ ಖರ್ಚಿನಲ್ಲಿ ₹1,000 ಫಿಕ್ಸೆಡ್ ಡೆಪಾಸಿಟ್ (FD) ಮಾಡಿಸುವುದಾಗಿ ಬಂಪರ್ ಆಫರ್ ನೀಡಿದ್ದಾರೆ.


ಯೋಜನೆ ಹೀಗಿದೆ: 

ದಾಖಲಾಗುವ ಮಗುವಿನ ಹೆಸರಲ್ಲಿ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಹಣವನ್ನು ಎಫ್‌ಡಿ ಮಾಡಿಸಲಾಗುತ್ತದೆ. ಮಗು ಈ ಶಾಲೆಯಲ್ಲಿ 7ನೇ ತರಗತಿ ಮುಗಿಸಿ ಹೊರಹೋಗುವಾಗ, ಆ ಹಣವನ್ನು ಬಡ್ಡಿ ಸಮೇತ ಮುಂದಿನ ವಿದ್ಯಾಭ್ಯಾಸಕ್ಕಾಗಿ ಪೋಷಕರಿಗೆ ಹಸ್ತಾಂತರಿಸಲಾಗುತ್ತದೆ.


ಬಾಯಿ ಮಾತಿನಲ್ಲಿ ಸರ್ಕಾರಿ ಶಾಲೆ ಉಳಿಸಿ ಎನ್ನುವವರ ಮಧ್ಯೆ, ಸ್ವಂತ ಹಣ ವಿನಿಯೋಗಿಸಿ ಶಾಲೆಯ ಹಾಗೂ ಮಕ್ಕಳ ಭವಿಷ್ಯಕ್ಕಾಗಿ ಶ್ರಮಿಸುತ್ತಿರುವ ಈ ಮಾದರಿ ಶಿಕ್ಷಕನ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

Share this story