Public Prime News

CLEAR VISION, TRUE MISSION

ಐಫೋನ್ ಗ್ರಾಹಕರೇ ಇರಲಿ ಎಚ್ಚರ! ನಿಮ್ಮ ಫೋನ್ ಕಳೆದುಹೋದರೆ ಕಾದು ಕುಳಿತಿದೆ 'ಹೈಬ್ರಿಡ್ ಸೈಬರ್' ವಂಚನೆ ಜಾಲ: ಗೃಹ ಸಚಿವಾಲಯದಿಂದ ಬಿಗ್ ವಾರ್ನಿಂಗ್..!
crime

ಐಫೋನ್ ಗ್ರಾಹಕರೇ ಇರಲಿ ಎಚ್ಚರ! ನಿಮ್ಮ ಫೋನ್ ಕಳೆದುಹೋದರೆ ಕಾದು ಕುಳಿತಿದೆ 'ಹೈಬ್ರಿಡ್ ಸೈಬರ್' ವಂಚನೆ ಜಾಲ: ಗೃಹ ಸಚಿವಾಲಯದಿಂದ ಬಿಗ್ ವಾರ್ನಿಂಗ್..!

Public Prime News

Public Prime News

Reported by Public Prime News

ನವದೆಹಲಿ:
ನಿಮ್ಮ ದುಬಾರಿ ಐಫೋನ್ (iPhone) ಕಳೆದುಹೋದರೆ ಅಥವಾ ಕಳುವಾದರೆ, ನಿಮ್ಮ ಐಕ್ಲೌಡ್ (iCloud) ಖಾತೆಯನ್ನು ಹ್ಯಾಕ್ ಮಾಡಲು ಸೈಬರ್ ಕಳ್ಳರು ಹೊಸ ಸ್ಕೆಚ್ ಹಾಕಿದ್ದಾರೆ. ಈ ‘ಹೈಬ್ರಿಡ್ ಸೈಬರ್ ಕ್ರೈಮ್’ ಕುರಿತು ಕೇಂದ್ರ ಗೃಹ ಸಚಿವಾಲಯದ (I4C) ಸಂಸ್ಥೆ ದೇಶಾದ್ಯಂತ ತುರ್ತು ಮುನ್ನೆಚ್ಚರಿಕೆ ನೀಡಿದೆ.

ಏನಿದು 'ಹೈಬ್ರಿಡ್ ಸೈಬರ್ ಕ್ರೈಮ್'? ವಂಚಕರು ಜಾಲ ಬೀಸುವುದು ಹೇಗೆ.?


ಯಾರದ್ದಾದರೂ ಐಫೋನ್ ಇತ್ತೀಚೆಗೆ ಕಳೆದುಹೋದಾಗ ಅಥವಾ ಕಳುವಾದಾಗ ಅವರು ಅನುಭವಿಸುವ ಆತಂಕ ಮತ್ತು ತರಾತುರಿಯನ್ನೇ ಈ ವಂಚಕರು ತಮ್ಮ ಬಂಡವಾಳ ಮಾಡಿಕೊಳ್ಳುತ್ತಾರೆ. 


ನಕಲಿ ಸಂದೇಶ: 
ಐಫೋನ್ ಕಳೆದುಕೊಂಡ ತರಾತುರಿಯಲ್ಲಿರುವ ಗ್ರಾಹಕರಿಗೆ "ನಿಮ್ಮ ಫೋನ್ ಲೊಕೇಶನ್ ಸಿಕ್ಕಿದೆ" ಎಂದು ನಂಬಿಸಿ ವಂಚಕರು ಲಿಂಕ್ ಇರುವ ಎಸ್‌ಎಂಎಸ್ ಅಥವಾ ವಾಟ್ಸಾಪ್ ಸಂದೇಶ ಕಳುಹಿಸುತ್ತಾರೆ.

  1. ನಕಲಿ ವೆಬ್‌ಸೈಟ್:

  2. ಆ ಲಿಂಕ್ ಕ್ಲಿಕ್ ಮಾಡಿದರೆ ಅದು ಆಪಲ್ ಅಧಿಕೃತ ಪೇಜ್‌ನಂತೆಯೇ ಕಾಣುವ ನಕಲಿ ವೆಬ್‌ಸೈಟ್‌ಗೆ ಕರೆದೊಯ್ಯುತ್ತದೆ.


  3. ಖಾತೆ ಹ್ಯಾಕ್: 

  4. ಅಲ್ಲಿ ಗ್ರಾಹಕರು ತಮ್ಮ (iCloud) ಐಡಿ ಮತ್ತು ಪಾಸ್‌ವರ್ಡ್ ದಾಖಲಿಸುತ್ತಿದ್ದಂತೆ, ಹ್ಯಾಕರ್‌ಗಳು ಇಡೀ ಖಾತೆಯನ್ನು ತಮ್ಮ ವಶಕ್ಕೆ ಪಡೆಯುತ್ತಾರೆ.


ಬಚಾವಾಗಲು 4 ಪ್ರಮುಖ ಸಲಹೆಗಳು:


  • ಅಧಿಕೃತ ಆಪ್ ಬಳಸಿ: 

  • ಕಳೆದುಹೋದ ಫೋನ್ ಟ್ರ್ಯಾಕ್ ಮಾಡಲು ಕೇವಲ ಆಪಲ್‌ನ ಅಧಿಕೃತ ‘Find My’ ಆಪ್ ಅಥವಾ icloud.com ಮಾತ್ರ ಬಳಸಿ.


  • ಲಿಂಕ್ ಕ್ಲಿಕ್ ಮಾಡಬೇಡಿ:

  • ಲೊಕೇಶನ್ ಸಿಕ್ಕಿದೆ ಎಂದು ಬರುವ ಯಾವುದೇ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.


  • ರಹಸ್ಯ ಮಾಹಿತಿ ನೀಡಬೇಡಿ: 

  • ಆಪಲ್ ಸಂಸ್ಥೆ ಎಂದಿಗೂ ನಿಮ್ಮ ಪಾಸ್‌ವರ್ಡ್ ಅಥವಾ ಒಟಿಪಿ ಕೇಳುವುದಿಲ್ಲ.


  • 2FA ಆನ್ ಮಾಡಿ:

  • ನಿಮ್ಮ ಐಕ್ಲೌಡ್ ಖಾತೆಗೆ ತಕ್ಷಣವೇ ಟೂ-ಫ್ಯಾಕ್ಟರ್ ಅಥೆಂಟಿಕೇಶನ್ (2FA) ಸಕ್ರಿಯಗೊಳಿಸಿ.


 ನಿಮ್ಮ ಒಂದು ಸಣ್ಣ ತರಾತುರಿ ಇಡೀ ಐಕ್ಲೌಡ್ ಖಾತೆಯನ್ನು ವಂಚಕರ ಕೈಗೊಪ್ಪಿಸಬಹುದು. ಜಾಗರೂಕರಾಗಿರಿ..!

Share this story