Public Prime News

CLEAR VISION, TRUE MISSION

ಕಟೀಲು ಕ್ಷೇತ್ರ: ಇಂದಿನಿಂದ ಹೊಸ ನಿಯಮಗಳು ಕಡ್ಡಾಯ!
kannadanadi

ಕಟೀಲು ಕ್ಷೇತ್ರ: ಇಂದಿನಿಂದ ಹೊಸ ನಿಯಮಗಳು ಕಡ್ಡಾಯ!

Public Prime News

Public Prime News

Reported by Public Prime News

  • ಕ್ಷೇತ್ರದ ಪಾವಿತ್ರ್ಯತೆ ಮತ್ತು ದಿವ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಆಡಳಿತ ಮಂಡಳಿಯು ಈ ಕೆಳಗಿನ ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಭಕ್ತರು ಇವುಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಸೂಚಿಸಿದೆ.


  • ಮೊಬೈಲ್ ಬ್ಯಾನ್:

  • ದೇವಸ್ಥಾನದ ಒಳಗೆ ಮೊಬೈಲ್ ಬಳಕೆ ಮತ್ತು ಫೋಟೋ/ವಿಡಿಯೋ ತೆಗೆಯುವುದು ಕಂಪ್ಲೀಟ್ ನಿಷೇಧ.


  • ಡ್ರೆಸ್ ಕೋಡ್:

  • ಕಡ್ಡಾಯವಾಗಿ ಭಾರತೀಯ ಸಾಂಪ್ರದಾಯಿಕ ಉಡುಪು ಮಾತ್ರ ಧರಿಸಬೇಕು.


  • ನೋ ಚರ್ಮದ ವಸ್ತುಗಳು:

  • ಲೆದರ್ ಬೆಲ್ಟ್, ಪರ್ಸ್ ಹಾಗೂ ಛತ್ರಿ, ಕೋಲುಗಳನ್ನು ಒಳಗೆ ತರುವಂತಿಲ್ಲ.


  • ನೋ ಎಳನೀರು/ತಂಬಾಕು: 

  • ರಥಬೀದಿ ಮತ್ತು ನಂದಿನಿ ನದಿ ಆವರಣದಲ್ಲಿ ಎಳನೀರು ಕುಡಿಯುವುದು, ಧೂಮಪಾನ ಹಾಗೂ ಗುಟ್ಕಾ ನಿಷೇಧಿಸಲಾಗಿದೆ.


  • ಮಲ್ಲಿಗೆ ಹೂವಿನ ನಿಯಮ:

  • ದೇವಿಗೆ ತರುವ ಮಲ್ಲಿಗೆ ಹೂವನ್ನು ಕೇವಲ ಬಾಳೆ ನಾರಿನಿಂದ (ಹಗ್ಗ) ಮಾತ್ರ ಕಟ್ಟಿರಬೇಕು.


  • ಪ್ರವೇಶ ನಿರ್ಬಂಧ:

    • 7 ತಿಂಗಳ ಮೇಲ್ಪಟ್ಟ ಗರ್ಭಿಣಿಯರಿಗೆ ಪ್ರವೇಶವಿಲ್ಲ.

    • ಮುಟ್ಟಿನ 5 ದಿನಗಳು ಹಾಗೂ ಜನನ-ಮರಣ ಸೂತಕದ ಅವಧಿಯಲ್ಲಿ ಬರಬಾರದು.

    • ಮಾಂಸಾಹಾರ/ಮದ್ಯಪಾನ ಮಾಡಿದವರಿಗೆ ದರ್ಶನವಿಲ್ಲ (ಸ್ನಾನ ಕಡ್ಡಾಯ).


  • ವಿಶೇಷ ದಿನ: ಏಕಾದಶಿಯಂದು ಯಾವುದೇ ವಿಶೇಷ ಪೂಜೆ ಇರುವುದಿಲ್ಲ.

(ಗಮನಿಸಿ: ವಾರಾಂತ್ಯದಲ್ಲಿ ಜನಸಂದಣಿ ಇರುವುದರಿಂದ ಅನ್ನಪ್ರಸಾದ ಮತ್ತು ವಸತಿ ವ್ಯವಸ್ಥೆಯಲ್ಲಿ ವ್ಯತ್ಯಾಸವಾದರೆ ಸಹಕರಿಸಲು ಕೋರಲಾಗಿದೆ).

Share this story