Public Prime News

CLEAR VISION, TRUE MISSION

ಪುತ್ತೂರು: ಕೆಲಸಕ್ಕೆ ಹೊರಟಿದ್ದ ಮಹಿಳೆಗೆ ಆಟೋದಲ್ಲೇ ಲೈಂಗಿಕ ಕಿರುಕುಳ; ಚಾಲಕ ಅರೆಸ್ಟ್..!
crime

ಪುತ್ತೂರು: ಕೆಲಸಕ್ಕೆ ಹೊರಟಿದ್ದ ಮಹಿಳೆಗೆ ಆಟೋದಲ್ಲೇ ಲೈಂಗಿಕ ಕಿರುಕುಳ; ಚಾಲಕ ಅರೆಸ್ಟ್..!

Public Prime News

Public Prime News

Reported by Public Prime News

ಪುತ್ತೂರು: 

ದೈನಂದಿನ ಕೆಲಸದ ನಿಮಿತ್ತ ಮನೆಯಿಂದ ಹೊರಟಿದ್ದ ಮಹಿಳೆಗೆ ಆಟೋ ರಿಕ್ಷಾದಲ್ಲಿಯೇ ಲೈಂಗಿಕ ಕಿರುಕುಳ ನೀಡಿದ ಗಂಭೀರ ಘಟನೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಘಟನೆಯ ವಿವರ: 

ಸೆಪ್ಟೆಂಬರ್ 9ರಂದು ಬೆಳಗ್ಗೆ ಸ್ಥಳೀಯ ನಿವಾಸಿಯೊಬ್ಬರು ಪುತ್ತೂರಿಗೆ ತೆರಳಲು  ಬಾಲಕೃಷ್ಣ ಎಂಬಾತನ ಆಟೋದಲ್ಲಿ (KA-21-B-2011) ಪ್ರಯಾಣಿಸುತ್ತಿದ್ದರು. ಈ ವೇಳೆ ಮಾರ್ಗ ಮಧ್ಯೆ ನಿಗದಿತ ದಾರಿ ಬದಲಿಸಿದ ಚಾಲಕ, ರಿಕ್ಷಾವನ್ನು ಕುರಿಯ ಎಂಬ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಅನುಚಿತವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ.


ಪೊಲೀಸರ ಚುರುಕಿನ ಕಾರ್ಯಾಚರಣೆ: 

ಮಹಿಳೆಯ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 74, 75 ಹಾಗೂ 64ರ ಅಡಿಯಲ್ಲಿ ಪ್ರಕರಣ (ಅಪರಾಧ ಸಂಖ್ಯೆ: 117/2026) ದಾಖಲಿಸಿಕೊಳ್ಳಲಾಗಿದೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಚಾಲಕ ಬಾಲಕೃಷ್ಣನನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.

Share this story