Public Prime News

CLEAR VISION, TRUE MISSION

ಉಡುಪಿ: ಗಾಜಿನ ಬ್ಲಾಕ್ ಇಳಿಸುವ ವೇಳೆ ಅವಘಡ; ಸಾಮಾಜಿಕ ಕಾರ್ಯಕರ್ತ ಸುನಿಲ್ ಬೈಲಕೆರೆ ಮೃತ್ಯು.!
local-news

ಉಡುಪಿ: ಗಾಜಿನ ಬ್ಲಾಕ್ ಇಳಿಸುವ ವೇಳೆ ಅವಘಡ; ಸಾಮಾಜಿಕ ಕಾರ್ಯಕರ್ತ ಸುನಿಲ್ ಬೈಲಕೆರೆ ಮೃತ್ಯು.!

Public Prime News

Public Prime News

Reported by Public Prime News

ಉಡುಪಿ:
ನಿಟ್ಟೂರಿನ ಶ್ರೀದೇವಿ ಗ್ಲಾಸ್ ಫ್ಯಾಕ್ಟರಿಯಲ್ಲಿ ಗಾಜಿನ ಬ್ಲಾಕ್‌ಗಳನ್ನು ಇಳಿಸುತ್ತಿದ್ದ ವೇಳೆ ಸಂಭವಿಸಿದ ಅವಘಡದಲ್ಲಿ 45 ವರ್ಷದ ಸುನಿಲ್ ಬೈಲಕೆರೆ ಮೃತಪಟ್ಟಿದ್ದಾರೆ. ಅವರು ರಿಕ್ಷಾ ಚಾಲಕರಾಗಿದ್ದು, ಸಾಮಾಜಿಕ ಸೇವೆಯಲ್ಲೂ ಸಕ್ರಿಯರಾಗಿದ್ದರು.

ಉಡುಪಿ ಶ್ರೀಕೃಷ್ಣ ಮಠದ ಪರಿಸರದ ನಿವಾಸಿಯಾಗಿದ್ದ ಸುನಿಲ್, ಶಿರೂರು ಮಠದ ದಿವಂಗತ ಲಕ್ಷ್ಮೀವರ ತೀರ್ಥ ಶ್ರೀಪಾದರ ಆಪ್ತರಾಗಿದ್ದರು. ಶ್ರೀಗಳ ಕಾರು ಚಾಲಕರಾಗಿಯೂ ಸೇವೆ ಸಲ್ಲಿಸಿದ್ದರು.

ನಗರದಲ್ಲಿ ಯಾವುದೇ ಅನಾಹುತ ಸಂಭವಿಸಿದರೂ ಪ್ರತಿಫಲದ ನಿರೀಕ್ಷೆಯಿಲ್ಲದೆ ನೆರವಿಗೆ ಧಾವಿಸುತ್ತಿದ್ದ ಅವರು, ಕಲ್ಸಂಕ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ಉಂಟಾದಾಗ ಪೊಲೀಸರೊಂದಿಗೆ ಕೈಜೋಡಿಸಿ ಸಂಚಾರ ಸುಗಮಗೊಳಿಸಲು ಸಹಕರಿಸುತ್ತಿದ್ದರು.

ಸಾರ್ವಜನಿಕರ ನೆರವಿಗೆ ಸದಾ ಸಿದ್ಧರಾಗಿದ್ದ ಸುನಿಲ್ ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು ಹಾಗೂ ಪರಿಚಿತರು ದುಃಖತಪ್ತರಾಗಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.
Share this story