ನವದೆಹಲಿ:
ಪಿಂಚಣಿ ಸಂಬಂಧಿತ ಪ್ರಮುಖ ಸಮಸ್ಯೆಗಳು, ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಕ ಯೋಜನೆ ಹಾಗೂ ಬಹುಕಾಲದ ಬೇಡಿಕೆಯಾದ ಐದು ದಿನಗಳ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೊಳಿಸುವಲ್ಲಿ ಆಗುತ್ತಿರುವ ವಿಳಂಬವನ್ನು ಖಂಡಿಸಿ, ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (
ಸತತ ನಾಲ್ಕು ದಿನಗಳ ಕಾಲ ಬ್ಯಾಂಕಿಂಗ್ ಸೇವೆಗೆ ಸಂಚಕಾರ
ಮುಷ್ಕರವು ಸಾರ್ವಜನಿಕರ ಮೇಲೆ ನೇರ ಪರಿಣಾಮ ಬೀರಲಿದೆ:
ಸೆಪ್ಟೆಂಬರ್ 11 (ಶುಕ್ರವಾರ):
ಬ್ಯಾಂಕ್ ನೌಕರರ ರಾಷ್ಟ್ರವ್ಯಾಪಿ ಮುಷ್ಕರ
ಸೆಪ್ಟೆಂಬರ್ 12 & 13:
ಶನಿವಾರ ಮತ್ತು ಭಾನುವಾರ ವಾರಾಂತ್ಯದ ರಜೆ.
ಸೆಪ್ಟೆಂಬರ್ 14 (ಸೋಮವಾರ):
ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಇರಲಿದೆ.
ಹೀಗಾಗಿ, ಮುಷ್ಕರ ಯಶಸ್ವಿಯಾದರೆ ಕೆಲವು ಪ್ರದೇಶಗಳಲ್ಲಿ ಸತತ ನಾಲ್ಕು ದಿನಗಳವರೆಗೆ ಬ್ಯಾಂಕಿಂಗ್ ವಹಿವಾಟುಗಳು ಸಂಪೂರ್ಣಸ್ತಬ್ಧಗೊಳ್ಳುವ ಆತಂಕ ಎದುರಾಗಿದೆ.
ಬ್ಯಾಂಕ್ ನೌಕರರ ಪ್ರಮುಖ ಬೇಡಿಕೆಗಳೇನು..?
ಐದು ದಿನಗಳ ಬ್ಯಾಂಕಿಂಗ್ ಜಾರಿ:
2024ರ ಮಾರ್ಚ್ 8ರಂದು ಸಹಿ ಹಾಕಲಾದ 12ನೇ ದ್ವಿಪಕ್ಷೀಯ ಒಪ್ಪಂದದ ಪ್ರಕಾರ, ವಾರದಲ್ಲಿ 5 ದಿನಗಳ ಕೆಲಸದ ವ್ಯವಸ್ಥೆಗೆ ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ (IBA) ಒಪ್ಪಿಗೆ ಸೂಚಿಸಿತ್ತು.
ಪಿಂಚಣಿ ಸಮಸ್ಯೆಗಳು:
ಪಿಂಚಣಿ ಪರಿಷ್ಕರಣೆ, ಎಲ್ಲ ಪಿಂಚಣಿದಾರರಿಗೆ ಸಮಾನ ತುಟ್ಟಿಭತ್ಯೆ (DA) ಸೂತ್ರ ಹಾಗೂ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಡಿಯಲ್ಲಿ (NPS) ಬರುವ ನೌಕರರಿಗೆ ಹಳೆಯ ಪಿಂಚಣಿ ಯೋಜನೆಗೆ (OPS) ಮರಳಲು ಅವಕಾಶ ಕಲ್ಪಿಸುವುದು.
ಪ್ರೋತ್ಸಾಹಕ ಯೋಜನೆ (PLI) ವಿವಾದ:
ಹಿರಿಯ ಅಧಿಕಾರಿಗಳ ಪ್ರೋತ್ಸಾಹಕ ಯೋಜನೆಗೆ ಸಂಬಂಧಿಸಿದಂತೆ ಏಕಪಕ್ಷೀಯ ಧೋರಣೆ ಅನುಸರಿಸುತ್ತಿರುವುದನ್ನು ಒಕ್ಕೂಟ ವಿರೋಧಿಸಿದೆ.
ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಎಚ್ಚರಿಕೆ
ದೇಶದ 9 ಪ್ರಮುಖ ಬ್ಯಾಂಕ್ ನೌಕರರು ಹಾಗೂ ಅಧಿಕಾರಿಗಳ ಸಂಘಟನೆಗಳ ಒಕ್ಕೂಟವಾಗಿರುವ UFBU, ಸರ್ಕಾರದ ಧೋರಣೆ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಸಿದೆ:
ಸೆಪ್ಟೆಂಬರ್ 28ರಿಂದ 30ರವರೆಗೆ:
ಮೂರು ದಿನಗಳ ಕಾಲ ದೇಶವ್ಯಾಪಿ ಮುಷ್ಕರ.
ಅಕ್ಟೋಬರ್ 26ರಿಂದ:
ಸರ್ಕಾರದ ಕಡೆಯಿಂದ ಸೂಕ್ತ ಸ್ಪಂದನೆ ಸಿಗದಿದ್ದರೆ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸುವುದಾಗಿ ಒಕ್ಕೂಟ ಎಚ್ಚರಿಕೆ ನೀಡಿದೆ
ಗ್ರಾಹಕರಿಗೆ ಸಲಹೆ:
ಮುಷ್ಕರದ ಹಿನ್ನೆಲೆಯಲ್ಲಿ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಮಾಡಬೇಕಾದ ಪ್ರಮುಖ ಕೆಲಸಗಳನ್ನು (ಹಣ ಜಮಾ, ಚೆಕ್ ಕ್ಲಿಯರೆನ್ಸ್, ಕೆವೈಸಿ ಮುಂತಾದವು) ಮುಂಚಿತವಾಗಿ ಪೂರ್ಣಗೊಳಿಸುವುದು ಉತ್ತಮ.


