Public Prime News

CLEAR VISION, TRUE MISSION

ನಮ್ಮ ನಾಯಕರ ಏಳಿಗೆಯನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ: ಸಚಿವ ಜಾರಕಿಹೊಳಿ ಪರ ನಿಂತ ಡಿ.ಕೆ. ಶಿವಕುಮಾರ್
politics

ನಮ್ಮ ನಾಯಕರ ಏಳಿಗೆಯನ್ನು ಬಿಜೆಪಿಗೆ ಸಹಿಸಲು ಆಗುತ್ತಿಲ್ಲ: ಸಚಿವ ಜಾರಕಿಹೊಳಿ ಪರ ನಿಂತ ಡಿ.ಕೆ. ಶಿವಕುಮಾರ್

Public Prime News

Public Prime News

Reported by Public Prime News

ಬೆಂಗಳೂರು: 

ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಸಚಿವ ಸತೀಶ್ ಜಾರಕಿಹೊಳಿ ಅವರ ಮೇಲಿನ ಇಡಿ ದಾಳಿಯು ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದರು.


ನಮ್ಮ ಪಕ್ಷದಲ್ಲಿ ಅತಿ ಹೆಚ್ಚು ಹಿಂದುಳಿದ ವರ್ಗ ಮತ್ತು ದಲಿತ ನಾಯಕರು ಪ್ರಭಾವಿಗಳಾಗಿ ಹೊರಹೊಮ್ಮುತ್ತಿರುವುದನ್ನು ಬಿಜೆಪಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಪರಿಶಿಷ್ಟ ಸಮುದಾಯದ ಪ್ರಮುಖ ನಾಯಕರನ್ನು ರಾಜಕೀಯವಾಗಿ ಹತ್ತಿಕ್ಕಲು ಕೇಂದ್ರ ತನಿಖಾ ಸಂಸ್ಥೆಗಳನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಗುಡುಗಿದ್ದಾರೆ.


ಸರ್ಕಾರದ 100 ದಿನಗಳ ಸಾಧನೆ ಮರೆಮಾಚುವ ತಂತ್ರ

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ನೂರು ದಿನಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ, ಆ ಸಂಭ್ರಮವನ್ನು ಹಳ್ಳಹಿಡಿಸಲು ಮತ್ತು ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು  ಬಿಜೆಪಿ ಈ ಕೃತ್ಯವೆಸಗಿದೆ ಎಂದು ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು. 


ಸತೀಶ್ ಜಾರಕಿಹೊಳಿ ಅವರು ಒಬ್ಬ ಯಶಸ್ವಿ ಉದ್ಯಮಿಯಾಗಿದ್ದು, ಕಾನೂನಿನ ಚೌಕಟ್ಟಿನಲ್ಲೇ ಎಲ್ಲ ವ್ಯವಹಾರ ನಡೆಸುತ್ತಿದ್ದಾರೆ. ಈ ತನಿಖೆಯನ್ನು ಕಾನೂನುಬಾಹಿರವಾಗಿ ಎದುರಿಸಲಿದ್ದು, ಪಕ್ಷವು ಅವರ ಬೆನ್ನೆಲುಬಾಗಿ ನೂರಕ್ಕೆ ನೂರು ಪ್ರತಿಶತ ನಿಲ್ಲಲಿದೆ ಎಂದು ಸ್ಪಷ್ಟಪಡಿಸಿದರು.


ಮುಂದಿನ ಟಾರ್ಗೆಟ್ ನಾವೇ ಎಚ್ಚರಿಕೆ.!

ಕೇವಲ ಸತೀಶ್ ಜಾರಕಿಹೊಳಿ ಮಾತ್ರವಲ್ಲದೆ, ಮುಂಬರುವ ದಿನಗಳಲ್ಲಿ ತಮ್ಮ ಮೇಲೂ ಹಾಗೂ ಸರ್ಕಾರದ ಇತರ ಸಚಿವರು, ಶಾಸಕರ ಮೇಲೂ ಇಡಿ ಹಾಗೂ ಸಿಬಿಐ ದಾಳಿಗಳು ನಡೆಯಬಹುದು ಎಂದು ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿಯ ಈ ಸುಳ್ಳಿನ ರಾಜಕೀಯವನ್ನು ಕಾಂಗ್ರೆಸ್ ನಾಯಕರು ಒಗ್ಗಟ್ಟಾಗಿ ಎದುರಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Share this story