ಬೆಂಗಳೂರು:
ಆನ್‌ಲೈನ್‌ನಲ್ಲಿ ಖರೀದಿಸಿದ ಮೊಸರು ಪ್ಯಾಕೆಟ್ ಸೋರಿಕೆಯಾಗಿದ್ದಕ್ಕೆ ಹಣ ವಾಪಸ್ ಪಡೆಯಲು ಗ್ರಾಹಕ ಸೇವಾ ಕೇಂದ್ರದ ಮೊರೆ ಹೋದ ಗೃಹಿಣಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದಿದ್ದಾರೆ. ರಿಫಂಡ್ ಕೊಡಿಸುವುದಾಗಿ ನಂಬಿಸಿದ ವಂಚಕರು ಮಹಿಳೆಯ ಬ್ಯಾಂಕ್ ಖಾತೆಯಿಂದ ಬರೋಬ್ಬರಿ ₹98 ಸಾವಿರ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಈ ಘಟನೆ ಬೆಂಗಳೂರಿನ ವಸಂತ ನಗರದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೊಸರು ಪ್ಯಾಕೆಟ್ ಸೋರಿಕೆ: ರಿಫಂಡ್‌ಗಾಗಿ ಗೂಗಲ್‌ನಲ್ಲಿ ಹುಡುಕಾಟ
ವಸಂತ ನಗರದ 56 ವರ್ಷದ ಗೃಹಿಣಿಯೊಬ್ಬರು ಅಕ್ಟೋಬರ್ 17ರಂದು ಬ್ಲಿಂಕಿಟ್ ಮೂಲಕ ಮೊಸರು ಆರ್ಡರ್ ಮಾಡಿದ್ದರು. ಮನೆಗೆ ಡೆಲಿವರಿ ಬಂದ ಬಳಿಕ ಪ್ಯಾಕೆಟ್ ಸೋರಿಕೆಯಾಗಿರುವುದು ಅವರ ಗಮನಕ್ಕೆ ಬಂದಿದೆ. ಹೀಗಾಗಿ, ಉತ್ಪನ್ನದ ಹಣವನ್ನು ವಾಪಸ್ ಪಡೆಯಲು ನಿರ್ಧರಿಸಿದ ಅವರು, ಗ್ರಾಹಕ ಸೇವಾ ಕೇಂದ್ರದ ಸಂಪರ್ಕ ಸಂಖ್ಯೆಯನ್ನು ಗೂಗಲ್‌ನಲ್ಲಿ ಹುಡುಕಿದ್ದಾರೆ.
ಈ ವೇಳೆ ಸರ್ಚ್‌ನಲ್ಲಿ ಸಿಕ್ಕ ಸಂಖ್ಯೆಗೆ ಕರೆ ಮಾಡಿದ ಮಹಿಳೆಗೆ ಅಪರಿಚಿತ ವ್ಯಕ್ತಿಯೊಬ್ಬ ಸಂಪರ್ಕಿಸಿದ್ದಾನೆ. ಮೊಸರು ಪ್ಯಾಕೆಟ್ ಸೋರಿಕೆಯಾಗಿರುವ ಬಗ್ಗೆ ಮಾಹಿತಿ ಪಡೆದ ಆತ, ಮುಂದಿನ ಪ್ರಕ್ರಿಯೆಗಾಗಿ ಲಿಂಕ್ ಒಂದನ್ನು ಕಳುಹಿಸಿದ್ದಾನೆ ಎನ್ನಲಾಗಿದೆ. ಆ ಲಿಂಕ್ ಅನ್ನು ತೆರೆದ ಮಹಿಳೆ, ಸೋರಿಕೆಯಾಗಿದ್ದ ಮೊಸರು ಪ್ಯಾಕೆಟ್‌ನ ಫೋಟೊವನ್ನು ಅಪ್‌ಲೋಡ್ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗೂಗಲ್ ಪೇ ಪರಿಶೀಲಿಸುವಂತೆ ಸೂಚನೆ; ಖಾತೆಯಿಂದ ಹಣ ಮಾಯ.!
ಫೋಟೊ ಅಪ್‌ಲೋಡ್ ಮಾಡಿದ ಬಳಿಕ ಕರೆ ಮಾಡಿದ ಅಪರಿಚಿತ ವ್ಯಕ್ತಿ, ಹಣವನ್ನು ವಾಪಸ್ ನೀಡುವುದಾಗಿ ತಿಳಿಸಿದ್ದಾನೆ. ಜೊತೆಗೆ, ಗೂಗಲ್ ಪೇ ಆ್ಯಪ್ ಪರಿಶೀಲಿಸುವಂತೆ ಸೂಚಿಸಿದ್ದಾನೆ. ಆದರೆ, ಮಹಿಳೆ ತಮ್ಮ ಮೊಬೈಲ್ ಪರಿಶೀಲಿಸಿದಾಗ ಗೂಗಲ್ ಪೇ ಆ್ಯಪ್ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ಇದರ ಬೆನ್ನಲ್ಲೇ, ತಮ್ಮ ಬ್ಯಾಂಕ್ ಆಫ್ ಬರೋಡಾ ಖಾತೆಯಿಂದ ₹98,000 ಕಡಿತವಾಗಿರುವುದು ಮಹಿಳೆಗೆ ತಿಳಿದುಬಂದಿದೆ. ರಿಫಂಡ್ ಪಡೆಯುವ ನಿರೀಕ್ಷೆಯಲ್ಲಿದ್ದ ಅವರಿಗೆ, ಬದಲಾಗಿ ದೊಡ್ಡ ಮೊತ್ತದ ಹಣ ನಷ್ಟವಾಗಿದೆ.
ರಿಫಂಡ್ ನೀಡುವ ನೆಪದಲ್ಲಿ ಅಪರಿಚಿತರು ವಂಚಿಸಿದ್ದಾರೆ ಎಂದು ಆರೋಪಿಸಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕೇಂದ್ರ ವಿಭಾಗದ ಸೈಬರ್ ಕ್ರೈಂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸೈಬರ್ ವಂಚನೆಯಿಂದ ತಪ್ಪಿಸಿಕೊಳ್ಳಲು ಈ ಎಚ್ಚರಿಕೆ ಪಾಲಿಸಿ
ಆನ್‌ಲೈನ್ ಖರೀದಿಯಲ್ಲಿ ಸಮಸ್ಯೆ ಎದುರಾದಾಗ ಹಣ ವಾಪಸ್ ಪಡೆಯುವ ಆತುರದಲ್ಲಿ ಅಪರಿಚಿತ ವ್ಯಕ್ತಿಗಳನ್ನು ಸಂಪರ್ಕಿಸುವುದು ಅಪಾಯಕ್ಕೆ ಕಾರಣವಾಗಬಹುದು. ಇಂತಹ ವಂಚನೆಗಳಿಂದ ದೂರವಿರಲು ಈ ಕ್ರಮಗಳನ್ನು ಪಾಲಿಸುವುದು ಅಗತ್ಯ.
ಸಣ್ಣ ಮೊತ್ತದ ರಿಫಂಡ್ ಪಡೆಯುವ ಪ್ರಯತ್ನದಲ್ಲಿಯೂ ದೊಡ್ಡ ಮೊತ್ತದ ಹಣ ಕಳೆದುಕೊಳ್ಳುವ ಅಪಾಯವಿದೆ. ಆದ್ದರಿಂದ, ಆನ್‌ಲೈನ್ ವಹಿವಾಟು ನಡೆಸುವಾಗ ಅಧಿಕೃತ ಸಂಪರ್ಕ ಮಾರ್ಗಗಳನ್ನು ಮಾತ್ರ ಬಳಸಿ ಮತ್ತು ಅಪರಿಚಿತರು ಕಳುಹಿಸುವ ಲಿಂಕ್‌ಗಳ ಬಗ್ಗೆ ಎಚ್ಚರಿಕೆ ವಹಿಸಿ.
ಸಣ್ಣ ಮೊತ್ತದ ರಿಫಂಡ್ ಪಡೆಯುವ ಪ್ರಯತ್ನದಲ್ಲಿಯೂ ದೊಡ್ಡ ಮೊತ್ತದ ಹಣ ಕಳೆದುಕೊಳ್ಳುವ ಅಪಾಯವಿದೆ. ಆದ್ದರಿಂದ, ಆನ್‌ಲೈನ್ ವಹಿವಾಟು ನಡೆಸುವಾಗ ಅಧಿಕೃತ ಸಂಪರ್ಕ ಮಾರ್ಗಗಳನ್ನು ಮಾತ್ರ ಬಳಸಿ ಮತ್ತು ಅಪರಿಚಿತರು ಕಳುಹಿಸುವ ಲಿಂಕ್‌ಗಳ ಬಗ್ಗೆ ಎಚ್ಚರಿಕೆ ವಹಿಸಿ.


