Public Prime News

CLEAR VISION, TRUE MISSION

ಕಾಂಗ್ರೆಸ್ ಸಂಘಟನೆಗೆ ಬಿಗ್ ಬೂಸ್ಟ್: ಕರ್ನಾಟಕದ 35 ಹೊಸ ಜಿಲ್ಲಾಧ್ಯಕ್ಷರ ಪಟ್ಟಿ ಬಿಡುಗಡೆ ಮಾಡಿದ ಎಐಸಿಸಿ
politics

ಕಾಂಗ್ರೆಸ್ ಸಂಘಟನೆಗೆ ಬಿಗ್ ಬೂಸ್ಟ್: ಕರ್ನಾಟಕದ 35 ಹೊಸ ಜಿಲ್ಲಾಧ್ಯಕ್ಷರ ಪಟ್ಟಿ ಬಿಡುಗಡೆ ಮಾಡಿದ ಎಐಸಿಸಿ

Public Prime News

Public Prime News

Reported by Public Prime News

ಬೆಂಗಳೂರು:

ರಾಜ್ಯದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರವು 100 ದಿನಗಳನ್ನು ಪೂರ್ಣಗೊಳಿಸಿದ ಬೆನ್ನಲ್ಲೇ, ಕಾಂಗ್ರೆಸ್ ಪಕ್ಷವು ಸಂಘಟನಾ ಬಲವರ್ಧನೆಗೆ ಮಹತ್ವದ ಹೆಜ್ಜೆ ಇಟ್ಟಿದೆ.


ಪಕ್ಷವನ್ನು ತಳಮಟ್ಟದಿಂದ ಮತ್ತಷ್ಟು ಗಟ್ಟಿಗೊಳಿಸುವ ಉದ್ದೇಶದಿಂದ 'ಸಂಘಟನಾ ಸೃಜನ್ ಅಭಿಯಾನ'ದಡಿ ಕರ್ನಾಟಕದ ವಿವಿಧ ಭಾಗಗಳಿಗೆ ಒಟ್ಟು 35 ಹೊಸ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಲಾಗಿದ್ದು, ಎಐಸಿಸಿ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಿದೆ.


  • ಕ್ಷೇತ್ರ ಮಟ್ಟದ ಪರಿಶೀಲನೆ: 

  • 'ಸಂಘಟನಾ ಸೃಜನ್ ಅಭಿಯಾನ'ದ ಅಂಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಿಗೆ ನಿಯೋಜಿಸಲಾಗಿದ್ದ ಎಐಸಿಸಿ ವೀಕ್ಷಕರು ಸ್ಥಳೀಯ ಮಟ್ಟದಲ್ಲಿ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲನೆ ನಡೆಸಿದ್ದರು.


  • ಸಮಾಲೋಚನಾ ವರದಿ: 

  • ಜಿಲ್ಲೆಯ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ಸಿದ್ಧಪಡಿಸಿದ ವರದಿಗಳನ್ನು ಹೈಕಮಾಂಡ್‌ಗೆ ಸಲ್ಲಿಸಲಾಗಿತ್ತು.


  • ಅಂತಿಮ ಅನುಮೋದನೆ: 

  • ಎಐಸಿಸಿ ವೀಕ್ಷಕರು ಹಾಗೂ ಪಕ್ಷದ ಹಿರಿಯ ನಾಯಕರ ಜತೆ ಚರ್ಚಿಸಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಎಐಸಿಸಿ ಅಧ್ಯಕ್ಷರು ಇದಕ್ಕೆ ಅಧಿಕೃತ ಅನುಮೋದನೆ ನೀಡಿದ್ದಾರೆ.


ನೂತನ ಜಿಲ್ಲಾಧ್ಯಕ್ಷರ ವಿವರಗಳು:


  • ಬಾಗಲಕೋಟೆ: ದಯಾನಂದ್ ಎಸ್. ಪಾಟೀಲ್


  • ಚಿಕ್ಕೋಡಿ: ಲಕ್ಷ್ಮಣರಾವ್ ಚಿಂಗಳೆ


  • ಬೆಳಗಾವಿ ನಗರ: ಸಲಾವುದ್ದೀನ್ ಸಿ. ಸಲೀಂ ಬಿ. ಖತೀಬ್ (ರಾಜಾಸಲೀಂ)


  • ಬೆಳಗಾವಿ ಗ್ರಾಮಾಂತರ: ಬಸವರಾಜ್ ಶೇಗಾವಿ


  • ಬಳ್ಳಾರಿ ನಗರ: ಅಲ್ಲಂ ಪ್ರಶಾಂತ್


  • ಬಳ್ಳಾರಿ ಗ್ರಾಮಾಂತರ: ಕೆ. ಮಲ್ಲಿಕಾರ್ಜುನ


  • ಬೀದ‌ರ್: ಅಬ್ದುಲ್ ಮನ್ನಾನ್ ಸೇರ್


  • ಚಾಮರಾಜನಗರ: ಜೆ. ಯೋಗೇಶ್


  • ಚಿಕ್ಕಮಗಳೂರು: ಹೆಚ್. ಪಿ. ಮಂಜೇಗೌಡ


  • ದಕ್ಷಿಣ ಕನ್ನಡ: ಪದ್ಮರಾಜ್ ಆರ್. ಪೂಜಾರಿ


  • ದಾವಣಗೆರೆ: ಇಬ್ರಾಹಿಂ ಖಲೀಲುಲ್ಲಾ


  • ಧಾರವಾಡ ಗ್ರಾಮಾಂತರ: ಚಂದ್ರಶೇಖ‌ರ್ ಜುಟ್ಟಲ್


  • ಗದಗ: ವಾಸಣ್ಣ ಕುರ್ಡಗಿ


  • ಕಲಬುರಗಿ: ಡಾ. ಕಿರಣ್ ಎ. ದೇಶಮುಖ್


  • ಹಾಸನ: ಶಶಿಧ‌ರ್ ಜಿ. ಬಿ.


  • ಹಾವೇರಿ: ಸಂಜೀವ್ ಕುಮಾರ್ ನೀರಲಗಿ


  • ಹುಬ್ಬಳ್ಳಿ-ಧಾರವಾಡ ನಗರ: ಸದಾನಂದ ವಿ. ದಂಗನವರ್


  • ಕೊಡಗು: ಧರ್ಮಜ ಉತ್ತಪ್ಪ


  • ಕೋಲಾರ: ಎನ್. ನಾರಾಯಣಸ್ವಾಮಿ


  • ಕೊಪ್ಪಳ: ಎಂ. ಮಲ್ಲಿಕಾರ್ಜುನ ನಾಗಪ್ಪ


  • ಮಂಡ್ಯ: ಕುಮಾ‌ರ್ ಕೊಪ್ಪ


  • ಮೈಸೂರು ನಗರ: ಆ‌ರ್. ಮೂರ್ತಿ


  • ಮೈಸೂರು ಗ್ರಾಮಾಂತರ: ಬೀರಿ ಹುಂಡಿ ಬಸವಣ್ಣ


  • ರಾಯಚೂರು: ಕೆ. ಶಾಂತಪ್ಪ


  • ರಾಮನಗರ: ಸಿ. ಎನ್. ವೆಂಕಟೇಶ್


  • ಶಿವಮೊಗ್ಗ: ಹೆಚ್. ಸಿ. ಯೋಗೇಶ್


  • ಉಡುಪಿ: ಕಿಶನ್ ಕುಮಾರ್ ಹೆಗ್ಡೆ


  • ಉತ್ತರ ಕನ್ನಡ: ಗಜಾನನ ತಿಮ್ಮನಾಯ್ಕ


  • ಯಾದಗಿರಿ: ಬಸರೆಡ್ಡಿ ಎಂ. ಪಾಟೀಲ್

Share this story