Public Prime News

CLEAR VISION, TRUE MISSION

ಕೆಪಿಎಸ್‌ಸಿ ಹಗರಣದ ಕೊಂಡಿ ಕಳಚುತ್ತಿದಂತೆ ಸಿಐಡಿ ಬಲೆಗೆ ಆಪ್ತರು: ಬಸವರಾಜ ಕನ್ನಾಳೆ ನಂಟು ಬಯಲು..!
crime

ಕೆಪಿಎಸ್‌ಸಿ ಹಗರಣದ ಕೊಂಡಿ ಕಳಚುತ್ತಿದಂತೆ ಸಿಐಡಿ ಬಲೆಗೆ ಆಪ್ತರು: ಬಸವರಾಜ ಕನ್ನಾಳೆ ನಂಟು ಬಯಲು..!

Public Prime News

Public Prime News

Reported by Public Prime News

ಬೆಂಗಳೂರು:

ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿರುವ ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಹಗರಣದ ತನಿಖೆ ದಿನಕ್ಕೊಂದು ರೋಚಕ ತಿರುವು ಪಡೆದುಕೊಳ್ಳುತ್ತಿದೆ. 


ಪ್ರಕರಣದ ಮಾ ಸ್ಟರ್ ಮೈಂಡ್ ಹಾಗೂ ಪ್ರಮುಖ ಮಧ್ಯವರ್ತಿ ಬಸವರಾಜ ಕನ್ನಾಳೆ ಸಿಐಡಿ (CID) ಬಲೆಗೆ ಬಿದ್ದ ಬೆನ್ನಲ್ಲೇ, ಆತನ ಆಪ್ತವಲಯ ಹಾಗೂ ನಂಟಿನಲ್ಲಿದ್ದ ಪ್ರಭಾವಿಗಳ ನಡಿಗೆ ಈಗ ತನಿಖಾಧಿಕಾರಿಗಳ ಕಣ್ಣುಬಿಟ್ಟಿದೆ.


ಕನ್ನಾಳೆ ಬಂಧನದ ಬಳಿಕ ನಡುಕಗೊಂಡ ಪ್ರಭಾವಿಗಳು

ನೇಮಕಾತಿ ವಂಚನೆ ಹಾಗೂ ಕೋಟ್ಯಂತರ ರೂಪಾಯಿ ಹಣಕಾಸು ವಹಿವಾಟಿನ ಜಾಲವನ್ನು ಪತ್ತೆ ಹಚ್ಚಿರುವ ಸಿಐಡಿ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. 


ಬಸವರಾಜ ಕನ್ನಾಳೆ ವಿಚಾರಣೆ ವೇಳೆ ನೀಡಿರುವ ಸ್ಫೋಟಕ ಮಾಹಿತಿಗಳ ಆಧಾರದ ಮೇಲೆ, ಆತನಿಗೆ ಆಪ್ತರಾಗಿ ಗುರುತಿಸಿಕೊಂಡಿದ್ದ ಕೆಲ ಪ್ರಮುಖ ವ್ಯಕ್ತಿಗಳು ಮತ್ತು ಸಹಚರರು ಈಗ ತನಿಖೆಯಿಂದ ತಪ್ಪಿಸಿಕೊಳ್ಳಲು ಪರದಾಡುತ್ತಿದ್ದಾರೆ. ಹಗರಣದ ಬೇರುಗಳು ಎಷ್ಟರ ಮಟ್ಟಿಗೆ ಆಳವಾಗಿವೆ ಎಂಬುದು ತನಿಖೆ ಮುಂದುವರಿದಂತೆ ಸ್ಪಷ್ಟವಾಗುತ್ತಿದೆ.


ಅಕ್ರಮ ನೇಮಕಾತಿ ಮತ್ತು ಹಣದಾಸೆ ಜಾಲ

ಪಶುವೈದ್ಯಾಧಿಕಾರಿ ಹುದ್ದೆಗಳನ್ನು ಕೊಡಿಸುವುದಾಗಿ ನಂಬಿಸಿ ಆಕಾಂಕ್ಷಿಗಳಿಂದ ದೊಡ್ಡ ಮೊತ್ತದ ಹಣವನ್ನು ವಸೂಲಿ ಮಾಡಲಾಗಿತ್ತು. 


ಈ ಅಕ್ರಮ ದಂಧೆಯಲ್ಲಿ ಬಸವರಾಜ ಕನ್ನಾಳೆ ಜೊತೆ ನಿಕಟ ಸಂಪರ್ಕ ಹೊಂದಿದ್ದವರ ಬ್ಯಾಂಕ್ ಖಾತೆಗಳು ಹಾಗೂ ಹವಾಲಾ ವಹಿವಾಟಿನ ಮೇಲೆ ಸಿಐಡಿ ಕಣ್ಣಿಟ್ಟಿದೆ. ಅಭ್ಯರ್ಥಿಗಳಿಂದ ಸಂಗ್ರಹಿಸಿದ ಹಣವನ್ನು ಹೇಗೆ ವಿಂಗಡಿಸಲಾಗುತ್ತಿತ್ತು ಮತ್ತು ಈ ಜಾಲದಲ್ಲಿ ಯಾರ್ಯಾರು ಕೈಜೋಡಿಸಿದ್ದರು ಎಂಬ ಬಗ್ಗೆ ತನಿಖಾಧಿಕಾರಿಗಳು ತೀವ್ರ ಶೋಧ ನಡೆಸುತ್ತಿದ್ದಾರೆ.


ಮುಂದಿನ ದಿನಗಳಲ್ಲಿ ಸಿಐಡಿ ತನಿಖೆಯು ಮತ್ತಷ್ಟು ಮಹತ್ವದ ಸ್ಫೋಟಕ ಸತ್ಯಗಳನ್ನು ಹೊರಹಾಕುವ ಸಾಧ್ಯತೆಯಿದ್ದು, ಹಗರಣದಲ್ಲಿ ಭಾಗಿಯಾದ ಉನ್ನತ ಮಟ್ಟದ ವ್ಯಕ್ತಿಗಳ ಬಂಧನವಾಗುವ ನಿರೀಕ್ಷೆಯಿದೆ.

Share this story