Public Prime News

CLEAR VISION, TRUE MISSION

ಕಾರ್ಕಳ ಉಪವಿಭಾಗದ ನೂತನ ಎಎಸ್‌ಪಿಯಾಗಿ ಐಪಿಎಸ್ ಅಧಿಕಾರಿ ಇಶಿತಾ ಗುಪ್ತಾ ಅಧಿಕಾರ ಸ್ವೀಕಾರ
local-news

ಕಾರ್ಕಳ ಉಪವಿಭಾಗದ ನೂತನ ಎಎಸ್‌ಪಿಯಾಗಿ ಐಪಿಎಸ್ ಅಧಿಕಾರಿ ಇಶಿತಾ ಗುಪ್ತಾ ಅಧಿಕಾರ ಸ್ವೀಕಾರ

Public Prime News

Public Prime News

Reported by Public Prime News

ಕಾರ್ಕಳ:

ಕಾರ್ಕಳ ಪೊಲೀಸ್ ಉಪವಿಭಾಗದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾಗಿ (ASP) 2024ನೇ ಬ್ಯಾಚ್‌ನ ಪ್ರತಿಭಾವಂತ ಐಪಿಎಸ್ ಅಧಿಕಾರಿ ಇಶಿತಾ ಗುಪ್ತಾ ಅವರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.


ಯುಪಿಎಸ್‌ಸಿ (UPSC) ಅಖಿಲ ಭಾರತ ಸಿವಿಲ್ ಸೇವಾ ಪರೀಕ್ಷೆ-2023ರಲ್ಲಿ ಅತ್ಯುತ್ತಮ ಪ್ರತಿಭೆ ಮೆರೆದು 154ನೇ ರ‍್ಯಾಂಕ್ ಪಡೆದಿದ್ದ ಇಶಿತಾ ಗುಪ್ತಾ, ತಮ್ಮ ಕಠಿಣ ಪ್ರೊಬೇಷನರಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ತರಬೇತಿ ಮುಗಿಸಿರುವ ಅವರು, ಸದ್ಯದಲ್ಲೇ ಕಾರ್ಕಳ ಪೊಲೀಸ್ ಉಪವಿಭಾಗದ ನೂತನ ಅಧಿಕಾರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

Share this story