Public Prime News

CLEAR VISION, TRUE MISSION

‘ಸುಪ್ರೀಂ ಕೋರ್ಟ್ ಬಾಗಿಲು ಎಲ್ಲರಿಗೂ ತೆರೆದಿದೆ’: ಚುನಾವಣಾ ಅಕ್ರಮಗಳ ಆರೋಪ ಹೊತ್ತು ಬೃಹತ್ ಮೆರವಣಿಗೆ ಮೂಲಕ ನ್ಯಾಯಾಲಯದತ್ತ ನುಗ್ಗಿದ ಇಂಡಿಯಾ ಕೂಟ..!
politics

‘ಸುಪ್ರೀಂ ಕೋರ್ಟ್ ಬಾಗಿಲು ಎಲ್ಲರಿಗೂ ತೆರೆದಿದೆ’: ಚುನಾವಣಾ ಅಕ್ರಮಗಳ ಆರೋಪ ಹೊತ್ತು ಬೃಹತ್ ಮೆರವಣಿಗೆ ಮೂಲಕ ನ್ಯಾಯಾಲಯದತ್ತ ನುಗ್ಗಿದ ಇಂಡಿಯಾ ಕೂಟ..!

Public Prime News

Public Prime News

Reported by Public Prime News

ನವದೆಹಲಿ: 

ದೇಶದಲ್ಲಿ ಚುನಾವಣಾ ಪ್ರಕ್ರಿಯೆ ಹಾಗೂ ಮತದಾನದಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂದು ಗಂಭೀರ ಆರೋಪಿಸಿರುವ ವಿರೋಧ ಪಕ್ಷಗಳ ‘ಇಂಡಿಯಾ’ (INDIA) ಕೂಟವು ದೆಹಲಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದೆ. ಕಾಂಗ್ರೆಸ್ ಮುಖಂಡರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ನಡೆದ ಈ ಐತಿಹಾಸಿಕ ಮೆರವಣಿಗೆಯು ನೇರವಾಗಿ ಸುಪ್ರೀಂ ಕೋರ್ಟ್‌ನತ್ತ ಸಾಗಿದ್ದು, ರಾಷ್ಟ್ರ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.


ಸಿಜೆಐ ಹೇಳಿಕೆಯೇ ಅಸ್ತ್ರ: 

ದೇಶದ ಮುಖ್ಯ ನ್ಯಾಯಮೂರ್ತಿಗಳು (CJI) ಇತ್ತೀಚೆಗೆ "ನ್ಯಾಯದೇವತೆಯ ಬಾಗಿಲುಗಳು ಎಲ್ಲರಿಗೂ ಯಾವಾಗಲೂ ತೆರೆದಿರುತ್ತವೆ" ಎಂದು ನೀಡಿದ್ದ ಹೇಳಿಕೆಯನ್ನು ಮುಂದಿಟ್ಟುಕೊಂಡು ಇಂಡಿಯಾ ಮೈತ್ರಿಕೂಟದ ನಾಯಕರು ಈ ಕಾನೂನು ಹೋರಾಟಕ್ಕೆ ಧುಮುಕಿದ್ದಾರೆ. ಚುನಾವಣಾ ಆಯೋಗದ ಕಾರ್ಯವೈಖರಿ ಹಾಗೂ ಮತಯಂತ್ರಗಳು ಹಾಗೂ ಮತದಾರರ ಪಟ್ಟಿಗಳಲ್ಲಿ ಪಾರದರ್ಶಕತೆ ಇಲ್ಲದಿರುವುದನ್ನು ಖಂಡಿಸಿ ನಾಯಕರು ಸಂವಿಧಾನದ ಪ್ರತಿಗಳೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.


ರಸ್ತೆಗೆ ಇಳಿದ ಇಂಡಿಯಾ ಕೂಟದ ನಾಯಕರು: 

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಈ ಬೃಹತ್ ಜಾಥಾದಲ್ಲಿ ವಿವಿಧ ವಿಪಕ್ಷಗಳ ಸಂಸತ್ ಸದಸ್ಯರು ಹಾಗೂ ಹಿರಿಯ ನಾಯಕರು ಭಾಗವಹಿಸಿದ್ದರು. ಚುನಾವಣಾ ಪ್ರಕ್ರಿಯೆಗಳಲ್ಲಿ ವಿಶ್ವಾಸಾರ್ಹತೆ ಕಾಪಾಡುವಂತೆ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವಂತೆ ಆಗ್ರಹಿಸಿ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಲು ನಾಯಕರು ಧಾವಿಸಿದ್ದಾರೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ದೆಹಲಿಯಲ್ಲಿ ಬಿಗುವಿನ ಹಾಗೂ ಕುತೂಹಲದ ವಾತಾವರಣ ನಿರ್ಮಾಣವಾಗಿದೆ.

Share this story