Public Prime News

CLEAR VISION, TRUE MISSION

ನವೆಂಬರ್ 5ರಂದೇ ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಗೆ ಸಜ್ಜಾದ ಹೈ-ಬಜೆಟ್ ಸಿನಿಮಾ ‘ರಾಮಾಯಣ ಪಾರ್ಟ್ 1’
cinema-news

ನವೆಂಬರ್ 5ರಂದೇ ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಗೆ ಸಜ್ಜಾದ ಹೈ-ಬಜೆಟ್ ಸಿನಿಮಾ ‘ರಾಮಾಯಣ ಪಾರ್ಟ್ 1’

Public Prime News

Public Prime News

Reported by Public Prime News

ಬೆಂಗಳೂರು/ಮುಂಬೈ: 

ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಕುತೂಹಲ ಹಾಗೂ ಸಖತ್ ನಿರೀಕ್ಷೆ ಮೂಡಿಸಿರುವ ಬ್ರಹ್ಮಾಂಡ ಹೈ-ಬಜೆಟ್ ಸಿನಿಮಾ ‘ರಾಮಾಯಣ ಪಾರ್ಟ್ 1’ (Ramayana Part 1) ಬಿಡುಗಡೆ ದಿನಾಂಕದಲ್ಲಿ ಮಹತ್ವದ ಬದಲಾವಣೆಯಾಗಿದೆ. 


ಈ ಹಿಂದೆ ನವೆಂಬರ್ 8ರಂದು ಬಿಡುಗಡೆಯಾಗಲಿದೆ ಎಂದುಕೊಳ್ಳಲಾಗಿದ್ದ ಈ ಮಹತ್ವಾಕಾಂಕ್ಷೆಯ ಚಿತ್ರವು, ಈಗ ಮೂರು ದಿನ ಮುಂಚಿತವಾಗಿ ಅಂದರೆ ನವೆಂಬರ್ 5ರಂದೇ ವಿಶ್ವಾದ್ಯಂತ ತೆರೆಕಾಣಲಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.


ನವರಾತ್ರಿ ಹಬ್ಬದ ಸಂಭ್ರಮದಲ್ಲಿ ಹೊಸ ಪೋಸ್ಟರ್ ಬಿಡುಗಡೆ:

ಪವಿತ್ರ ನವರಾತ್ರಿಯ ಮೊದಲ ದಿನವೇ ಚಿತ್ರತಂಡ ಪ್ರೇಕ್ಷಕರಿಗೆ ಭರ್ಜರಿ ಗುಡ್‌ನ್ಯೂಸ್ ನೀಡಿದ್ದು, ಸಿನಿಮಾದ ಹೊಸ ಆಕರ್ಷಕ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ. ಈ ಪೋಸ್ಟರ್‌ನಲ್ಲಿ ಮರ್ಯಾದಾ ಪುರುಷೋತ್ತಮ ರಾಮನಾಗಿ ಬಾಲಿವುಡ್ ಸ್ಟಾರ್ ರಣಬೀರ್ ಕಪೂರ್, ಜಾನಕಿಯಾಗಿ (ಸೀತೆ) ನಟಿ ಸಾಯಿ ಪಲ್ಲವಿ, ಲಕ್ಷ್ಮಣನಾಗಿ ರವಿ ದುಬೆ ಹಾಗೂ ಪ್ರಬಲ ಪ್ರತಿನಾಯಕ ರಾವಣನ ಪಾತ್ರದಲ್ಲಿ ನಮ್ಮದೇ ಹೆಮ್ಮೆಯ ರಾಕಿಂಗ್ ಸ್ಟಾರ್ ಯಶ್ ಮಿಂಚಿದ್ದಾರೆ. ಪೋಸ್ಟರ್‌ನಲ್ಲಿರುವ ‘ಇದು ರಾಮನ ಯುಗದ ಆರಂಭ’ ಎಂಬ ಸಾಲು ಸಿನಿಮಾಪ್ರಿಯರಲ್ಲಿ ರೋಮಾಂಚನವನ್ನು ಇಮ್ಮಡಿಸಿದೆ.


ಪ್ಯಾನ್ ಇಂಡಿಯಾ ಮಟ್ಟದಲ್ಲಿ ಅದ್ದೂರಿ ಬಿಡುಗಡೆ: 

ಭಾರತೀಯ ಚಿತ್ರರಂಗದ ಇದುವರೆಗಿನ ಅತ್ಯಂತ ದೊಡ್ಡ ಪ್ರಾಜೆಕ್ಟ್ ಎನಿಸಿಕೊಂಡಿರುವ ‘ರಾಮಾಯಣ ಪಾರ್ಟ್ 1’ ಸಿನಿಮಾವು ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಸೇರಿದಂತೆ ಪ್ರಮುಖ ಐದು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ. ಪ್ರೇಕ್ಷಕರಿಗೆ ತರಂಗಾಂತರದ ದೃಶ್ಯ ವೈಭವವನ್ನು ಒದಗಿಸಲು ಐಮ್ಯಾಕ್ಸ್ (IMAX) ಸೇರಿದಂತೆ ಹಲವು ಪ್ರೀಮಿಯಂ ಸ್ವರೂಪಗಳಲ್ಲಿ ಈ ಸಿನಿಮಾ ತೆರೆಕಾಣಲಿದೆ.


ವಿಶ್ವದಾದ್ಯಂತ ಈ ಸಿನಿಮಾದ ವಿತರಣೆಯ ಜವಾಬ್ದಾರಿಯನ್ನು 'ಸೋನಿ ಪಿಕ್ಚರ್ಸ್' ವಹಿಸಿಕೊಂಡಿದ್ದರೆ, ಹಿಂದಿ ಮಾರುಕಟ್ಟೆಯಲ್ಲಿ ಖ್ಯಾತ ಕರಣ್‌ ಜೋಹರ್ ಅವರ 'ಧರ್ಮಾ ಪ್ರೊಡಕ್ಷನ್ಸ್‌' ಸಾಥ್ ನೀಡಲಿದೆ ಎಂದು ವರದಿಯಾಗಿದೆ.


ಎರಡು ಭಾಗಗಳಲ್ಲಿ ಬ್ರಹ್ಮಾಂಡ ಕಥಾನಕ: 

ಭಾರತೀಯ ಪುರಾಣದ ಹಿನ್ನೆಲೆಯಲ್ಲಿ ಎರಡು ಭಾಗಗಳಾಗಿ ತೆರೆಗೆ ಬರಲಿರುವ ಈ ವಿಸ್ತೃತ ಸರಣಿಯಲ್ಲಿ, ಮೊದಲ ಭಾಗವು ನವೆಂಬರ್ 5ರಂದು ಬೆಳ್ಳಿಪರದೆಗೆ ಅಪ್ಪಳಿಸಲಿದ್ದರೆ, ಇದರ ಮುಂದುವರಿದ ಭಾಗವಾದ ‘ರಾಮಾಯಣ ಪಾರ್ಟ್ 2’ ಚಿತ್ರವು 2027ರ ದೀಪಾವಳಿ ಹಬ್ಬದ ವಿಶೇಷವಾಗಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮುನ್ಸೂಚನೆ ನೀಡಿದೆ. 


ಬಿಡುಗಡೆ ದಿನಾಂಕ ಬದಲಾಗುತ್ತಿದ್ದಂತೆ ಸಿನಿಮಾದ ಪ್ರಚಾರ ಕಾರ್ಯಗಳು ಮತ್ತಷ್ಟು ಚುರುಕುಗೊಂಡಿದ್ದು, ಗಲ್ಲಿ-ಗಲ್ಲಿಯಲ್ಲೂ ‘ರಾಮಾಯಣ’ದ ಹವಾ ಜೋರಾಗಿದೆ.

Share this story