Public Prime News

CLEAR VISION, TRUE MISSION

ಸೌಜನ್ಯ ಕೇಸ್‌: SITನಿಂದ ಹಿಂದೆ ಸರಿಯಲು ASP ವೆಂಕಟೇಶ್ ಪ್ರಸನ್ನ ಪತ್ರ..!
crime

ಸೌಜನ್ಯ ಕೇಸ್‌: SITನಿಂದ ಹಿಂದೆ ಸರಿಯಲು ASP ವೆಂಕಟೇಶ್ ಪ್ರಸನ್ನ ಪತ್ರ..!

Public Prime News

Public Prime News

Reported by Public Prime News

ಮಂಗಳೂರು: 
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗಾಗಿ ರಚಿಸಲಾಗಿರುವ ವಿಶೇಷ ತನಿಖಾ ತಂಡದಿಂದ (SIT) ಹೊರಗುಳಿಯುವಂತೆ ಸಹಾಯಕ ಪೊಲೀಸ್ ಅಧೀಕ್ಷಕ (ASP) ವೆಂಕಟೇಶ್ ಪ್ರಸನ್ನ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಸೆಪ್ಟೆಂಬರ್ 24ರಂದು ಐಜಿಪಿ ಶಶಿಕುಮಾರ್ ನೇತೃತ್ವದಲ್ಲಿ ಐವರು ಅಧಿಕಾರಿಗಳನ್ನೊಳಗೊಂಡ SIT ರಚಿಸಲಾಗಿತ್ತು. ತಂಡದಲ್ಲಿ ವೆಂಕಟೇಶ್ ಪ್ರಸನ್ನ ಅವರನ್ನೂ ಸೇರಿಸಲಾಗಿತ್ತು.

ಆದರೆ, ಈ ಹಿಂದೆ ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿದ್ದ ಅಧಿಕಾರಿಗಳನ್ನು ಹೊಸ ತನಿಖಾ ತಂಡದಲ್ಲಿ ಸೇರಿಸಬಾರದು ಎಂಬ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಉಲ್ಲೇಖಿಸಿ ಸೌಜನ್ಯ ಕುಟುಂಬ ಹಾಗೂ ವಿವಿಧ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದರು.

ವೆಂಕಟೇಶ್ ಪ್ರಸನ್ನ ವಿರುದ್ಧವೂ ಹಲವು ಆರೋಪಗಳನ್ನು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖೆಯ ನಿಷ್ಪಕ್ಷಪಾತತೆ ಮತ್ತು ಪಾರದರ್ಶಕತೆ ಕಾಪಾಡುವ ಉದ್ದೇಶದಿಂದ ತಮಗೆ SITಯಿಂದ ವಿನಾಯಿತಿ ನೀಡುವಂತೆ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
Share this story