Public Prime News

CLEAR VISION, TRUE MISSION

SSLC, PUC EXAM: ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ
education

SSLC, PUC EXAM: ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷಾ ನಿಯಮಗಳಲ್ಲಿ ಮಹತ್ವದ ಬದಲಾವಣೆ

Public Prime News

Public Prime News

Reported by Public Prime News

ಬೆಂಗಳೂರು: 

ರಾಜ್ಯದ ಎಸ್‌ಎಸ್‌ಎಲ್‌ಸಿ (SSLC) ಮತ್ತು ದ್ವಿತೀಯ ಪಿಯುಸಿ (2nd PUC) ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಮುಖ ಸುದ್ದಿಯೊಂದನ್ನು ನೀಡಿದೆ. 


ಕಳೆದ ಎರಡು ವರ್ಷಗಳಿಂದ ಜಾರಿಯಲ್ಲಿದ್ದ ‘ಮೂರು ವಾರ್ಷಿಕ ಪರೀಕ್ಷೆ’ಗಳ ವ್ಯವಸ್ಥೆಗೆ ಇಲಾಖೆ ತಡೆ ನೀಡಿದ್ದು, ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಕೇವಲ ಎರಡು ಪರೀಕ್ಷೆಗಳನ್ನು (Exam 1 & Exam 2) ಮಾತ್ರ ನಡೆಸಲು ಅಧಿಕೃತವಾಗಿ ನಿರ್ಧರಿಸಿದೆ.


ಕಳೆದ ಬಾರಿಯ ಪರೀಕ್ಷಾ ಫಲಿತಾಂಶ ಹಾಗೂ ನಿರ್ವಹಣೆಯ ಪ್ರಕ್ರಿಯೆಗಳನ್ನು ಪರಾಮರ್ಶಿಸಿ ಈ ಮಹತ್ವದ ತೀರ್ಮಾನ ತಳೆಯಲಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಇನ್ನು ಮುಂದೆ ಆರಂಭದಿಂದಲೇ ಅಭ್ಯಾಸದತ್ತ ಗಂಭೀರ ಗಮನ ಹರಿಸಬೇಕಿದೆ.


ಮೂರು ಪರೀಕ್ಷೆ ರದ್ದಾಗಿದ್ದೇಕೆ.? ಇಲಾಖೆ ನೀಡಿದ ಕಾರಣಗಳಿವು:


  • ಸಿಬ್ಬಂದಿ ಮೇಲಿನ ಅತಿಯಾದ ಕೆಲಸದ ಒತ್ತಡ: 

  • ವರ್ಷಕ್ಕೆ ಮೂರು ಪರೀಕ್ಷೆ ನಡೆಸುವುದರಿಂದ ಶಿಕ್ಷಣ ಇಲಾಖೆಯ ಸಿಬ್ಬಂದಿ ಹಾಗೂ ಶಿಕ್ಷಕರು ಸುಮಾರು 7 ತಿಂಗಳ ಕಾಲ ಪರೀಕ್ಷೆ, ಮೌಲ್ಯಮಾಪನ ಮತ್ತು ಅಂಕಪಟ್ಟಿ (Marks Card) ವಿತರಣೆಯ ಕೆಲಸಗಳಲ್ಲೇ ನಿರತರಾಗಬೇಕಿತ್ತು. ಇದರಿಂದ ನಿಯಮಿತ ಬೋಧನೆಗೆ ಅಡಚಣೆಯಾಗುತ್ತಿತ್ತು.


  • ಅಡ್ಮಿಷನ್ ಪ್ರಕ್ರಿಯೆ ವಿಳಂಬ: 

  • ನಿರಂತರ ಪರೀಕ್ಷೆಗಳಿಂದಾಗಿ ಉನ್ನತ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಗಳು ತಡವಾಗುತ್ತಿದ್ದು, ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ವರ್ಷದ ಮೇಲೆ ಪರಿಣಾಮ ಬೀರುತ್ತಿತ್ತು.


ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಇಲಾಖೆಯ ಸ್ಪಷ್ಟ ಸೂಚನೆ

"ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶವಿದೆ" ಎಂಬ ಆಲೋಚನೆಯಿಂದ ಅನೇಕ ವಿದ್ಯಾರ್ಥಿಗಳು ಅಭ್ಯಾಸದಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ.


ಇನ್ಮುಂದೆ ಕೇವಲ ಎರಡು ಪರೀಕ್ಷೆಗಳು ಮಾತ್ರ ಲಭ್ಯವಿರುವುದರಿಂದ, ವಿದ್ಯಾರ್ಥಿಗಳು ಯಾವುದೇ ಅಸಡ್ಡೆ ತೋರದೆ ಸಿದ್ಧತೆ ನಡೆಸಬೇಕು. ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಈ ಬದಲಾವಣೆಗೆ ಸಜ್ಜುಗೊಳಿಸುವಂತೆ ಶಾಲಾ-ಕಾಲೇಜುಗಳ ಮುಖ್ಯಸ್ಥರು ಹಾಗೂ ಶಿಕ್ಷಕರಿಗೆ ನಿರ್ದೇಶನ ನೀಡಲಾಗಿದೆ.

Share this story