Public Prime News

CLEAR VISION, TRUE MISSION

ಧರ್ಮಸ್ಥಳ ಪ್ರಕರಣ: UDR ದಾಖಲೆಗಳಲ್ಲಿ 30 ಪ್ರಕರಣಗಳ ವ್ಯತ್ಯಾಸ; SIT ತನಿಖೆ ವಿಸ್ತರಿಸಲು ಮಹಿಳಾ ಆಯೋಗ ಆಗ್ರಹ..!
crime

ಧರ್ಮಸ್ಥಳ ಪ್ರಕರಣ: UDR ದಾಖಲೆಗಳಲ್ಲಿ 30 ಪ್ರಕರಣಗಳ ವ್ಯತ್ಯಾಸ; SIT ತನಿಖೆ ವಿಸ್ತರಿಸಲು ಮಹಿಳಾ ಆಯೋಗ ಆಗ್ರಹ..!

Public Prime News

Public Prime News

Reported by Public Prime News

ಬೆಳ್ತಂಗಡಿ: 
ಧರ್ಮಸ್ಥಳ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಮಹತ್ವದ ಅಂಶ ಬೆಳಕಿಗೆ ಬಂದಿದೆ. 1998ರಿಂದ 2014ರವರೆಗಿನ ಅಸ್ವಾಭಾವಿಕ ಸಾವು (UDR) ಪ್ರಕರಣಗಳ ದಾಖಲೆಗಳಲ್ಲಿ 30 ಪ್ರಕರಣಗಳ ವ್ಯತ್ಯಾಸ ಕಂಡುಬಂದಿದೆ ಎಂದು ರಾಜ್ಯ ಮಹಿಳಾ ಆಯೋಗದ ಪತ್ರದಲ್ಲಿ ಉಲ್ಲೇಖಿಸಲಾಗಿದೆ. 

ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಅವರು ಮಹಿಳಾ ಆಯೋಗಕ್ಕೆ ಸಲ್ಲಿಸಿರುವ ವರದಿಯ ಆಧಾರದಲ್ಲಿ, ಧರ್ಮಸ್ಥಳ ಪೊಲೀಸ್ ಠಾಣೆಯ ದಾಖಲೆಗಳಲ್ಲಿ 1,480 UDR ಪ್ರಕರಣಗಳು ದಾಖಲಾಗಿದ್ದರೆ, SCRB ಹಾಗೂ ಗ್ರಾಮ ಪಂಚಾಯತ್ ದಾಖಲೆಗಳಲ್ಲಿ 1,510 ಪ್ರಕರಣಗಳು ಕಾಣಿಸಿಕೊಂಡಿವೆ. ಹೀಗಾಗಿ 30 ಪ್ರಕರಣಗಳ ಅಂತರ ಕಂಡುಬಂದಿದೆ ಎಂದು ಆಯೋಗ ತಿಳಿಸಿದೆ. 

ಈ ವ್ಯತ್ಯಾಸದ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕು. ಜೊತೆಗೆ ದಾಖಲೆಗಳು, ಪೊಲೀಸ್ ರಿಜಿಸ್ಟರ್‌ಗಳು, ಪಂಚಾಯತ್ ಮರಣ ನೋಂದಣಿ ಪುಸ್ತಕಗಳು ಹಾಗೂ ಸಂಬಂಧಿತ ವೈದ್ಯಕೀಯ ದಾಖಲೆಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವಂತೆ ಸರ್ಕಾರಕ್ಕೆ ಮಹಿಳಾ ಆಯೋಗ ಸೂಚಿಸಿದೆ. 

SIT ವ್ಯಾಪ್ತಿ ವಿಸ್ತರಣೆಗೆ ಒತ್ತಾಯ
ಹೊಸದಾಗಿ ಬೆಳಕಿಗೆ ಬಂದಿರುವ ಅಂಶಗಳನ್ನು ಪರಿಗಣಿಸಿ, ಈ ಪ್ರಕರಣಗಳನ್ನೂ ಈಗಾಗಲೇ ರಚಿಸಲಾಗಿರುವ SIT ತನಿಖೆಗೆ ಒಳಪಡಿಸುವಂತೆ ಮಹಿಳಾ ಆಯೋಗ ಸರ್ಕಾರವನ್ನು ಒತ್ತಾಯಿಸಿದೆ. ಅಗತ್ಯವಿದ್ದರೆ SITಯ ತನಿಖಾ ವ್ಯಾಪ್ತಿಯನ್ನು ಅಧಿಕೃತವಾಗಿ ವಿಸ್ತರಿಸುವಂತೆ ಮುಖ್ಯ ಕಾರ್ಯದರ್ಶಿಗೆ ಪತ್ರದ ಮೂಲಕ ಮನವಿ ಮಾಡಲಾಗಿದೆ. 

ಧರ್ಮಸ್ಥಳ ವ್ಯಾಪ್ತಿಯ ಮಹಿಳೆಯರು ಹಾಗೂ ಯುವತಿಯರ ನಾಪತ್ತೆ, ಅಸ್ವಾಭಾವಿಕ ಸಾವು, ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂಬ ಬೇಡಿಕೆಯನ್ನು ಮಹಿಳಾ ಆಯೋಗ ಈ ಹಿಂದೆಯೂ ಸರ್ಕಾರದ ಮುಂದಿಟ್ಟಿತ್ತು. 

30 UDR ಪ್ರಕರಣಗಳ ದಾಖಲೆ ವ್ಯತ್ಯಾಸದ ಹಿನ್ನೆಲೆ, ಸಂಬಂಧಿತ ಮೂಲ ದಾಖಲೆಗಳ ಪರಿಶೀಲನೆ ಮತ್ತು ವೈಜ್ಞಾನಿಕ ಸಾಕ್ಷ್ಯಗಳ ಆಧಾರದ ಮೇಲೆ ತನಿಖೆ ನಡೆಸುವಂತೆ ಮಹಿಳಾ ಆಯೋಗ ಒತ್ತಾಯಿಸಿರುವುದು ಪ್ರಕರಣದಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದೆ.
Share this story