Public Prime News

CLEAR VISION, TRUE MISSION

BREAKING: SSLC, ದ್ವಿತೀಯ PUC ಪರೀಕ್ಷೆ ಮುಂದೂಡಿಕೆ ಸಾಧ್ಯತೆ: ಜನಗಣತಿ ಕಾರ್ಯದಿಂದ ವೇಳಾಪಟ್ಟಿ ಬದಲಾವಣೆಯ ನಿರೀಕ್ಷೆ..!
education

BREAKING: SSLC, ದ್ವಿತೀಯ PUC ಪರೀಕ್ಷೆ ಮುಂದೂಡಿಕೆ ಸಾಧ್ಯತೆ: ಜನಗಣತಿ ಕಾರ್ಯದಿಂದ ವೇಳಾಪಟ್ಟಿ ಬದಲಾವಣೆಯ ನಿರೀಕ್ಷೆ..!

Public Prime News

Public Prime News

Reported by Public Prime News

ಬೆಂಗಳೂರು:

ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರ ಗಮನಕ್ಕೆ ಮುಖ್ಯವಾದ ಮಾಹಿತಿಯೊಂದು ಹೊರಬಿದ್ದಿದೆ. ಮುಂಬರುವ ಎಸ್‌ಎಸ್‌ಎಲ್‌ಸಿ (SSLC) ಮತ್ತು ದ್ವಿತೀಯ ಪಿಯುಸಿ (2nd PUC) ಪಬ್ಲಿಕ್ ಪರೀಕ್ಷೆಗಳ ದಿನಾಂಕಗಳು ಬದಲಾಗುವ ಸಾಧ್ಯತೆ ದಟ್ಟವಾಗಿದೆ.


ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜನಗಣತಿ ಕಾರ್ಯಾಚರಣೆ ಆರಂಭವಾಗುತ್ತಿರುವುದರಿಂದ, ಪ್ರಸ್ತುತ ನಿಗದಿಪಡಿಸಲಾದ ಪರೀಕ್ಷಾ ದಿನಾಂಕಗಳನ್ನು ಮುಂದೂಡುವಂತೆ 'ಕೇಂದ್ರ ಜನಗಣತಿ ನಿರ್ದೇಶನಾಲಯ'ವು ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಗೆ ಅಧಿಕೃತ ಪತ್ರ ಬರೆದು ಮನವಿ ಮಾಡಿದೆ.


ಪರೀಕ್ಷೆ ಮುಂದೂಡಿಕೆಗೆ ಕಾರಣವೇನು.?

ಕೇಂದ್ರ ಸರ್ಕಾರದ ಎರಡನೇ ಹಂತದ ಜನಗಣತಿ ಪ್ರಕ್ರಿಯೆಯು ಜನವರಿ 25 ರಿಂದ ಆರಂಭವಾಗಿ ಫೆಬ್ರವರಿ 28 ರವರೆಗೆ ನಡೆಯಲಿದೆ. ಇದರ ಬೆನ್ನಲ್ಲೇ ಮಾರ್ಚ್ 5 ರವರೆಗೆ ಪರಿಷ್ಕರಣಾ ಸುತ್ತಿನ ಕೆಲಸಗಳು ಮುಂದುವರಿಯಲಿವೆ.


ಜನಗಣತಿಯಂತಹ ಬೃಹತ್ ಮತ್ತು ಮಹತ್ವದ ರಾಷ್ಟ್ರೀಯ ಕಾರ್ಯಕ್ಕೆ ಶಾಲಾ-ಕಾಲೇಜುಗಳ ಶಿಕ್ಷಕರು ಹಾಗೂ ಉಪನ್ಯಾಸಕರ ಸೇವೆಯನ್ನು ವ್ಯಾಪಕವಾಗಿ ಬಳಸಿಕೊಳ್ಳಲಾಗುತ್ತದೆ.


ಹೀಗಾಗಿ, ಶಿಕ್ಷಕರು ಜನಗಣತಿ ಕಾರ್ಯದಲ್ಲಿ ನಿರತರಾಗುವುದರಿಂದ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ನಿಗದಿಯಾಗಿದ್ದ ವಾರ್ಷಿಕ ಪರೀಕ್ಷೆಗಳನ್ನು ಮುಂದೂಡುವುದು ಅನಿವಾರ್ಯ ಎಂಬ ಪ್ರಸ್ತಾಪವನ್ನು ನಿರ್ದೇಶನಾಲಯ ಮುಂದಿಟ್ಟಿದೆ.


ಪ್ರಸ್ತುತ ಪ್ರಕಟವಾಗಿದ್ದ ತಾತ್ಕಾಲಿಕ ವೇಳಾಪಟ್ಟಿ ವಿವರ:

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಈ ಮೊದಲು ಬಿಡುಗಡೆ ಮಾಡಿದ್ದ ತಾತ್ಕಾಲಿಕ ವೇಳಾಪಟ್ಟಿ ಹೀಗಿತ್ತು:


ಎಸ್‌ಎಸ್‌ಎಲ್‌ಸಿ (SSLC Exam)


  • ಮೊದಲ ಪರೀಕ್ಷೆ (Exam 1): 

  • ಮಾರ್ಚ್ 22 ರಿಂದ ಏಪ್ರಿಲ್ 5


  • ಎರಡನೇ ಪರೀಕ್ಷೆ (Exam 2): 

  • ಮೇ 24 ರಿಂದ ಮೇ 31


ದ್ವಿತೀಯ ಪಿಯುಸಿ (2nd PUC Exam)


  • ಮೊದಲ ಪರೀಕ್ಷೆ (Exam 1):

  • ಫೆಬ್ರವರಿ 27 ರಿಂದ ಮಾರ್ಚ್ 17


  • ಎರಡನೇ ಪರೀಕ್ಷೆ (Exam 2): 

  • ಮೇ 3 ರಿಂದ ಮೇ 15


ಜನಗಣತಿ ನಿರ್ದೇಶನಾಲಯದ ಮನವಿಯ ಹಿನ್ನೆಲೆಯಲ್ಲಿ, ಮಂಡಳಿಯು ಈ ದಿನಾಂಕಗಳನ್ನು ಪರಿಷ್ಕರಿಸಲು ಗಂಭೀರ ಚಿಂತನೆ ನಡೆಸಿದೆ. ಶಿಕ್ಷಕರ ಲಭ್ಯತೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಶೀಘ್ರದಲ್ಲೇ ಪರಿಷ್ಕೃತ (New Schedule) ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆಯಿದೆ.

Share this story