ಬೆಂಗಳೂರು:
ರಾಜ್ಯದ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಹುನಿರೀಕ್ಷಿತ ಪರೀಕ್ಷಾ ವೇಳಾಪಟ್ಟಿ ಇದೀಗ ಹೊರಬಿದ್ದಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು 2027ನೇ ಸಾಲಿನ SSLC ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ-1 ಹಾಗೂ ಪರೀಕ್ಷೆ-2ರ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಪರೀಕ್ಷೆಗಳಿಗೆ ಮುಂಚಿತವಾಗಿ ವಿದ್ಯಾರ್ಥಿಗಳು ಓದು ಮತ್ತು ಪುನರಾವರ್ತನೆಗೆ ಸೂಕ್ತ ಯೋಜನೆ ರೂಪಿಸಿಕೊಳ್ಳಲು ಈ ವೇಳಾಪಟ್ಟಿ ಸಹಕಾರಿಯಾಗಲಿದೆ. ಆದರೆ ಇದು ತಾತ್ಕಾಲಿಕ ವೇಳಾಪಟ್ಟಿಯಾಗಿದ್ದು, ದಿನಾಂಕಗಳಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರು ತಮ್ಮ ಸಲಹೆ ಅಥವಾ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಅಕ್ಟೋಬರ್ 22ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ
ತಾತ್ಕಾಲಿಕ ವೇಳಾಪಟ್ಟಿಗೆ ಸಂಬಂಧಿಸಿದ ಆಕ್ಷೇಪಣೆಗಳನ್ನು ಅಕ್ಟೋಬರ್ 22ರೊಳಗೆ ಸಲ್ಲಿಸಬಹುದಾಗಿದೆ. ಸ್ವೀಕರಿಸಲಾದ ಸಲಹೆ ಹಾಗೂ ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಮಂಡಳಿ ಅಂತಿಮ ವೇಳಾಪಟ್ಟಿಯನ್ನು ಪ್ರಕಟಿಸಲಿದೆ.
2027ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1 ಅನ್ನು ಮಾರ್ಚ್ 22ರಿಂದ ಏಪ್ರಿಲ್ 5ರವರೆಗೆ ನಡೆಸಲು ತಾತ್ಕಾಲಿಕವಾಗಿ ನಿರ್ಧರಿಸಲಾಗಿದೆ.
ಪ್ರಮುಖ ಪರೀಕ್ಷಾ ದಿನಾಂಕಗಳು:
ಮಾರ್ಚ್ 22 – ಪ್ರಥಮ ಭಾಷೆ
ಮಾರ್ಚ್ 25 – ವಿಜ್ಞಾನ, ರಾಜ್ಯಶಾಸ್ತ್ರ
ಮಾರ್ಚ್ 27 – ದ್ವಿತೀಯ ಭಾಷೆ
ಮಾರ್ಚ್ 30 – ಗಣಿತ, ಸಮಾಜಶಾಸ್ತ್ರ
ಏಪ್ರಿಲ್ 2 – ತೃತೀಯ ಭಾಷೆ
ಏಪ್ರಿಲ್ 3 – ಅರ್ಥಶಾಸ್ತ್ರ
ಏಪ್ರಿಲ್ 5 – ಸಮಾಜ ವಿಜ್ಞಾನ
SSLC ಪರೀಕ್ಷೆ-2ರ ದಿನಾಂಕಗಳು
ಫಲಿತಾಂಶ ಸುಧಾರಣೆಗೆ ಅವಕಾಶ ಕಲ್ಪಿಸುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ-2 ಅನ್ನು ಮೇ 24ರಿಂದ ಮೇ 31ರವರೆಗೆ ನಡೆಸಲು ವೇಳಾಪಟ್ಟಿ ರೂಪಿಸಲಾಗಿದೆ.
ಮೇ 24 – ಪ್ರಥಮ ಭಾಷೆ
ಮೇ 25 – ವಿಜ್ಞಾನ
ಮೇ 26 – ದ್ವಿತೀಯ ಭಾಷೆ
ಮೇ 27 – ಗಣಿತ
ಮೇ 28 – ತೃತೀಯ ಭಾಷೆ
ಮೇ 29 – ಸಮಾಜ ವಿಜ್ಞಾನ
ಮೇ 31-ಅರ್ಥಶಾಸ್ತ್ರ
ಮೇ 31-ಅರ್ಥಶಾಸ್ತ್ರ
ದ್ವಿತೀಯ ಪಿಯುಸಿ ಪರೀಕ್ಷೆ-1
ದ್ವಿತೀಯ ಪಿಯುಸಿ ಪರೀಕ್ಷೆ-1 ಫೆಬ್ರವರಿ 27ರಿಂದ ಮಾರ್ಚ್ 17ರವರೆಗೆ ನಡೆಯಲಿದೆ.
ಪ್ರಮುಖ ದಿನಾಂಕಗಳ ಪಟ್ಟಿ:
ಫೆಬ್ರವರಿ 27 – ಕನ್ನಡ, ಅರೇಬಿಕ್
ಮಾರ್ಚ್ 1 – ಇಂಗ್ಲಿಷ್
ಮಾರ್ಚ್ 2 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾರ್ಚ್ 3 – ಭೂಗೋಳಶಾಸ್ತ್ರ, ಮನಃಶಾಸ್ತ್ರ
ಮಾರ್ಚ್ 4 – ಸಮಾಜಶಾಸ್ತ್ರ, ಭೌತಶಾಸ್ತ್ರ
ಮಾರ್ಚ್ 5 – ಲೆಕ್ಕಶಾಸ್ತ್ರ
ಮಾರ್ಚ್ 8 – ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
ಮಾರ್ಚ್ 9 – ಅರ್ಥಶಾಸ್ತ್ರ, ಭೂಗರ್ಭಶಾಸ್ತ್ರ
ಮಾರ್ಚ್ 11 – ಹಿಂದುಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್, ರಿಟೇಲ್, ಆಟೋಮೊಬೈಲ್, ಬಿಸಿನೆಸ್ ಅಂಡ್ ವೆಲ್‌ನೆಸ್, ಮಾಹಿತಿ ತಂತ್ರಜ್ಞಾನ
ಮಾರ್ಚ್ 12 – ವ್ಯವಹಾರ ಅಧ್ಯಯನ, ಗಣಿತ
ಮಾರ್ಚ್ 13 – ಐಚ್ಛಿಕ ಕನ್ನಡ, ತರ್ಕಶಾಸ್ತ್ರ, ಗೃಹವಿಜ್ಞಾನ
ಮಾರ್ಚ್ 15 – ರಾಜ್ಯಶಾಸ್ತ್ರ, ತರ್ಕಶಾಸ್ತ್ರ, ಗಣಕಶಾಸ್ತ್ರ
ಮಾರ್ಚ್ 16 – ಇತಿಹಾಸ, ಜೀವಶಾಸ್ತ್ರ, ಗೃಹವಿಜ್ಞಾನ
ಮಾರ್ಚ್ 17-ಹಿಂದಿ
ದ್ವಿತೀಯ ಪಿಯುಸಿ ಪರೀಕ್ಷೆ-2
ದ್ವಿತೀಯ ಪಿಯುಸಿ ಪರೀಕ್ಷೆ-2 ಅನ್ನು ಮೇ 3ರಿಂದ ಮೇ 15ರವರೆಗೆ ನಡೆಸಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಲಾಗಿದೆ.
ಮೇ 3 – ಕನ್ನಡ, ಅರೇಬಿಕ್
ಮೇ 4 – ಲೆಕ್ಕಶಾಸ್ತ್ರ, ಜೀವಶಾಸ್ತ್ರ, ಭೂಗರ್ಭಶಾಸ್ತ್ರ, ವಿದ್ಯುನ್ಮಾನಶಾಸ್ತ್ರ
ಮೇ 5 – ರಾಜ್ಯಶಾಸ್ತ್ರ, ಗಣಕಶಾಸ್ತ್ರ
ಮೇ 6 – ಇತಿಹಾಸ, ರಸಾಯನಶಾಸ್ತ್ರ
ಮೇ 7 – ವ್ಯವಹಾರ ಅಧ್ಯಯನ, ಮನಃಶಾಸ್ತ್ರ, ಶಿಕ್ಷಣಶಾಸ್ತ್ರ
ಮೇ 8 – ಐಚ್ಛಿಕ ಕನ್ನಡ, ಭೌತಶಾಸ್ತ್ರ, ಮೂಲ ಗಣಿತ
ಮೇ 10 – ಅರ್ಥಶಾಸ್ತ್ರ, ಗಣಿತ
ಮೇ 11 – ಹಿಂದಿ
ಮೇ 12 – ಇಂಗ್ಲಿಷ್
ಮೇ 13 – ಸಮಾಜಶಾಸ್ತ್ರ, ಸಂಖ್ಯಾಶಾಸ್ತ್ರ
ಮೇ 14 – ತರ್ಕಶಾಸ್ತ್ರ, ಭೂಗೋಳಶಾಸ್ತ್ರ, ಗೃಹವಿಜ್ಞಾನ
ಮೇ 15 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ ಸೇರಿದಂತೆ ವಿವಿಧ ವಿಷಯಗಳು
ವಿದ್ಯಾರ್ಥಿಗಳು ಗಮನಿಸಬೇಕಾದದ್ದು ಏನು.?
ಪ್ರಸ್ತುತ ಪ್ರಕಟಿಸಿರುವುದು ತಾತ್ಕಾಲಿಕ ವೇಳಾಪಟ್ಟಿ ಮಾತ್ರ. ಹೀಗಾಗಿ ಅಂತಿಮ ವೇಳಾಪಟ್ಟಿ ಪ್ರಕಟವಾಗುವವರೆಗೆ ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ಮಾಹಿತಿಯನ್ನು ಗಮನಿಸುತ್ತಿರಬೇಕು. ಏತನ್ಮಧ್ಯೆ, ಪ್ರಕಟವಾಗಿರುವ ದಿನಾಂಕಗಳನ್ನು ಆಧಾರವಾಗಿಟ್ಟುಕೊಂಡು ಪರೀಕ್ಷಾ ಸಿದ್ಧತೆ, ಪಠ್ಯಕ್ರಮ ಪೂರ್ಣಗೊಳಿಸುವಿಕೆ ಮತ್ತು ಪುನರಾವರ್ತನೆಗೆ ವೇಳಾಪಟ್ಟಿ ರೂಪಿಸಿಕೊಳ್ಳುವುದು ಉತ್ತಮ.
2027ರ SSLC ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ಎದುರಿಸಲಿರುವ ವಿದ್ಯಾರ್ಥಿಗಳಿಗೆ ಈ ವೇಳಾಪಟ್ಟಿ ಪರೀಕ್ಷಾ ಸಿದ್ಧತೆಗೆ ಪ್ರಮುಖ ಮಾರ್ಗದರ್ಶಿಯಾಗಲಿದೆ


