Public Prime News

CLEAR VISION, TRUE MISSION

ಬ್ರೇಕಿಂಗ್: ದರ್ಶನ್ ಆಪ್ತ ಪ್ರದೋಷ್ ರಾವ್ ಮಾಫಿ ಸಾಕ್ಷಿ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ..!
crime

ಬ್ರೇಕಿಂಗ್: ದರ್ಶನ್ ಆಪ್ತ ಪ್ರದೋಷ್ ರಾವ್ ಮಾಫಿ ಸಾಕ್ಷಿ ನಿರ್ಧಾರ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ..!

Public Prime News

Public Prime News

Reported by Public Prime News

ಬೆಂಗಳೂರು:

ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿರುವ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಹಾಗೂ ವಿಚಾರಣಾ ಹಂತದಲ್ಲಿ ದಿನಕ್ಕೊಂದು ರೋಚಕ ತಿರುವುಗಳು ಸಿಗುತ್ತಿವೆ.


ಜೈಲಿನಲ್ಲಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರಿಗೆ ಕಾನೂನು ತೊಡಕುಗಳು ದಿನದಿಂದ ದಿನಕ್ಕೆ ಬಿಗಿಯಾಗುತ್ತಿವೆ. ಪ್ರಕರಣದ ಸಹ ಆರೋಪಿಯಾಗಿರುವ ದರ್ಶನ್ ಆಪ್ತ ಪ್ರದೋಷ್ ರಾವ್ ಈಗ ಸರ್ಕಾರಿ ಮಾಫಿ ಸಾಕ್ಷಿಯಾಗಲು (Approver) ಮುಂದೆ ಬಂದಿದ್ದು, ಇದನ್ನು ತಡೆಯಲು ದರ್ಶನ್ ಕಾನೂನು ಸಮರವನ್ನು ತೀವ್ರಗೊಳಿಸಿದ್ದಾರೆ.


ಮಾಫಿ ಸಾಕ್ಷಿ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ದರ್ಶನ್

ಪ್ರದೋಷ್ ರಾವ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವುದನ್ನು ವಿರೋಧಿಸಿ ನಟ ದರ್ಶನ್ ಈಗಾಗಲೇ ವಿಚಾರಣಾ ನ್ಯಾಯಾಲಯ ಹಾಗೂ ಹೈಕೋರ್ಟ್‌ಗೆ ಮನವಿ ಸಲ್ಲಿಸಿ ಹಿನ್ನಡೆ ಅನುಭವಿಸಿದ್ದರು. 


ಮಾಫಿ ಸಾಕ್ಷಿ ನೀಡುವುದಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವಾಗ ಇತರ ಸಹ ಆರೋಪಿಗಳ ಆಕ್ಷೇಪಣೆಯನ್ನು ಆಲಿಸುವ ಅಗತ್ಯವಿಲ್ಲ ಎಂಬ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ದರ್ಶನ್ ಈಗ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ದರ್ಶನ್ ಪರವಾಗಿ ಒಟ್ಟು 3 ಪ್ರತ್ಯೇಕ ಮೇಲ್ಮನವಿ ಅರ್ಜಿಗಳನ್ನು ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿ ದಾಖಲಿಸಲಾಗಿದೆ.


ನ್ಯಾಯಾಧೀಶರ ಎದುರು ಪ್ರದೋಷ್ ಇನ್‌ಕ್ಯಾಮೆರಾ ಹೇಳಿಕೆ

ಮತ್ತೊಂದೆಡೆ, ಮಾಫಿ ಸಾಕ್ಷಿಯಾಗಲು ಸಮ್ಮತಿಸಿರುವ ಪ್ರದೋಷ್ ರಾವ್ ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಂಗಳೂರಿನ 59ನೇ ಸಿಸಿಹೆಚ್ (CCH) ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.


ನ್ಯಾಯಾಧೀಶರ ಸಮ್ಮುಖದಲ್ಲಿ ನಡೆಯುತ್ತಿರುವ ಇನ್‌ಕ್ಯಾಮೆರಾ ಪ್ರೊಸೀಡಿಂಗ್ಸ್ ವೇಳೆ ಸತತ ಮೂರು ಗಂಟೆಗಳ ಕಾಲ ವಿಚಾರಣೆ ಎದುರಿಸಿರುವ ಪ್ರದೋಷ್, ರೇಣುಕಾಸ್ವಾಮಿ ಅಪಹರಣ, ಹತ್ಯೆಯ ಸನ್ನಿವೇಶ ಹಾಗೂ ಕೃತ್ಯದಲ್ಲಿ ನಟ ದರ್ಶನ್ ಅವರ ಪಾತ್ರದ ಕುರಿತು ಪ್ರಮುಖ ರಹಸ್ಯ ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ. ಈ ಬೆಳವಣಿಗೆಯು ದರ್ಶನ್ ಕಾನೂನು ತಂಡಕ್ಕೆ ತೀವ್ರ ತಲೆನೋವು ತಂದಿದೆ.

Share this story