Public Prime News

CLEAR VISION, TRUE MISSION

ನಾಲ್ಕೂರು ನರಸಿಂಗ ರಾವ್ ಸ್ಮಾರಕ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
local-news

ನಾಲ್ಕೂರು ನರಸಿಂಗ ರಾವ್ ಸ್ಮಾರಕ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

Public Prime News

Public Prime News

Reported by Public Prime News

ಕಾರ್ಕಳ/ಶಿರ್ಲಾಲು: 
ನಾಲ್ಕೂರು ನರಸಿಂಗ ರಾವ್ ಸ್ಮಾರಕ ಸರಕಾರಿ ಪದವಿ ಪೂರ್ವ ಕಾಲೇಜಿನ ಶಿರ್ಲಾಲು ಪ್ರೌಢಶಾಲಾ ವಿಭಾಗದಲ್ಲಿ ನೂತನ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ ಸಭೆ ನಡೆಯಿತು.

ಸಭೆಯಲ್ಲಿ ಪ್ರಕಾಶ್ ಪೂಜಾರಿ ಕೆರ್ವಾಶೆ ಅವರನ್ನು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ, ನ್ಯಾಯವಾದಿ ಶೀತಲ್ ಕುಮಾರ್ ಜೈನ್ ಅವರನ್ನು ಕಾರ್ಯದರ್ಶಿಯಾಗಿ ಹಾಗೂ ರಮಾನಂದ ಪೂಜಾರಿ ಶಿರ್ಲಾಲು ಅವರನ್ನು ಕೋಶಾಧಿಕಾರಿಯಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ನಿಕಟಪೂರ್ವ ಅಧ್ಯಕ್ಷರಾಗಿದ್ದ ಶೀತಲ್ ಕುಮಾರ್ ಜೈನ್ ಅವರನ್ನು ಗೌರವಾಧ್ಯಕ್ಷರಾಗಿ ನೇಮಿಸಲಾಯಿತು.

ಉಪಾಧ್ಯಕ್ಷರಾಗಿ ಸುದೀಪ್ ಹೆಗ್ಡೆ ಶಿರ್ಲಾಲು, ರವೀಂದ್ರ ಎಸ್. ಪೂಜಾರಿ ಶಿರ್ಲಾಲು, ಶಶಿಕಾಂತ್ ಪ್ರಭು ಶಿರ್ಲಾಲು, ಅಭಿನಂದನ್ ಜೈನ್ ಜಾರ್ಕಳ ಮುಂಡ್ಲಿ, ಸುರೇಖಾ ಶೆಟ್ಟಿ ಶಿರ್ಲಾಲು, ಮಹೇಶ್ ಜಿ. ಶೆಟ್ಟಿ ಶಿರ್ಲಾಲು, ಅಕ್ಷಯ ಜೈನ್ ಕೆರ್ವಾಶೆ ಹಾಗೂ ದಿನೇಶ್ ಆಚಾರ್ಯ ಅಂಡಾರು ಆಯ್ಕೆಯಾದರು.

ಜಂಟಿ ಕಾರ್ಯದರ್ಶಿಗಳಾಗಿ ನಿತಿನ್ ಶಿರ್ಲಾಲು ಮತ್ತು ಪೂಜಾ ಕೆರ್ವಾಶೆ ಅವರನ್ನು ನೇಮಿಸಲಾಯಿತು. ಕ್ರೀಡಾ ಕಾರ್ಯದರ್ಶಿಗಳಾಗಿ ನಿತಿನ್ ಚರಿತ್ರೆ ಮತ್ತು ವಿದ್ಯಾಶ್ರೀ ಕೆರ್ವಾಶೆ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ರಕ್ಷಣ್ ಭಂಡಾರಿ ಶಿರ್ಲಾಲು ಹಾಗೂ ರಂಜಿತ್ ಪೂಜಾರಿ ಶಿರ್ಲಾಲು ಆಯ್ಕೆಯಾಗಿದ್ದಾರೆ.

ಶಾಲೆ ಹಾಗೂ ಕಾಲೇಜಿನ ಅಭಿವೃದ್ಧಿ ಚಟುವಟಿಕೆಗಳಿಗೆ ಹಳೆ ವಿದ್ಯಾರ್ಥಿಗಳ ಸಹಕಾರ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನೂತನ ಸಂಘ ಕಾರ್ಯನಿರ್ವಹಿಸಲಿದೆ.

ನೂತನ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಶಾಲಾ ಅಭಿವೃದ್ಧಿ ಸಮಿತಿ, ಕಾಲೇಜು ಅಭಿವೃದ್ಧಿ ಸಮಿತಿ, ಮುಖ್ಯ ಶಿಕ್ಷಕರು, ಪ್ರಾಂಶುಪಾಲರು ಹಾಗೂ ಅಧ್ಯಾಪಕ ವೃಂದ ಅಭಿನಂದನೆ ಸಲ್ಲಿಸಿ, ಸಂಘದ ಮುಂದಿನ ಕಾರ್ಯಚಟುವಟಿಕೆಗಳಿಗೆ ಶುಭ ಹಾರೈಸಿದರು.
Share this story