ಕಾಪು:
TV9 ವಾಹಿನಿಯ ಮುಖ್ಯ ನಿರ್ಮಾಪಕ ರಂಗನಾಥ ಭಾರದ್ವಾಜ್ ಅವರು ಕುಟುಂಬ ಸಮೇತರಾಗಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮ ದೇವಿಯ ದರ್ಶನ ಪಡೆದರು.
ಈ ಸಂದರ್ಭದಲ್ಲಿ ದೇವಸ್ಥಾನದ ಧಾರ್ಮಿಕ ಮಹತ್ವ, ಅಭಿವೃದ್ಧಿ ಕಾರ್ಯಗಳು ಹಾಗೂ ಭಕ್ತರಿಗಾಗಿ ನಡೆಯುತ್ತಿರುವ ಸೇವಾ ಚಟುವಟಿಕೆಗಳ ಕುರಿತು ಮಾಹಿತಿ ಪಡೆದುಕೊಂಡರು.
ದೇವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ ಅವರು ನವದುರ್ಗಾ ಲೇಖನ ಯಜ್ಞದ ಕುರಿತು ಮಾಹಿತಿ ನೀಡಿದರು. ರಂಗನಾಥ ಭಾರದ್ವಾಜ್ ಅವರ ಪತ್ನಿ ಲೇಖನವನ್ನು ಪಡೆದು ಕಾಪುವಿನ ಅಮ್ಮನಿಗೆ ಅಕ್ಷರ ನಮನ ಸಲ್ಲಿಸಿದರು.
ಈ ವೇಳೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗೂ ಅಭಿವೃದ್ಧಿ ಸಮಿತಿಯ ವತಿಯಿಂದ ರಂಗನಾಥ ಭಾರದ್ವಾಜ್ ಅವರನ್ನು ಗೌರವಿಸಿ, ಅಮ್ಮನ ಅನುಗ್ರಹ ಪ್ರಸಾದ ನೀಡಲಾಯಿತು.


