Public Prime News

CLEAR VISION, TRUE MISSION

ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲರ ಹುದ್ದೆ ಆಕಾಂಕ್ಷಿಗಳಿಗೆ ಬಿಗ್ ರಿಲೀಫ್: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿ ಕೆಇಎ ಪರಿಷ್ಕೃತ ಆದೇಶ
education

ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲರ ಹುದ್ದೆ ಆಕಾಂಕ್ಷಿಗಳಿಗೆ ಬಿಗ್ ರಿಲೀಫ್: ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿ ಕೆಇಎ ಪರಿಷ್ಕೃತ ಆದೇಶ

Public Prime News

Public Prime News

Reported by Public Prime News

ಬೆಂಗಳೂರು: 

ರಾಜ್ಯದ ಸರ್ಕಾರಿ ಪದವಿ ಪೂರ್ವ (ಪಿಯು) ಕಾಲೇಜುಗಳಲ್ಲಿ ಖಾಲಿ ಇರುವ ‘ಗ್ರೂಪ್-ಎ’ ಪ್ರಾಂಶುಪಾಲರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದ ಉಪನ್ಯಾಸಕರಿಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಬಿಗ್ ರಿಲೀಫ್ ನೀಡಿದೆ. 


ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ಅಕ್ಟೋಬರ್ 24ರವರೆಗೆ ವಿಸ್ತರಿಸಿ ಕೆಇಎ ಅಧಿಕೃತ ಪರಿಷ್ಕೃತ ಅಧಿಸೂಚನೆ ಹೊರಡಿಸಿದೆ.


ಅರ್ಜಿ ಹಾಗೂ ಶುಲ್ಕ ಪಾವತಿಗೆ ಹೊಸ ಗಡುವು:

ಅರ್ಹ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್‌ಸೈಟ್ (cetonline.karnataka.gov.in/kea) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಭರ್ತಿ ಮಾಡಿದ ಬಳಿಕ ಶುಲ್ಕ ಪಾವತಿಸಲು ಬಾಕಿ ಇರುವ ಅಭ್ಯರ್ಥಿಗಳಿಗೆ ಅಕ್ಟೋಬರ್ 25ರವರೆಗೆ ಕಾಲಾವಕಾಶ ಕಲ್ಪಿಸಲಾಗಿದೆ.


ಹುದ್ದೆಗಳ ವಿವರ ಹಾಗೂ ವರ್ಗೀಕರಣ: 

ಈ ನೇಮಕಾತಿ ಅಭಿಯಾನದ ಮೂಲಕ ಒಟ್ಟು 247 ಪ್ರಾಂಶುಪಾಲರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಹುದ್ದೆಗಳ ಹಂಚಿಕೆ ಹೀಗಿದೆ:


  • ಉಳಿಕೆ ಮೂಲ ವೃಂದ (RPC): 216 ಹುದ್ದೆಗಳು


  • ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದ (KK): 31 ಹುದ್ದೆಗಳು


ಯಾರಿಗೆ ಸಿಗಲಿದೆ ಅವಕಾಶ.? (ಅರ್ಹತೆ): 

ಪ್ರಸ್ತುತ ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಕನಿಷ್ಠ 10 ವರ್ಷಗಳ ಸೇವಾ ಅನುಭವದೊಂದಿಗೆ ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿರುವ ಅರ್ಹ ಉಪನ್ಯಾಸಕರಿಗೆ ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.


ಆಕರ್ಷಕ ವೇತನ ಶ್ರೇಣಿ & ಪರೀಕ್ಷಾ ವಿಧಾನ: 

ಆಯ್ಕೆಯಾಗುವ ಅಭ್ಯರ್ಥಿಗಳಿಗೆ ₹90,200 ರಿಂದ ₹1,59,200 ವರೆಗೆ ಅತ್ಯಾಕರ್ಷಕ ವೇತನ ಶ್ರೇಣಿ ನಿಗದಿಯಾಗಿದೆ. 


ಅಭ್ಯರ್ಥಿಗಳ ಆಯ್ಕೆಯನ್ನು ಕೆಇಎ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಮಾಡಲಾಗುತ್ತದೆ. ಈ ಪರೀಕ್ಷೆಯು ಕನ್ನಡ ಭಾಷಾ ಪತ್ರಿಕೆ (ಅರ್ಹತಾ ಪತ್ರಿಕೆ), ಸಾಮಾನ್ಯ ಅಧ್ಯಯನ ಹಾಗೂ ಸೇವಾ ನಿಯಮಗಳು ಮತ್ತು ಆಡಳಿತ ವಿಷಯಗಳನ್ನೊಳಗೊಂಡ ಒಟ್ಟು ಮೂರು ಪ್ರಮುಖ ಪತ್ರಿಕೆಗಳನ್ನು ಒಳಗೊಂಡಿರಲಿದೆ.

Share this story