Public Prime News

CLEAR VISION, TRUE MISSION

BREAKING: ನಟ ದರ್ಶನ್‌ಗೆ ಬಿಗ್ ಶಾಕ್: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನ್ಯಾಯಾಲಯದಿಂದ ಎರಡೂ ಅರ್ಜಿಗಳು ವಜಾ..!
crime

BREAKING: ನಟ ದರ್ಶನ್‌ಗೆ ಬಿಗ್ ಶಾಕ್: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನ್ಯಾಯಾಲಯದಿಂದ ಎರಡೂ ಅರ್ಜಿಗಳು ವಜಾ..!

Public Prime News

Public Prime News

Reported by Public Prime News

ಬೆಂಗಳೂರು: 
ರಾಜ್ಯಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. 

ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದ ಪ್ರದೋಷ್‌ ಇದೀಗ ಮಾಫಿ ಸಾಕ್ಷಿ (Approver) ಆಗಿ ನ್ಯಾಯಾಲಯದ ಮುಂದೆ ತನ್ನ ಹೇಳಿಕೆ ದಾಖಲಿಸುತ್ತಿದ್ದಾರೆ. ಇದೇ ವೇಳೆ, ನಟ ದರ್ಶನ್‌ ಪರ ಸಲ್ಲಿಸಲಾಗಿದ್ದ ಎರಡು ಮಧ್ಯಂತರ ಅರ್ಜಿಗಳನ್ನು 59ನೇ ಸಿಸಿಹೆಚ್‌ ನ್ಯಾಯಾಲಯ ವಜಾಗೊಳಿಸಿದೆ.

108 ಪುಟಗಳ ಹೇಳಿಕೆ ದಾಖಲಿಸಿದ ಪ್ರದೋಷ್‌
ನ್ಯಾಯಾಲಯದಲ್ಲಿ ಸತತ ನಾಲ್ಕು ದಿನ ನಡೆದ ವಿಚಾರಣೆ ವೇಳೆ ಪ್ರದೋಷ್‌ ಸುಮಾರು 108 ಪುಟಗಳಷ್ಟು ಹೇಳಿಕೆ ದಾಖಲಿಸಿದ್ದಾರೆ ಎನ್ನಲಾಗಿದೆ. ಒಟ್ಟು 175 ಪ್ಯಾರಾಗಳಲ್ಲಿ ಪ್ರಕರಣದ ಹಿನ್ನೆಲೆ, ಘಟನೆಗಳ ಸರಣಿ, ಆರೋಪಿತ ಪಿತೂರಿ ಹಾಗೂ ವಿವಿಧ ಆರೋಪಿಗಳ ಪಾತ್ರದ ಕುರಿತು ವಿವರ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಪ್ರದೋಷ್‌ ಮಾಫಿ ಸಾಕ್ಷಿಯಾಗಿರುವುದು ಪ್ರಕರಣದ ಮುಂದಿನ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಪ್ರಮುಖ ಅಂಶವಾಗುವ ಸಾಧ್ಯತೆ ಇದೆ.

ದರ್ಶನ್‌ ಪರ ಎರಡು ಅರ್ಜಿ
ಪ್ರದೋಷ್‌ನನ್ನು ಜೈಲಿನಿಂದ ನ್ಯಾಯಾಲಯಕ್ಕೆ ಕರೆತರುವಾಗ ಹಾಗೂ ವಿಚಾರಣೆ ಬಳಿಕ ವಾಪಸ್ ಕರೆದೊಯ್ಯುವ ಸಂದರ್ಭದಲ್ಲಿ ಆತ ಇತರರೊಂದಿಗೆ ಮಾತನಾಡದಂತೆ ಕ್ರಮ ಕೈಗೊಳ್ಳಬೇಕು.

ಅಲ್ಲದೆ, ಆತನಿಗೆ ಸೂಕ್ತ ಭದ್ರತೆ ಒದಗಿಸಿ ಪ್ರತ್ಯೇಕವಾಗಿರಿಸಬೇಕು ಎಂದು ದರ್ಶನ್‌ ಪರ ವಕೀಲರು ಮೊದಲ ಅರ್ಜಿಯಲ್ಲಿ ಮನವಿ ಮಾಡಿದ್ದರು. ಈ ಅರ್ಜಿಯನ್ನು BNSS ಸೆಕ್ಷನ್‌ 302 ಹಾಗೂ CrPC ಸೆಕ್ಷನ್‌ 267ರ ಅಡಿಯಲ್ಲಿ ಸಲ್ಲಿಸಲಾಗಿತ್ತು.

ಇನ್ನೊಂದು ಅರ್ಜಿಯಲ್ಲಿ ಪ್ರದೋಷ್‌ ಹೇಳಿಕೆ ದಾಖಲಿಸುವ ವೇಳೆ ಮೊದಲ ದಿನ ಹೇಳದೆ ಉಳಿದ ಅಂಶಗಳನ್ನು ನಂತರದ ದಿನಗಳಲ್ಲಿ ನೆನಪಿಸಿಕೊಂಡು ಸೇರ್ಪಡೆ ಮಾಡಲು ಅವಕಾಶ ನೀಡಬಾರದು ಎಂದು ದರ್ಶನ್‌ ಪರ ವಕೀಲರು ವಾದಿಸಿದ್ದರು.

ಎರಡೂ ಅರ್ಜಿಗಳು ವಜಾ
ಅರ್ಜಿಗಳ ಕುರಿತು ದರ್ಶನ್‌ ಪರ ವಕೀಲರು ಹಾಗೂ ಸರ್ಕಾರಿ ಅಭಿಯೋಜಕರ ನಡುವೆ ಸುದೀರ್ಘ ವಾದ-ಪ್ರತಿವಾದ ನಡೆಯಿತು. ವಿಚಾರಣೆ ಪೂರ್ಣಗೊಳಿಸಿದ 59ನೇ ಸಿಸಿಹೆಚ್‌ ನ್ಯಾಯಾಲಯವು ದರ್ಶನ್‌ ಪರ ಸಲ್ಲಿಸಲಾಗಿದ್ದ ಎರಡೂ ಮಧ್ಯಂತರ ಅರ್ಜಿಗಳನ್ನು ವಜಾಗೊಳಿಸಿದೆ.

ಇದರಿಂದ ದರ್ಶನ್‌ ಪರ ಕಾನೂನು ತಂಡಕ್ಕೆ ಮತ್ತೊಂದು ಹಿನ್ನಡೆಯಾಗಿದೆ. ಮತ್ತೊಂದೆಡೆ, ಪ್ರದೋಷ್‌ ಮಾಫಿ ಸಾಕ್ಷಿಯಾಗಿ ನೀಡುತ್ತಿರುವ ವಿವರವಾದ ಹೇಳಿಕೆ ಪ್ರಕರಣದ ಮುಂದಿನ ವಿಚಾರಣೆಯಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.
Share this story